ಈ ಅಧ್ಯಾಯವನ್ನು ಕಲಿತ ನಂತರ ನೀನು : * ವಿವಿಧ ತೂಕದ ಅಳತೆಗಳನ್ನು ಗುರ್ತಿಸುವೆ, * ತಕ್ಕಡಿಯ ಬಳಕೆ ಕ್ರಮವನ್ನು ತಿಳಿಯುವೆ, * ತೂಕದ ಅಳತೆಯ ವಿವಿಧ ಮೂಲಮಾನಗಳನ್ನು ಅರಿಯುವೆ, * ಕಿಲೋಗ್ರಾಂ ನ್ನು ಗ್ರಾಂ ಗೆ ಪರಿವರ್ತಿಸುವೆ, * ತೂಕದ ಅಳತೆಯ ಸಂಕಲನ ಮತ್ತು ವ್ಯವಕಲನವನ್ನು ಮಾಡುವೆ, * ತೂಕದ ನಿಖರವಾದ ಅಳತೆ ಮತ್ತು ಅಂದಾಜು ಅಳತೆ ಮಾಡುವ ವಿಧಾನವನ್ನು ಕಲಿಯುವೆ.