ರಾಷ್ಟ್ರದ ಸ್ವಾಭಿಮಾನ ಸಂಕೇತವಾದ ಧ್ವಜದಕಟ್ಟೆಯ ಉದ್ಘಾಟನೆಯ ಕಾರ್ಯಕ್ರಮವು ನಮ್ಮ  ಶಾಲೆಯಲ್ಲಿ ದಿನಾಂಕ 14-04-2022ರ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ನಡೆಯಿತು.

ಗೋಳಿಮಕ್ಕಿಯ ಶ್ರೀ ಅನಂತ ಕೃಷ್ಣ ಗೌಡ ಇವರ ಮಗಳ ಹುಟ್ಟುಹಬ್ಬದ ಪ್ರಯುಕ್ತ ಧ್ವಜದ ಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಗಳನ್ನು ನೀಡಿದ್ದರು. ಇದರೊಂದಿಗೆ ರಸ್ತೆ ಗುತ್ತಿಗೆದಾರರ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸುಂದರ ಧ್ವಜದ ಕಟ್ಟೆ ನಿರ್ಮಿಸಿಕೊಟ್ಟಿದ್ದಾರೆ.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಸಂವಿಧಾನ ಶಿಲ್ಪಿಯಾದ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ನಂತರ ನಿವೃತ್ತ ಯೋಧರಾದ ಶ್ರೀ ಸುರೇಶ ಎಮ್. ಗೌಡ, ಸಾಗರ ಹಾಗೂ ಅನಂತ ಕೃಷ್ಣ ಗೌಡ ಕುಟುಂಬದವರು ನೂತನ ನೂತನ ಧ್ವಜಸ್ತಂಭವನ್ನು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ ಸಹಕರಿಸಿದ ಹಾಗೂ ಶಾಲೆಗೆ ಕೊಡುಗೆನೀಡಿದ ಗಣ್ಯರನ್ನು ನೆನಪಿಸುತ್ತ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹುಲ್ಕುತ್ರಿಯ ಬಂಗಾರ್ಯ ದ್ಯಾವಾ ಗೌಡ ಕುಟುಂಬದವರು ಶಾಲಾ ಶೈಕ್ಷಣಿಕ ಕಾರ್ಯಕ್ಕೆ ಲ್ಯಾಪ್ ಟಾಪ್ ಕೊಡುಗೆಯಾಗಿ ನೀಡಿದರು. ನಂತರ ವಿವಿಧ ಸಹಪಠ್ಯಚಟುವಟಿಕೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ,  ಮಾಜಿ ತಾಲೂಕ ಪಂಚಾಯತ ಉಪಾಧ್ಯಕ್ಷರಾದ ಶ್ರೀ ಪ್ರಸನ್ನ ಹೆಗಡೆ, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ದಿವಾಕರ ನಾಯ್ಕ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಸುರೇಶ ಬಂಗಾರ್ಯ ಗೌಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿ ಮಂಜುನಾಥ ಗೌಡ, ಶ್ರೀ ವೆಂಕಟೇಶ ಭಟ್, ಶ್ರೀ ಗಿರೀಶ ಶೇಟ್ ಆಲ್ಮನೆ, ನಿವೃತ್ತ ಯೋಧರಾದ ಶ್ರೀ ಸುರೇಶ ಎಮ್. ಗೌಡ, ಶ್ರೀ ಅನಂತ ಕೃಷ್ಣ ಗೌಡ, ಕು. ಶೃತಿ ಗೌಡ, ಶ್ರೀಮತಿ ನೇತ್ರಾವತಿ ಗೌಡ, ಶ್ರೀ ಎಮ್.ಟಿ. ಗೌಡ ಕಿಲವಳ್ಳಿ, ಶ್ರೀಮತಿ ಕನ್ನೆ ಬಂಗಾರ್ಯ ಗೌಡ, ಹುಲ್ಕುತ್ರಿ, ಶ್ರೀ ಅಣ್ಣಪ್ಪ ಭೈರ್ಯ ಗೌಡ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಸ್ವಾಗತಿಸಿದರು. ಮೈತ್ರಿ ಹೆಗಡೆ ಹಾಗೂ ಅನ್ನಪೂರ್ಣ ಗೌಡ ಇವರು ನಿರ್ವಹಿಸಿದರು.