ಸಹಕಾರ : ಕು. ಮೈತ್ರಿ ಚಂದ್ರಶೇಖರ ಹೆಗಡೆ, (ಸಹಶಿಕ್ಷಕರು, GPT ವಿಜ್ಞಾನ), ಸ.ಹಿ.ಪ್ರಾ.ಶಾಲೆ, ಹುಲ್ಕುತ್ರಿ.
ಸಸ್ಯಗಳಲ್ಲಿ ಪೋಷಣೆ (Nutrition in Plants)
ಪೋಷಕಗಳು (Nutrients) :
ಆಹಾರದ ಘಟಕಗಳಾದ ಕಾರ್ಬೋಹೈಡ್ರೇಟ್, ಕೊಬ್ಬು, ಪ್ರೊಟೀನ್, ವಿಟಮಿನ್ ಮತ್ತು ಖನಿಜ ಲವಣಗಳನ್ನು ಪೋಷಕಗಳು ಎನ್ನುವರು.


ಪೋಷಣೆ (Nutrition) :
ಒಂದು ಜೀವಿಯು ಆಹಾರ ಪಡೆಯುವ ಮತ್ತು ದೇಹದಲ್ಲಿ ಅದನ್ನು ಬಳಸಿಕೊಳ್ಳುವ ವಿಧಾನವೇ ಪೋಷಣೆ.

ಸ್ವಪೋಷಿತ ಪೋಷಣೆ (Autotrophic Nutrition) :
ಜೀವಿಗಳು ಸರಳವಾದ ಪದಾರ್ಥಗಳಿಂದ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ವಿಧಾನವೇ ಸ್ವಪೋಷಿತ ಪೋಷಣೆ ಎನ್ನುವರು.


ಪರಪೋಷಕಗಳು (Heterotrophs) :
ಪ್ರಾಣಿಗಳು ಮತ್ತು ಹೆಚ್ಚಿನ ಇತರ ಜೀವಿಗಳು ಸಸ್ಯಯಗಳಿಂದ ತಯಾರಿಸಲ್ಪಟ್ಟ ಆಹಾರವನ್ನು ಪಡೆದುಕೊಳ್ಳುತ್ತವೆ. ಅವುಗಳಿಗೆ ಪರಪೋಷಕಗಳು ಎನ್ನುವರು.


ಸಸ್ಯಗಳಲ್ಲಿ ಆಹಾರ ತಯಾರಿಕೆ (Photosynthesis) :
ಎಲೆಗಳಲ್ಲಿರುವ ಪತ್ರಹರಿತ್ತು, ಸೂರ್ಯನ ಬೆಳಕು, ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್, ಮಣ್ಣಿನಲ್ಲಿರುವ ಖನಿಜ ಲವಣಗಳನ್ನು ಬಳಸಿಕೊಂಡು ಸಸ್ಯಗಳು ಕಾರ್ಬೋಹೈಡ್ರೇಟ್ಗಳನ್ನು ಸಂಶ್ಲೇಷಿಸುತ್ತದೆ.
ಕಾರ್ಬನ್ ಡೈ ಆಕ್ಸೈಡ್ + ನೀರು ಸೂರ್ಯನ ಬೆಳಕು ಕಾರ್ಬೋಹೈಡ್ರೇಟ್ + ಆಕ್ಸಿಜನ್ ಪತ್ರರಂಧ್ರಗಳ ಮೂಲಕ ಕಾರ್ಬನ್ ಡೈ ಆಕ್ಸೈಡ್ ಎಲೆಗಳನ್ನು ಸೇರುತ್ತದೆ.





ಸಸ್ಯಗಳಲ್ಲಿ ಇತರ ಪೋಷಣಾ ವಿಧಾನಗಳು :
1) ಪರಪೋಷಿತ ಪೋಷಣಾ ವಿಧಾನ (Heterotrophic Nutrition) :
ಕ್ಲೋರೋಫಿಲ್ ಹೊಂದಿಲ್ಲದ ಸಸ್ಯವಾಗಿದ್ದು, ತಾನು, ಮೇಲೇರುತ್ತಿರುವ ಸಸ್ಯದಿಂದ ಸಿದ್ಧ ಆಹಾರವನ್ನು ಇದು ಪಡೆದುಕೊಳ್ಳುತ್ತದೆ.


2) ಕೊಳೆತಿನಿ ಪೋಷಣೆ (Saprotrophic Nutrition) :
ಸತ್ತ ಮತ್ತು ಕೊಳೆಯುತ್ತಿರುವ ವಸ್ತುಗಳಿಂದ ಪೋಷಕಗಳನ್ನು ಪಡೆಯುತ್ತವೆ. ಈ ಪೋಷಣಾ ವಿಧಾನವೇ ಕೊಳೆತಿನಿ ಪೋಷಣೆ.
ಉದಾ : ಶಿಲಿಂಧ್ರಗಳು (fungi), bread mould, ಅಣಬೆ (mashroom)




3) ಕೀಟಹಾರಿ ಸಸ್ಯಗಳು (Insectivorous plants) :




4) ಸಹಜೀವನ ಸಸ್ಯಗಳು (Symbiosis) :
ಕೆಲವು ಜೀವಿಗಳು ಒಟ್ಟಾಗಿ ಜೀವಿಸುತ್ತವೆ ಮತ್ತು ಆಶ್ರಯ ಹಾಗೂ ಪೋಷಕಗಳನ್ನು ಹಂಚಿಕೊಳ್ಳುತ್ತವೆ. ಈ ಸಂಬಂಧಕ್ಕೆ ಸಹಜೀವನ ಎನ್ನುವರು.
ಉದಾ : ಕೆಲವು ನಿರ್ದಿಷ್ಟ ಶಿಲೀಂದ್ರಗಳು ಮರಗಳ ಬೇರುಗಳಲ್ಲಿ ವಾಸಿಸುತ್ತವೆ. ಸಸ್ಯವು ಶಿಲೀಂಧ್ರಕ್ಕೆ ಪೋಷಕಗಳನ್ನು ಒದಗಿಸುತ್ತದೆ ಮತ್ತು ಅದಕ್ಕೆ ಪ್ರತಿಯಾಗಿ ಶಿಲೀಂಧ್ರವು ನೀರು ಮತ್ತು ನಿರ್ದಿಷ್ಟ ಪೋಷಕಗಳನ್ನು ಒದಗಿಸುತ್ತೆವೆ.
ಉದಾ : ಕಲ್ಲು ಹೂಗಳು ಮತ್ತು ಶಿಲೀಂಧ್ರ


Clear information regarding topics.. while seeing understand completely, may it ll helpful to kids, very good keep it up sir…
Thank you very much……