ಕಲಿಕೆಯ ನೈಜ ಅನುಭವ ಹಾಗೂ ಪರಿಸರ ಕುರಿತು ತಿಳುವಳಿಕೆ

ಕಲಿಕೆಯ ನೈಜ ಅನುಭವ ಹಾಗೂ ಮಕ್ಕಳಿಗೆ ಪರಿಸರ ಕುರಿತು ತಿಳುವಳಿಕೆ ಹಾಗೂ ಮಹತ್ವವನ್ನು ತಿಳಿಸುವ ಉದ್ದೇಶದಿಂದ ದಿನಾಂಕ 26-08-2023ರ ಶನಿವಾರದಂದು ಚಾರಣ ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕರಾದ ಕು. ಮೈತ್ರಿ ಹೆಗಡೆ ರವರ ನೇತೃತ್ವದಲ್ಲಿ 1 ರಿಂದ 7ನೇ ತರಗತಿಯ ಎಲ್ಲಾ ಮಕ್ಕಳು ಹಾಗೂ ಶಾಲಾ ಶಿಕ್ಷಕರೊಂದಿಗೆ ಚಾರಣ ಕೈಗೊಳ್ಳಲು ಉತ್ಸುಕರಾಗಿದ್ದೆವು.

ಚಾರಣಕ್ಕಾಗಿ ‘ದಂಟ್ಲಗುಡ್ಡ’ ಸ್ಥಳವನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ಶಾಲಾ ಪ್ರಾರ್ಥನೆ ಮುಗಿಸಿ 10.00 ಗಂಟೆಗೆ ಹೊರಟೆವು. ಹುಲ್ಕುತ್ರಿಯ ಶ್ರೀ ಜನಾರ್ಧನ ತಿಮ್ಮ ಗೌಡ ಇವರು ಕಾಡಿನಲ್ಲಿರುವ ವಿವಿಧ ಜಾತಿಯ ಮರ-ಗಿಡಗಳ ಪರಿಚಯ ಮಾಡಿಕೊಡಲು ನಮ್ಮೊಂದಿಗೆ ಆಗಮಿಸಿದ್ದರು. ಸಾಗುವ ಮಾರ್ಗದಲ್ಲಿ ಸಿಗುವಂತಹ ಮರ, ಬಳ್ಳಿ, ಪೊದೆ, ಕೀಟ, ವಿವಿಧ ರೀತಿಯ ಗೂಡುಗಳು, ಅಣಬೆ ಹೀಗೆ ಹತ್ತು ಹಲವು ಬಗೆಯ ಪರಿಸರದ ಸದಸ್ಯರ ಪರಿಚಯ ಮಡಿಕೊಡುತ್ತಾ ಮಕ್ಕಳಲ್ಲಿ ಕುತೂಹಲವನ್ನು ಹೆಚ್ಚಿಸಿದರು.

ನಾವು ಹೋದಂತ ಪ್ರದೇಶದಲ್ಲಿ ಕಲ್ಲುಹೂವುಗಳ ಪ್ರಮಾಣ ಅತ್ಯಧಿಕವಾಗಿತ್ತು. ಇದು ಆ ಪ್ರದೇಶವು ಅತಿ ಕಡಿಮೆ ಮಾಲಿನ್ಯ ಅಥವಾ ಮಾಲಿನ್ಯ ರಹಿತವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂಬ ಸಂಗತಿಯನ್ನು ಮಕ್ಕಳಿಗೆ ತಿಳಿಕೊಡಲಾಯಿತು.

ಕಲ್ಲುಹೂವು ಸಸ್ಯ

ಕಲ್ಲುಹೂವು

ಗೆದ್ದಲುಗೂಡು, ಇರುವೆ ಗೂಡು, ಚೇಳಿನ ಹೊರೆ, ಕಣಜದ ಗೂಡು, ಪಕ್ಷಿಗಳ ಗೂಡು, ಚಗಳಿ ಇರುವೆಯ ಗೂಡು ಹೀಗೆ ವಿವಿಧ ಜೀವಿಗಳ ವಾಸಸ್ಥಳಗಳನ್ನು ತೋರಿಸಲಾಯಿತು.

ಬಿಕ್ಕೆ, ಮುರುಗಲು, ಉಪ್ಪಗೆ, ನೆಲ್ಲಿ, ಹಲಸು, ಹೆಬ್ಬಲಸು, ನುರುಕಲು, ಪರಗಿ, ಮುಳ್ಳು ಹಣ್ಣು, ಮಾವಿ ಇತ್ಯಾದಿ ಕಾಡಿನ ಹಣ್ಣುಗಳ ಸಸ್ಯಗಳನ್ನು ಪರಿಚಯ ಹಾಗೂ ಅವು ಹಣ್ಣು ಬಿಡುವ ಕಾಲವನ್ನು ತಿಳಿಸಲಾಯಿತು.

ಬೀಟೆ, ಗೋರಬಾಳೆ, ಬುರಲು, ಕರಿವಾಳ, ಶೀಗೆ ಬಳ್ಳಿ, ಬನಾಟೆ, ಬಸರಿ ಮರ, ಕಣಗಿಲೆ, ಹೊನ್ನೆ, ಮತ್ತಿ, ಕರೆಕುಂಚ, ವಾಟೆ, ಜಂಬೆ, ಪಿಳ್ಳೆ, ರೆದ್ದುಂಬೆ, ಗರಗತ್ತಿ, ಗುಳುಮಾವು, ಹುಪ್ಪದ ಮರ, ಬೈನೆ, ಮಾಲೆಮಟ್ಟಿ, ಬಿಳೆಮಾಸೆ, ಗೋಬಾಳೆ, ಗೋದಲು ಮರ, ಕೆಂಪು ನೆಲ್ಲಿ, ತಾರಿಮರ, ಚರಿಗೋಳಿ, ಹೇದಾಗಲು, ಹೊಳೆಮತ್ತಿ, ಪತ್ರೆಮರ, ಬೆಳ್ಳಟ್ಟೆ, ಆಲಮಟ್ಟಿ, ಬಿದಿರು, ಅಪ್ಪೆಮರ, ಗೋಡೆರಲು, ಅತ್ತಿಮರ, ಸಾಲುಧೂಪ, ತೋರಗಲು, ಕಣಬೆಬಳ್ಳಿ, ರಜಲು ಮರ, ಅರಿಶಣದ ಎಲೆ, ಸುರಗಿ ಮರ, ಕಾಡುಸಂಪಿಗೆ, ಅಚರಿ, ನಾರು ಗಿಡ, ಅಂಕಲೆ ಮರ, ಕಲ್ಲು ಹೂ, ಅರಳಿಮರ, ಕಾರೆ ಗಿಡ, ಮುಳ್ಳು ಹಣ್ಣು, ಗಿಡ ನೆಲ್ಲಿ, ಬೀಟೆ ಮರ, ನುರುಕಲು ಮರ, ಹುಣಗಲು, ಕಕ್ಕೆಗಿಡ, ಕಾಡುಅಮಟೆ, ಬಂಗಣೆ, ಹಣಗೇರಿ, ಗೋಣಗಲು, ಡದಸಲು, ಬಣಗಿ, ಕವಲು ಮರ, ಮುರಗಲು, ನೇರಲು, ನೆರ್ತೆ, ನೇರಳೆ ಮರ ಹೀಗೆ ಸುಮಾರು 70 ಜಾತಿಯ ಮರಗಳು ಹಾಗೂ ಕೆಲವು ಮರಗಳ ಪ್ರಯೋಜನವನ್ನು ಮಾರ್ಗದರ್ಶಕರಾಗಿ ಆಗಮಿಸಿದ್ದ ಶ್ರೀ ಜನಾರ್ಧನ ತಿಮ್ಮ ಗೌಡ ರವರು ತಿಳಿಸಿಕೊಟ್ಟರು.

ಶಾಲಾ ಮಕ್ಕಳ ಚಾರಣ 2023-24