ನಕ್ಷೆಯ ಬಗ್ಗೆ ಕೆಲವು ವಿಷಯಗಳು ನಿನಗೆ ಗೊತ್ತು. ಕೆಳಗೆ ಕೊಟ್ಟಿರುವ ನಕ್ಷೆಯನ್ನು ಗಮನಿಸು. ಊರಿನ ಮಧ್ಯೆ ದೊಡ್ಡ ಆಲದ ಮರವಿದೆ. ಅದನ್ನು ಗುರುತಿಸು.

ಆಲದ ಮರದಿಂದ ಇಲ್ಲಿ ಕೊಟ್ಟ ಸ್ಥಳಗಳು ಯಾವ ದಿಕ್ಕಿನಲ್ಲಿವೆ ಎಂದು ಗುರುತಿಸಿ ಬರೆ.

  1. ಕೆರೆ ___
  2. ಗ್ರಂಥಾಲಯ ___
  3. ಶಾಲೆ ___
  4. ಅಂಚೆ ಕಚೇರಿ ___
  5. ಉದ್ಯಾನವನ ___
  6. ದೇವಸ್ಥಾನ ___
  7. ನ್ಯಾಯಬೆಲೆ ಅಂಗಡಿ ___
  8. ಪಶುಆಸ್ಪತ್ರೆ ___
  9. ಮಸೀದಿ ___
  10. ಚರ್ಚ್ ___
  11. ಆಸ್ಪತ್ರೆ ___
  12. ಬಾವಿ ___

ಕೆಳಗಿನ ಚಿತ್ರದಲ್ಲಿ ನಿನ್ನ ಮನೆಯನ್ನು ತೋರಿಸಲಾಗಿದೆ. ನಿನ್ನ ಮನೆಯ ಸುತ್ತಲೂ ಏನೇನು ಇವೆ ಎಂದು ದಿಕ್ಕಿಗೆ ಅನುಸಾರವಾಗಿ ಬರೆ.

ನಿನ್ನ ಶಾಲೆಯ ಸುತ್ತಲೂ ಏನೇನು ಇವೆ ಎಂಬುದನ್ನು ದಿಕ್ಕಿಗೆ ಅನುಗುಣವಾಗಿ ಬರೆ.
ಪೂರ್ವ ___ ಪಶ್ಚಿಮ ___
ಉತ್ತರ ___ ದಕ್ಷಿಣ ___
ಆಗ್ನೇಯ ___ ನೈರುತ್ಯ ___
ವಾಯವ್ಯ ___ ಈಶಾನ್ಯ ___

ನಿನ್ನ ಶಾಲೆಯಲ್ಲಿರುವ ಕರ್ನಾಟಕ ರಾಜ್ಯದ ಭೂಪಟವನ್ನು ಗಮನಿಸು. ಕೆಳಗೆ ಕೊಟ್ಟ ಸ್ಥಳಗಳು ರಾಜ್ಯದ ಯಾವ ದಿಕ್ಕಿನಲ್ಲಿವೆ ಎಂದು ಬರೆ.
ಅರಬ್ಬೀ ಸಮುದ್ರ ____________ ಆಂಧ್ರಪ್ರದೇಶ ______________
ಮಹಾರಾಷ್ಟ್ರ ___________ ಕೇರಳ ___________

4ನೇ ತರಗತಿಯ ಯಾಸ್ಮಿನ್ ತನ್ನ ಶಾಲೆಯ ಕೊಠಡಿಯ ನಕ್ಷೆ ಬರೆಯುವುದನ್ನು ಕಲಿತಿದ್ದಾಳೆ. ಅವಳ ಅನುಭವವನ್ನು ಕೇಳು.

ಯಾಸ್ಮಿನ್ : ನಮ್ಮ ಟೀಚರ್ ತರಗತಿಯ ಕೊಠಡಿಯ ಉದ್ದ ಮತ್ತು ಅಗಲವನ್ನು ನಮ್ಮ ನಡಿಗೆಯ ಹೆಜ್ಜೆಯಲ್ಲಿ ಅಳೆಯಲು ಹೇಳಿದರು. ಹಾಗೆ ಅಳೆದಾಗ ಕೊಠಡಿಯ ಉದ್ದ ನನ್ನ ನಡಿಗೆ ಹೆಜ್ಜೆಯಲ್ಲಿ ಹನ್ನೆರಡು ಹೆಜ್ಜೆಗಳಿವೆ ಮತ್ತು ಅಗಲ 10 ಹೆಜ್ಜೆಗಳಿವೆ. ನನ್ನ ಎರಡು ಹೆಜ್ಜೆಗಳು ಸುಮಾರು ಒಂದು ಮೀಟರ್‍ಗೆ ಸಮ ಎಂದು ಟೀಚರ್ ಹೇಳಿದರು. ಪ್ರತಿಯೊಬ್ಬರ ಹೆಜ್ಜೆಯಲ್ಲೂ ಸ್ವಲ್ಪ ವ್ಯತ್ಯಾಸವಿರುತ್ತದೆ. ಹೀಗಾಗಿ ಕೆಲವರ ಹೆಜ್ಜೆಗಳು ಸುಮಾರು ಮುಕ್ಕಾಲು ಮೀಟರ್‍ನಷ್ಟೂ ಇರಬಹುದು. ನೀನೂ ನಿನ್ನ ಹೆಜ್ಜೆಯ ಅಳತೆಯನ್ನು ತಿಳಿದುಕೊ. ನಿನ್ನ ಕೊಠಡಿಯೊಂದನ್ನು ನಿನ್ನ ಹೆಜ್ಜೆಯಲ್ಲಿ ಅಳೆದು ಗುರುತು ಹಾಕಿಕೊ. ಇದನ್ನು ಹಾಳೆಯ ಮೇಲೆ ಮೂಡಿಸುವುದು ಹೇಗೆ ಎಂಬುದನ್ನು ನಾನು ಹೇಳಿ ಕೊಡುವೆ. ನೀನು ಅಳೆದ ಕೊಠಡಿಯ ಉದ್ದ 12 ಹೆಜ್ಜೆಗಳು ಅಗಲ 10 ಹೆಜ್ಜೆಗಳು ಎಂದಿಟ್ಟುಕೊಳ್ಳೋಣ.

ಹಾಗೆಯೇ ನಿನ್ನ ಎರಡು ನಡಿಗೆ ಹೆಜ್ಜೆ ಒಂದು ಮೀಟರ್‍ಗೆ ಸಮವಾಗಿದ್ದರೆ
12 ಹೆಜ್ಜೆಗಳು : 6 ಮೀಟರ್
10 ಹೆಜ್ಜೆಗಳು : 5 ಮೀಟರ್
ಅಂದರೆ ಕೊಠಡಿಯ ಉದ್ದ = 6 ಮೀಟರ್
ಕೊಠಡಿಯ ಅಗಲ = 5 ಮೀಟರ್

ಈಗ ಒಂದು ಮೀಟರ್ ಅಳತೆಯನ್ನು ಸ್ಕೇಲಿನಲ್ಲಿ ಒಂದು ಸೆಂಟಿಮೀಟರ್ (ಸೆಂ.ಮೀ.) ಆಗಿ ಪರಿವರ್ತಿಸಿದಾಗ,
6 ಮೀಟರ್ = 6 ಸೆಂ.ಮೀ.(cm)
5 ಮೀಟರ್ = 5 ಸೆಂ.ಮೀ.(cm) ಆಗುತ್ತದೆ.

ಈ ಸೆಂಟಿಮೀಟರ್ ಅಳತೆಯನ್ನು ಹಾಳೆಯಲ್ಲಿ ಮೂಡಿಸು. ಇದೇ ನಿನ್ನ ಕೊಠಡಿಯ ಚೌಕಟ್ಟಿನ ನಕ್ಷೆ.

ಈಗ ಕೊಠಡಿಯಲ್ಲಿರುವ ವಸ್ತುಗಳನ್ನು ಗುರುತಿಸಬೇಕಲ್ಲಾ. ಈ ವಸ್ತುಗಳ ಸ್ಥಳಗಳನ್ನು ನಿಖರವಾಗಿ ಗುರುತಿಸಲು ಮೂಡಿಸಿದ ನಕ್ಷೆಯಲ್ಲಿ ಕೆಳಗೆ ತೋರಿಸಿದಂತೆ ಒಂದು ಸೆಂ.ಮೀ. ಅಂತರದಲ್ಲಿ ಮತ್ತೆ ಗೆರೆಗಳನ್ನು ಹಾಕು.

ಈಗ ಪ್ರತಿಯೊಂದು ಚೌಕಟ್ಟಿಗೆ ಸಂಖ್ಯೆ ಕೊಡು. ಉದ್ದಕ್ಕೆ ಸಂಖ್ಯೆ, ಅಗಲಕ್ಕೆ ಅಕ್ಷರಗಳನ್ನು ಹಾಕು. ಇದರಿಂದ ವಸ್ತುಗಳನ್ನು ಗುರುತಿಸಲು ಸುಲಭವಾಗುತ್ತದೆ. ಆನಂತರ ಆ ಚೌಕಗಳಲ್ಲಿ ಸ್ಥಾನಕ್ಕನುಗುಣವಾಗಿ ತರಗತಿಯಲ್ಲಿರುವ ವಸ್ತುಗಳನ್ನು ಗುರುತಿಸು. ಒಂದು ಉದಾಹರಣೆಯನ್ನು ಇಲ್ಲಿ ತೋರಿಸಿದೆ.

ಯಾಸ್ಮಿನ್ ಹೇಳಿಕೊಟ್ಟಂತೆ ನೀನು ಅಳೆದ ನಿನ್ನ ಶಾಲೆಯ ಅಥವಾ ಮನೆಯ ಕೊಠಡಿಯ ನಕ್ಷೆಯನ್ನು ಹಾಳೆಯಲ್ಲಿ ಮೂಡಿಸು. ಅಲ್ಲಿರುವ ವಸ್ತುಗಳನ್ನು ನಕ್ಷೆಯಲ್ಲಿ ಗುರುತಿಸು.

ಓದಿ-ತಿಳಿ
ನಕ್ಷೆಗಳ ಮೂಲಕ ವಿಶಾಲವಾದ ಪ್ರದೇಶವನ್ನು ಚಿಕ್ಕದಾಗಿ ಮೂಡಿಸಬಹುದು. ನಕ್ಷೆಯ ಚೌಕಟ್ಟುಗಳು ವಸ್ತುಗಳ ಸ್ಥಾನವನ್ನು ನಿಖರವಾಗಿ ತಿಳಿಸಲು ಸಹಾಯ ಮಾಡುತ್ತವೆ.

ಅನ್ವರ್ ತಾಲ್ಲೂಕು ಕಚೇರಿಯನ್ನು ದಾರಿಹೋಕರೊಬ್ಬರಿಗೆ ತೋರಿಸಿದ ರೀತಿ ಹೀಗಿದೆ.
ಮುಖ್ಯರಸ್ತೆಯ ಮಧ್ಯೆ ಗಾಂಧಿವೃತ್ತವಿದೆ. ಅದರ ಪೂರ್ವಕ್ಕೆ ಹೋದರೆ ಬಲ ಭಾಗದಲ್ಲಿ ಮೊದಲು ಹೋಟೆಲ್ ಸಿಗುತ್ತದೆ. ಅದಾದ ಮೇಲೆ ವಿದ್ಯಾರ್ಥಿ ನಿಲಯ, ಇನ್ನೂ ಮುಂದಕ್ಕೆ ಅಂಚೆ ಕಛೇರಿ ಇದೆ. ಆಮೇಲೆ ಶಾಲೆ ಇದೆ. ಅದರ ಪಕ್ಕದಲ್ಲೇ ತಾಲ್ಲೂಕು ಕಚೇರಿ ಇದೆ. ಶಾಲೆಯಿಂದ ಸುಮಾರು ಇಪ್ಪತ್ತು ಮೀಟರ್ ಆಗಬಹುದು. ಹೆಜ್ಜೆಗಳ ಮೂಲಕ ಅಂತರವನ್ನು ಅಳೆದಿದ್ದೇನೆ.

ದಿಕ್ಕು ಮತ್ತು ಭೂಗುರುತುಗಳ ಸಹಾಯದಿಂದ, ಗಾಂಧೀ ವೃತ್ತದಿಂದ ತಾಲ್ಲೂಕು ಕಚೇರಿಯ ಮಾರ್ಗದ ಸರಳ ನಕ್ಷೆಯನ್ನು ಅನ್ವರ್ ತಯಾರಿಸಿದ್ದಾನೆ.

ನಕ್ಷೆಗಳನ್ನು ಬಿಡಿಸಿದ ನಂತರ ನಿನ್ನ ಗೆಳೆಯರೊಂದಿಗೆ ನಕ್ಷೆಗಳನ್ನು ಬದಲಾಯಿಸಿಕೊ. ನಕ್ಷೆಯನ್ನು ನೋಡಿ ನಿನ್ನ ಗೆಳೆಯರ ಮನೆಗೆ ಹೋಗುವ ದಾರಿ, ದಿಕ್ಕು ಮತ್ತು ಭೂಗುರುತುಗಳನ್ನು ತಿಳಿದುಕೊ. ಮಾರ್ಗದ ನಕ್ಷೆಗಳನ್ನು ಭೂಗುರುತುಗಳು ಹಾಗೂ ದಿಕ್ಕುಗಳ ಸಹಾಯದಿಂದ ರಚಿಸಬಹುದು.

ಬಸ್ಸು ಚಲಿಸುವ ಮಾರ್ಗವನ್ನು ಬಾಣದ ಗುರುತಿನಿಂದ ಈ ಸರಳ ನಕ್ಷೆಯಲ್ಲಿ ಗುರುತಿಸಲಾಗಿದೆ. ಬಸ್ಸಿನಲ್ಲಿ ಕುಳಿತು ಪ್ರಯಾಣಿಸುತ್ತಿರುವಾಗ ಕಾಣುವ ಭೂಗುರುತುಗಳನ್ನು ಹೇಳು.

ನಿನಗಿದು ಗೊತ್ತೆ?
* ಎಲ್ಲ ನಕ್ಷೆಗಳೂ ಸೆಂಟಿಮೀಟರ್ ಅಥವಾ ಅಂಗುಲಗಳ ಅಳತೆಯಲ್ಲಿರುತ್ತವೆ.
* ವಿಶ್ವ ಭೂಪಟವೇ ಭೂಮಿಯ ನಕ್ಷೆ.
* ಭೂಪಟದ ಸಹಾಯದಿಂದ ಭೂಮಿಯ ಲಕ್ಷಣಗಳು, ಭೂಮಾರ್ಗಗಳು ಮತ್ತು ಜನನಿಬಿಡ ಪ್ರದೇಶಗಳನ್ನು ತಿಳಿಯಬಹುದು.
* ಊಹಾರೇಖೆಗಳಾದ ಅಕ್ಷಾಂಶ, ರೇಖಾಂಶಗಳು ಭೂಮಿಯ ನಕ್ಷೆಯಲ್ಲಿ ಚೌಕಟ್ಟುಗಳನ್ನು ಮೂಡಿಸಲು ಸಹಾಯಕವಾಗಿವೆ.
* ಹಲವಾರು ವಿಧದ ನಕ್ಷೆಗಳಿವೆ. ಉದಾಹರಣೆಗೆ ಭೌಗೋಳಿಕ, ಪ್ರಾಕೃತಿಕ, ಮಣ್ಣಿನ ನಕ್ಷೆ, ಹವಾಮಾನದ ನಕ್ಷೆ, ರೈಲು ಮಾರ್ಗವನ್ನು ತೋರಿಸುವ ನಕ್ಷೆ ಇತ್ಯಾದಿ.
* ಮೊಟ್ಟ ಮೊದಲ ನಕ್ಷೆಗಳನ್ನು ಈಜಿಪ್ಟಿನ ರಾಜರು ತಮ್ಮ ಆಳ್ವಿಕೆಯಲ್ಲಿರುವ ಪ್ರದೇಶಗಳನ್ನು ತಿಳಿಯಲು ರಚಿಸುತ್ತಿದ್ದರು ಎನ್ನಲಾಗಿದೆ. ಮೊಟ್ಟ ಮೊದಲ ಭೂಮಿಯ ನಕ್ಷೆಯನ್ನು ಗ್ರೀಕ್ ದೇಶದವರು ಕ್ರಿ.ಪೂ. 540ರಲ್ಲೇ ರಚಿಸಿದ್ದರು ಎನ್ನಲಾಗಿದೆ.

Samveda 4th EVS Nakshe kali Dari tili – 4 KM EVS
ನಕ್ಷೆ ಕಲಿ – ದಾರಿ ತಿಳಿ ಪಾಠದ ಪ್ರಶ್ನೋತ್ತರಗಳು #4th standard EVS nakshe kali dari tili question answers
ಪ್ರಶ್ನೋತ್ತರಗಳಿಗಾಗಿ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.