ತಾವೇ ನಾಟಿ ಮಾಡಿದ ಗದ್ದೆಯನ್ನು ಕೊಯ್ಲ ಮಾಡುವುದರ ಮೂಲಕ ಕೃಷಿ ಅಧ್ಯಯನದ ಭಾಗವಾಗಿ ಭತ್ತದ ಕೃಷಿ ಕುರಿತು ಸಂಪೂರ್ಣ ಅನುಭವವನ್ನು ಹುಲ್ಕುತ್ರಿ ಶಾಲಾ ಮಕ್ಕಳು ಪಡೆದರು.

ಆಗಸ್ಟ್ ತಿಂಗಳಲ್ಲಿ ಮಕ್ಕಳೇ ಗದ್ದೆ ನಾಟಿ ಮಾಡಿ ಕೃಷಿ ಅಧ್ಯಯನವನ್ನು ಪ್ರಾರಂಭಿಸಿದ್ದರು. 6 ಮತ್ತು 7ನೇ ತರಗತಿಯ ಆಸಕ್ತ 13 ವಿದ್ಯಾರ್ಥಿಗಳು ಗದ್ದೆ ಕೊಯ್ಲು ಕಾಯ೯ದಲ್ಲಿ ಪಾಲ್ಗೊಂಡು ಅಂದಾಜು 4 ಗುಂಟೆ ಕ್ಷೇತ್ರವನ್ನು 1 ತಾಸಿನಲ್ಲಿ ಕೊಯ್ದು ಕೃಷಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಸ್ಥಳದಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಸುರೇಶ ಬಂಗಾಯ೯ ಗೌಡ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಗದ್ದೆಯ ಮಾಲಿಕರಾದ ಶ್ರೀ ನಿತ್ಯಾನಂದ ಕನ್ನ ಗೌಡ ಇವರು ಮಕ್ಕಳಿಗೆ ಕತ್ತಿ ಹಿಡಿಯುವ ವಿಧಾನ, ಪೈರನ್ನು ಹದೆ ಹಾಕುವ ವಿಧಾನ ತಿಳಿಸಿಕೊಟ್ಟರು. ಮುಖ್ಯ ಶಿಕ್ಷಕರಾದ ದರ್ಶನ ಹರಿಕಾಂತ ಮಕ್ಕಳ ಜೊತೆಗಿದ್ದರು.

https://www.facebook.com/share/v/pW7sdq26JQfCLQWS/?mibextid=jmPrMh

ಕೃಷಿ ಅಧ್ಯಯನದ ಕುರಿತು ವರದಿ

https://www.news18.com/education-career/students-grow-and-harvest-paddy-as-part-of-curriculum-in-this-karnataka-village-school-8712029.html

ಕೃಷಿ ಅಧ್ಯಯನದ ಕುರಿತು ವರದಿ