ತಾಲೂಕ ಹಾಗೂ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ 2020-21

ತಾಲೂಕ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟವು ಸಿದ್ದಾಪುರದ ನೆಹರು ಮೈದಾನದಲ್ಲಿ ಫೆಬ್ರುವರಿ 6 ಮತ್ತು 7 ರಂದು ನಡೆದಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಸಹ ಶಿಕ್ಷಕಿಯಾದ ಕು. ರಂಜನಾ ಕೃಷ್ಣ ಭಂಡಾರಿ ಇವರು ವೈಯಕ್ತಿಕ ವಿಭಾಗದಲ್ಲಿ 200 ಮೀ. ಓಟ ಪ್ರಥಮ, ಉದ್ದ ಜಿಗಿತ ಪ್ರಥಮ, ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಗುಂಪಿನಲ್ಲಿ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.

ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಕು. ರಂಜನಾ ಕೃಷ್ಣ ಭಂಡಾರಿ
ಕು. ರಂಜನಾ ಕೃಷ್ಣ ಭಂಡಾರಿ – ಸಹಶಿಕ್ಷಕಿ ಸ.ಹಿ.ಪ್ರಾ. ಶಾಲೆ, ಹುಲ್ಕುತ್ರಿ
ತಾಲೂಕು ಮಟ್ಟದಲ್ಲಿ ಸಾಧನೆ

ದಿನಾಂಕ 12-02-2021ರಂದು ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ 200 ಮೀ. ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ತಾಲೂಕಿಗೆ ಹಾಗೂ ಹುಲ್ಕುತ್ರಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರ ಕ್ರೀಡಾ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ. ಸಮಿತಿ, ಶಾಲಾ ಮಕ್ಕಳು, ಮಕ್ಕಳ ಪಾಲಕ-ಪೋಷಕರು ಹಾಗೂ ಹಾವಿನಬೀಳು ಗ್ರಾಮದ ನಾಗರಿಕರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತ, ರಾಜ್ಯ ಮಟ್ಟದಲ್ಲಿಯೂ ನಿಮ್ಮಿಂದ ಉತ್ತಮ ಫಲಿತಾಂಶ ಬರಲೆಂದು ಹಾರೈಸುತ್ತೇವೆ.

ಜಿಲ್ಲಾ ಮಟ್ಟದಲ್ಲಿ 200 ಮೀ. ಓಟ ಪ್ರಥಮ ಹಾಗೂ ಉದ್ದ ಜಿಗಿತ ದ್ವಿತೀಯ
ಜಿಲ್ಲಾ ಮಟ್ಟದಲ್ಲಿ ಸಾಧನೆ