ಕ್ಷೇತ್ರ ಗಣಿತ – ಅಧ್ಯಾಯ-10
ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.
ಸುತ್ತಳತೆ
ಆಯತದ ಸುತ್ತಳತೆ
ನಿಯಮಿತ ಆಕೃತಿಗಳ ಸುತ್ತಳತೆ.
ವಿಸ್ತೀರ್ಣ
ಆಯತದ ವಿಸ್ತೀರ್ಣ
ವರ್ಗದ ವಿಸ್ತೀರ್ಣ
ಆವೃತ ಆಕೃತಿಯ ಸೀಮಾರೇಖೆಯ ಮೇಲೆ ಒಂದು ಸುತ್ತು ಬರುವಾಗ ಕ್ರಮಿಸಿದ ಹಾದಿಯ ದೂರವೇ ಸುತ್ತಳತೆ.
ಆಯತದ ಸುತ್ತಳತೆ = ಉದ್ದ + ಅಗಲ + ಉದ್ದ + ಅಗಲ
ಆಯತದ ಸುತ್ತಳತೆ = 2 x (ಉದ್ದ + ಅಗಲ)
ವರ್ಗದ ಸುತ್ತಳತೆ = 4 x ಬಾಹುವಿನ ಉದ್ದ
ಸಮಬಾಹು ತ್ರಿಭುಜದ ಸುತ್ತಳತೆ = 3x ಬಾಹುವಿನ ಉದ್ದ
ವರ್ಗದ ಸುತ್ತಳತೆ = 4x ಒಂದು ಬಾಹುವಿನ ಉದ್ದ
ಆಕೃತಿಯನ್ನು ಆವರಿಸಲು ಬೇಕಾಗಿರುವ ಸೆಂಟಿಮೀಟರ್ ವರ್ಗಗಳ ಸಂಖ್ಯೆಯು ಆ ಆಕೃತಿಯ ವಿಸ್ತೀರ್ಣ.
ಆಯತದ ವಿಸ್ತೀರ್ಣ = ಉದ್ದ x ಅಗಲ
ವರ್ಗದ ವಿಸ್ತೀರ್ಣ = ಬಾಹು x ಬಾಹು
ಸಂವೇದ ವಿಡಿಯೋ ಪಾಠಗಳು
ಅಭ್ಯಾಸಗಳು
ನಾವೇನು ಚರ್ಚಿಸಿದೆವು?
- ಸುತ್ತಳತೆ ಎಂದರೆ ಆವೃತ ಆಕೃತಿಯ ಸೀಮಾರೇಖೆಯ ಸುತ್ತ ಕ್ರಮಿಸಿದ ದೂರ, ನಾವು ಆಕೃತಿಯನ್ನು ಒಂದು ಪೂರ್ಣಸುತ್ತ ಹಾಕುವುದು.
- (a) ಅಯತದ ಸುತ್ತಳತೆ = 2 x (ಉದ್ದ + ಅಗಲ)
(b) ವರ್ಗದ ಸುತ್ತಳತೆ = 4 x ಅದರ ಒಂದು ಬಾಹುವಿನ ಉದ್ದ
(c) ಸಮಬಾಹು ತ್ರಿಭುಜದ ಸುತ್ತಳತೆ = 3 x ಒಂದು ಬಾಹುವಿನ ಉದ್ದ - ಚಿತ್ರದಲ್ಲಿನ ಎಲ್ಲಾ ಬಾಹುಗಳು ಮತ್ತು ಕೋನಗಳು ಪರಸ್ಪರ ಸಮವಾಗಿದ್ದರೆ ಅದನ್ನು ನಿಯಮಿತ ಆವೃತ
ಆಕೃತಿ ಎನ್ನುತ್ತೇವೆ. - ಅವೃತ ಆಕೃತಿಯು ಆವರಿಸಿ ಕೊಂಡಿರುವ ಮೇಲ್ಮೈ ಪ್ರದೇಶವನ್ನು ವಿಸ್ತೀರ್ಣ ಎನ್ನುತ್ತೇವೆ.
- ಚಿತ್ರದ ವಿಸ್ತೀರ್ಣವನ್ನು ವರ್ಗದ ಕಾಗದದ ಸಹಾಯದಿಂದ ಕಂಡುಹಿಡಿಯುವ ಸಂದರ್ಭದಲ್ಲಿ ಈ ಕೆಳಗಿನ
ಅಂಶಗಳನ್ನು ಅಳವಡಿಸಿಕೊಳ್ಳಬೇಕು.
(a) ಆವರಿಸಿದ ಭಾಗದ ವಿಸ್ತೀರ್ಣವು ಅರ್ಧವರ್ಗಕ್ಕಿಂತ ಕಡಿಮೆ ಇದ್ದರೆ ಅದನ್ನು ಪರಿಗಣಿಸುವುದಿಲ್ಲ.
(b) ಆವರಿಸಿದ ಭಾಗದ ವಿಸ್ತೀರ್ಣವು ಅರ್ಧ ವರ್ಗಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಒಂದು ವರ್ಗ ಎಂದು
ಎಣಿಕೆಗೆ ಪರಿಗಣಿಸಬೇಕು.
(c) ಆವರಿಸಿದ ಭಾಗ ನಿರ್ದಿಷ್ಟವಾಗಿ ಅರ್ಧ ವರ್ಗವನ್ನು ಒಳಗೊಂಡಿದ್ದರೆ ಆಗ ಅದನ್ನು 12
ಚದರ ಮೂಲಮಾನ ಎಂದು ಪರಿಗಣಿಸಬೇಕು.
* * * * * * * * *