ಒಂದು ಕಾಲದಲ್ಲಿ ತನ್ನ ಸ್ವಂತ ತಾಲೂಕಿಗೂ ಸರಿಯಾಗಿ ಪರಿಚಯವಿರದ ಸಿದ್ದಾಪುರ ತಾಲೂಕಿನ ‘ಹುಲ್ಕುತ್ರಿ’ ಎಂಬ ಕುಗ್ರಾಮ, ಇಂದು ಈ ಊರಿನ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ದರ್ಶನ ಹರಿಕಾಂತ ರಾಜ್ಯದ ಪ್ರಖ್ಯಾತ ಇಂಗ್ಲೀಷ್ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್’ನ ಚೇಂಜ್ ಮೇಕರ್-2022 ಪ್ರಶಸ್ತಿ ಸ್ವೀಕರಿಸಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಡೆಕ್ಕನ್ ಹೆರಾಲ್ಟ್ – “ಚೇಂಜ್ ಮೇಕರ್” ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 22 ಜನ ವ್ಯಕ್ತಿಗಳನ್ನು ಪರಿಚಯಿಸುವ ಕಾರ್ಯಕ್ರಮವಾಗಿದೆ. ಇದರಲ್ಲಿ ಹುಲ್ಕುತ್ರಿ ಶಾಲೆಯ ಶಿಕ್ಷಕರಾದ ದರ್ಶನ ಹರಿಕಾಂತ ಅವರೂ ಇದ್ದಾರೆ.
ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಅವರು ತಮ್ಮ ಸ್ವಂತ ಹಣದಿಂದ ಈ ಶಾಲೆಯ ಹೆಸರಿನಲ್ಲಿ ಸ್ಥಾಪಿಸಿದ hulkutrischool.in ವೆಬ್ ಸೈಟ್ ಎಲ್ಲರ ಗಮನಸೆಳೆದಿದೆ. ಕೋವಿಡ್-19 ವೇಳೆಯಲ್ಲಿ ಮಕ್ಕಳ ಕಲಿಕೆಗೆ ಈ ವೆಬ್ ಸೈಟ್ ತುಂಬಾ ಸಹಕಾರಿಯಾಗಿತ್ತು. ಈ ವೆಬ್ ಸೈಟ್ ರಾಜ್ಯದ ಅನೇಕ ಶಿಕ್ಷಕರಿಗೆ ಸಹಕಾರಿಯಾಗಿದೆ. ಡಿಜಿಟಲ್ ಕಲಿಕೆ ರೂಪದಲ್ಲಿ ಪಠ್ಯಕ್ರಮ ಹೊಂದಿದ್ದು ರಾಜ್ಯದಲ್ಲೆ ಮೊದಲ ಪ್ರಯೋಗವಾಗಿದೆ. ಈ ಸಂಗತಿಯನ್ನು ರಾಜ್ಯದ ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್” ಗಮನಿಸಿತ್ತು. ಈ ಕುರಿತು ಕಳೆದ ಸೆಪ್ಟೆಂಬರ್ 2021ರಲ್ಲಿ ತನ್ನ ಸ್ಪೆಕ್ಟ್ರಮ್ ಕಾಲಂನಲ್ಲಿ ಎ ರೊಸೋರ್ಸಫುಲ್ ವೆಬ್ ಸೈಟ್ ಫೊರ್ ಎ ಯೂನಿಕ್ ಸ್ಕೂಲ್ (A resourceful website for a unique school) ಎಂಬ ವರದಿಯನ್ನು ಪ್ರಕಟಿಸಿತ್ತು. ಇದು ಸಿದ್ದಾಪುರ ತಾಲೂಕಿನಲ್ಲಿರುವ ಹುಲ್ಕುತ್ರಿ ಶಾಲೆಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತು.
ಇದಾದ ಎರಡು ತಿಂಗಳ ನಂತರ ಶಾಲಾ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ, 2022ನೇ ಸಾಲಿನ “Deccan Herald Changemakers Award” ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಸಮಗ್ರ ವರದಿಗಾಗಿ ನಿಮ್ಮನ್ನ ಸಂಪರ್ಕಿಸಲಿದ್ದೇವೆ ಎಂದು ತಿಳಿಸಿದ್ದರು. ಅದರಂತೆ ನವೆಂಬರ್ ತಿಂಗಳಲ್ಲಿ ಹುಬ್ಬಳ್ಳಿಯಿಂದ ಡೆಕ್ಕನ್ ಹೆರಾಲ್ಡ್ ನ ಹಿರಿಯ ಜರ್ನಲಿಸ್ಟ್ ಗಳಾದ ಶ್ರೀಮತಿ ದಿವ್ಯಶ್ರೀ ಮುದಕವಿ ಹಾಗೂ ಶ್ರೀ ಪವನಕುಮಾರ್ ಹಾಗೂ ಫೋಟೋಗ್ರಾಫರ್ ಶ್ರೀ ಗೋವಿಂದರಾಜ ಜವಳಿ ಇವರು ಹುಲ್ಕುತ್ರಿ ಶಾಲೆಗೆ ಆಗಮಿಸಿ ದರ್ಶನ ಹರಿಕಾಂತ ಅವರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ 18 ವರ್ಷಗಳ ಸಾಧನೆಯ ಕುರಿತು ಸಂದರ್ಶನ ನಡೆಸಿತ್ತು.
ಇದಾದ ಒಂದು ವಾರದ ನಂತರ ಬೆಂಗಳೂರಿನಿಂದ ವಿಡಿಯೋ ಜರ್ನಲಿಸ್ಟ್ ತಂಡ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿತು. ವಿಡಿಯೋ ಜರ್ನಲಿಸ್ಟ್ ಗಳಾದ ಶ್ರೀ ಪ್ರದೀಪ ಕೆ.ಎಸ್. ಬೆಂಗಳೂರು ಹಾಗೂ ಶ್ರೀ ರಜತ ಶರ್ಮಾ, ಬೆಂಗಳೂರು ಇವರು ಶಾಲೆಯ ದೈನಂದಿನ ಚಟುವಟಿಕೆಗಳು, ಶಾಲೆಯ ಕಾರ್ಯಕ್ರಮಗಳಾದ ಕೃಷಿ ಅಧ್ಯಯನ, ಹೊರಸಂಚಾರ, ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳು ಶಾಲಾ ವೆಬ್ ಸೈಟ್ ನ ಪಾಠ ವೀಕ್ಷಿಸಲು ಬೆಟ್ಟ ಏರಿ ಪಾಠ ಕಲಿಯುತ್ತಿರುವುದು, ವಿದ್ಯಾರ್ಥಿಗಳ, ಶಿಕ್ಷಕರ ಸಂದರ್ಶನ ಪಡೆದಿದ್ದರು.
ಇದೀಗ ಲೇಖನದ ವರದಿಯನ್ನು ಹೊಸ ವರ್ಷಕ್ಕೆ ಬಿಡುಗಡೆಗೊಳಿಸಿದರೆ, ಚಿತ್ರೀಕರಿಸಿದ ಪ್ರೋಮೋ ವಿಡಿಯೋವನ್ನೂ ಹಾಗೂ ಸಾಕ್ಷಾಚಿತ್ರವನ್ನು ಡೆಕ್ಕನ್ ಹೆರಾಲ್ಡ್ ನ ಯ್ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ.
ದಿನಾಂಕ 24-02-2022 ರಂದು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಎಲ್ಲಾ ಸಾಧಕರಿಗೆ ಪ್ರಶಸ್ತಿ ಫಲಕವನ್ನು ನೀಡಿ ಗೌಡವಿಸಿದೆ.
ಚೇಂಜ್ ಮೇಕರ್ ಅವಾರ್ಡ್ ಗೆ ಆಯ್ಕೆಯಾಗಿರುವುದಕ್ಕೆ ಶಾಲೆಯ ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಈ ಶಾಲೆ ಹಾಗೂ ಶಿಕ್ಷಕರನ್ನು ಗುರುತಿಸಿದ್ದಕ್ಕೆ ಡೆಕ್ಕನ್ ಹೆರಾಲ್ಡ್ ಗೆ ಶಾಲಾ ಶಿಕ್ಷಕರು ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
DH Changemakers | Darshan Harikant | Headmaster Takes Hulkutri Government School Online
DH Changemakers | 22 watch in 2022 | Felicitation Ceremony
DH Changemakers | 22 to watch in 22 | LIVESTREAM FROM BENGALURU