ಶ್ರೀಮತಿ/ಶ್ರೀ ಕುಮುದ ಅನಂತ ಗೌಡ, ಗೋಳಿಮಕ್ಕಿ ಇವರು ತಮ್ಮ ಮಗಳ ಜನ್ಮದಿನದ ಪ್ರಯುಕ್ತ ನಮ್ಮ ಶಾಲೆಗೆ ಧ್ವಜಸ್ತಂಭ ನಿರ್ಮಾಣಕ್ಕೆ ಅಗತ್ಯ ಪರಿಕರಗಳನ್ನು ನೀಡುವುದರ ಮೂಲಕ ಸಂಪೂರ್ಣ ಧ್ವಜಸ್ತಂಭ ಕೊಡುಗೆಯಾಗಿ ನೀಡುತ್ತಿದ್ದಾರೆ. ಈ ಮೂಲಕ ತಮ್ಮ ಮಗಳಾದ ಕು. ಶೃತಿ ಅನಂತ ಗೌಡ ಇವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಶ್ರೀಯುತರ ಕೊಡುಗೆಯನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತ, ತಮ್ಮ ಮಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೋಳಿಮಕ್ಕಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರೂ ಹುಲ್ಕುತ್ರಿ ಶಾಲೆಯ ಮೇಲಿನ ಅಭಿಮಾನವನ್ನು ಪ್ರಶಂಸಿಸುತ್ತ ತಮ್ಮ ಕುಟುಂಬಕ್ಕೆ ಶುಭವನ್ನು ಕೋರುತ್ತಾ, ಕು. ಶೃತಿ ಇವರಿಗೆ ಹೃತ್ಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇವೆ.