ಹುಲ್ಕುತ್ರಿಯಲ್ಲಿ ಉದ್ಘಾಟನೆಗೊಂಡ ನಿಸರ್ಗ ಕಲಿಕಾ ಕಾನು ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಸಿದ್ದಾಪುರದ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಕಲಿಕಾ ಕಾನು ಉದ್ಘಾಟಿಸಲಾಯಿತು. ಶಾಲೆಯ ಪಕ್ಕದ ಕಾಡಿನಲ್ಲಿ ಪರಿಸರ ಅಧ್ಯಯನದಲ್ಲಿನ ಪಾಠಗಳನ್ನು ಪರಿಸರದ ಜೊತೆ ಕಲಿಯುವಂತೆ ರೂಪಿಸಲಾದ ಪಠ್ಯಾಧಾರಿತ ನಿಸರ್ಗ ಕಲಿಕಾ ಕಾನನ್ನು ಕ್ಯಾದಗಿ ವಲಯ ಅರಣ್ಯಾಧಿಕಾರಿಗಳಾದ...

” ಶ್ವೇತಪುರ” ಬಿಳಗಿಯ ಕ್ಷೇತ್ರ ಅಧ್ಯಯನ ನಡೆಸಿದ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳು

ಕ್ಷೇತ್ರ ಅಧ್ಯಯನದ ಅಂಗವಾಗಿ ಸೋವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಿಳಗಿ ಸಂಸ್ಥಾನದ ಶ್ವೇತಪುರದ ವಾಸ್ತುಶಿಲ್ಪ ಹಾಗೂ ಪುರಾತನ ಸ್ಥಳಗಳನ್ನು ತಿಳಿದುಕೊಂಡರು. ಗವಿಬಾವಿ (ಗೋಲಬಾವಿ), ದಾಡೇಗಲ್ಲ ಕೇರಿಯ ವಿರೂಪಾಕ್ಷ ದೇವಾಲಯ, ಅಗ್ರಹಾರದಲ್ಲಿರುವ ವಾದಿರಾಜ ಮಠ ಹಾಗೂ ಶ್ರೀ...

ಗದ್ದೆ ಕೊಯ್ಲ ಮಾಡಿ ಸಂಭ್ರಮಿಸಿದ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳು

ತಾವೇ ನಾಟಿ ಮಾಡಿದ ಗದ್ದೆಯನ್ನು ಕೊಯ್ಲ ಮಾಡುವುದರ ಮೂಲಕ ಕೃಷಿ ಅಧ್ಯಯನದ ಭಾಗವಾಗಿ ಭತ್ತದ ಕೃಷಿ ಕುರಿತು ಸಂಪೂರ್ಣ ಅನುಭವವನ್ನು ಹುಲ್ಕುತ್ರಿ ಶಾಲಾ ಮಕ್ಕಳು ಪಡೆದರು. ಆಗಸ್ಟ್ ತಿಂಗಳಲ್ಲಿ ಮಕ್ಕಳೇ ಗದ್ದೆ ನಾಟಿ ಮಾಡಿ ಕೃಷಿ ಅಧ್ಯಯನವನ್ನು ಪ್ರಾರಂಭಿಸಿದ್ದರು. 6 ಮತ್ತು 7ನೇ ತರಗತಿಯ ಆಸಕ್ತ 13 ವಿದ್ಯಾರ್ಥಿಗಳು ಗದ್ದೆ ಕೊಯ್ಲು...

ಶೈಕ್ಷಣಿಕ ಪ್ರವಾಸ 2023-24

ಮಕ್ಕಳಿಗೆ ಸಮಾಜ ವಿಜ್ಞಾನದಲ್ಲಿ ಬರುವ ನಮ್ಮ ಕರ್ನಾಟಕವನ್ನು ಆಳಿದ ವಿವಿಧ ರಾಜಮನೆತನದವರ ಸ್ಮಾರಕಗಳು ಹಾಗೂ ಆ ಸ್ಥಳಗಳಿಗೆ ಭೇಟಿ ನೀಡಿ ಅವರು ನೀಡಿದ ಕೊಡುಗೆಗಳನ್ನು ತಿಳಿಯುವ ಉದ್ದೇಶದಿಂದ  ಈ ವರ್ಷದ ಶೈಕ್ಷಣಿಕ ಪ್ರವಾಸವನ್ನು ಐತಿಹಾಸಿಕ ಸ್ಥಳಗಳಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಕೆ.ಅರ್.ಎಸ್. ಜಲಾಶಯ ಹಾಗೂ ಬೃಂದಾವನ...

ರಾಜ್ಯಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹುಲ್ಕುತ್ರಿಯ ಕೀರ್ತಿಗೆ ತೃತೀಯ ಸ್ಥಾನ

ದಿನಾಂಕ 1.11.2023  ರಿಂದ 03-11-2023ರ ವರೆಗೆ ಮೂರು ದಿನಗಳ ಕಾಲ ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣ ಉಡುಪಿಯಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಮಂಜುನಾಥ ಗೌಡ ತೃತೀಯ ಸ್ಥಾನವನ್ನು ಪಡೆದು ನಮ್ಮ ತಾಲೂಕಿಗೆ...