ಕಳೆದ ಆಗಸ್ಟ್ ತಿಂಗಳಲ್ಲಿ ಈ ವಿದ್ಯಾರ್ಥಿಗಳು ಶಾಲೆಯ ಪಕ್ಕದ ಊರಾದ ಹೇಮಜಿನಿಯ ಲೋಕೇಶ ಪದ್ಮನಾಭ ಗೌಡ ಇವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದ್ದರು. ಇದೀಗ ತಾವೇ ನಾಟಿ ಮಾಡಿದ ಗದ್ದೆಯನ್ನು ಕೊಯ್ಲು ಮಾಡುವ ಮೂಲಕ ಭತ್ತದ ಗದ್ದೆಯ ಸಂಪೂರ್ಣ ಅನುಭವ ಪಡೆದರು.

ಅಂದಾಜು 8 ಗುಂಟೆ ಭತ್ತದ ಕ್ಷೇತ್ರದಲ್ಲಿ ಶಾಲೆಯ ಆಸಕ್ತ 16 ವಿದ್ಯಾರ್ಥಿಗಳು ಒಂದುವರೆ ತಾಸಿನಲ್ಲಿ ಕೊಯ್ಲು ಮಾಡುವ ಮೂಲಕ ಕೃಷಿ ಕಾರ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

ಸ್ಥಳದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಸುರೇಶ ಬಂಗಾರ್ಯ ಗೌಡ ಇವರು ಗದ್ದೆಗೆ ಪೂಜೆ ಸಲ್ಲಿಸಿ ದೀಪ ಬೆಳಗಿದರು. ನಂತರ ಮಕ್ಕಳಿಗೆ ಕತ್ತಿ ಹಿಡಿಯುವ ರೀತಿ ಹಾಗೂ ಪೈರನ್ನು ವ್ಯವಸ್ಥಿತವಾಗಿ ಇಡುವ ಪದ್ಧತಿಯನ್ನು ತಿಳಿಸಿ ಕೊಟ್ಟರು. ಗದ್ದೆಯ ಮಾಲಿಕರಾದ ಲೋಕೇಶ ಪದ್ಮನಾಭ ಗೌಡ ಇವರ ಮಕ್ಕಳ ಜೊತೆಗಿದ್ದು ಪ್ರೋತ್ಸಾಹಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ದರ್ಶನ ಹರಿಕಾಂತ ಸೂಕ್ತ ಮಾರ್ಗದರ್ಶನ ನೀಡಿದರು.

*******