ಸಿದ್ದಾಪುರ ಪಟ್ಟಣದಿಂದ ಅತ್ಯಂತ ದೂರದಲ್ಲಿದ್ದರೂ ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಮಟ್ಟ ಶಿಕ್ಷಣದಿಂದ ದೂರವಾಗಿಲ್ಲ. ಮಕ್ಕಳಲ್ಲಿ ಪರಿಸರದ ಜ್ಞಾನ ಮೂಡಿಸಲು ವಿಶೇಷ ಪ್ರಯತ್ನ ನಡೆಯುತ್ತಿದೆ. 1964 ರಲ್ಲಿ ಸ್ಥಾಪನೆಯಾದ ನಮ್ಮ ಶಾಲೆಯಲ್ಲಿ ಈಗ 44 ವಿದ್ಯಾರ್ಥಿಗಳಿದ್ದಾರೆ. ತಾಲೂಕು ಕೇಂದ್ರದಿಂದ ಅಂದಾಜು 28 ಕಿ.ಮೀ. ದೂರದಲ್ಲಿದೆ. ಈ ಶಾಲೆಯ ಮುಖ್ಯ ಶಿಕ್ಷಕರಾಗಿ ಶ್ರೀ ದರ್ಶನ ಹರಿಕಾಂತ, ಸಹ ಶಿಕ್ಷಕರಾಗಿ ಕು. ಮೈತ್ರಿ ಹೆಗಡೆ ಹಾಗೂ ಕು. ರಂಜನಾ ಭಂಡಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ಚಂದ್ರಶೇಖರ ಮಾಬ್ಲ ಗೌಡ ಇವರು ಎಸ್.ಡಿ.ಎಮ್.ಸಿ. ಅಧ್ಯಕ್ಷರಾಗಿದ್ದಾರೆ.
ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮದಲ್ಲಿದೆ. ಗ್ರಾಮಸ್ಥರ ನೆರವಿನಿಂದ ಇಲ್ಲಿ 50,000/- ವೆಚ್ಚದಲ್ಲಿ Smಚಿಡಿಣ ಅಟಚಿss ರೂಪಿಸಲಾಗಿದೆ. ನಲಿ-ಕಲಿ ಕೋಣೆಯನ್ನು ಅಗತ್ಯ ಪೀಠೋಪಕರಣದೊಂದಿಗೆ ಹಾಗೂ Smಚಿಡಿಣ ಖಿಗಿ ವ್ಯವಸ್ಥೆಯೊಂದಿದೆ ಸಜ್ಜುಗೊಳಿಸಲಾಗಿದೆ. ಮಕ್ಕಳಿಗೆ ತಮ್ಮ ಗ್ರಾಮದ ಸುತ್ತಲೂ ಇರುವ ಸ್ಥಳಗಳನ್ನು, ವಿಶೇಷತೆಗಳನ್ನು ತಿಳಿಸಿಕೊಡುವ ದೃಷ್ಠಿಯಿಂದ ಚಾರಣವನ್ನು ಆಯೋಜಿಸಲಾಗುತ್ತಿದೆ. ಶಾಲೆಯ ಪಕ್ಕದ ಅಘನಾಶಿನಿ ನದಿ ತೀರದ ತೆಪ್ಪಸಾಲಿನಲ್ಲಿ ಹೊರಸಂಚಾರ ಮತ್ತು ಸ್ಥಳೀಯರೊಂದಿಗೆ ಸೇರಿ ಹೊಳೆಯೂಟವನ್ನು ಏರ್ಪಡಿಸಲಾಗುತ್ತಿದೆ. ಮಕ್ಕಳಲ್ಲಿ ಕೃಷಿ ಬಗ್ಗೆ ಆಸಕ್ತಿ ಬೆಳೆಸಲು ನಡೆಸಿರುವ ಪ್ರಯೋಗ ಮಾರ್ಗದರ್ಶಕವಾಗಿದೆ. ವಿದ್ಯಾರ್ಥಿಗಳು ಪಕ್ಕದ ಊರಿನಲ್ಲಿ ಸ್ವತಃ ಭತ್ತದ ಗದ್ದೆಯಲ್ಲಿ ನಾಟಿ ಮಾಡುತ್ತಾರೆ. ಗದ್ದೆಯ ಭತ್ತದ ಸಸಿಗಳ ಬೆಳವಣಿಗೆಯನ್ನು ಪ್ರತಿ 15 ದಿನಗಳಿಗೊಮ್ಮೆ ವೀಕ್ಷಿಸುತ್ತಾರೆ. ಭತ್ತದ ಕೊಯ್ಲು ಮಾಡಿ, ಕಾಳುಗಳನ್ನು ಬೇರ್ಪಡಿಸುವ ಕೆಲಸದಲ್ಲಿಯೂ ಕೈಜೋಡಿಸುತ್ತಾರೆ. 5 ವರ್ಷಗಳಿಂದ ಮೆಟ್ರಿಕ್ ಸಂತೆ ಅದ್ಧೂರಿಯಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿದ್ದರೂ ಈ ಸಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನವೋದಯ, ಮೊರಾರ್ಜಿ ಶಾಲೆ ಮತ್ತು ಆಳ್ವಾಸ್ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಕೇಂದ್ರಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.