73ನೇ ಗಣರಾಜ್ಯೋತ್ಸವ ಕಾರ್ಯಕ್ರಮ : ಶಾರದಾ ಪೂಜೆ ಹಾಗೂ ಸಾಧಕರಿಗೆ ಸನ್ಮಾನ

ನಮ್ಮ ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಶಾಲಾ ವಿದ್ವಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಬ್ಲ ಗೌಡ ಇವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ನೆರವೇರಿದ ಸರಳ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಹಾಗೂ ಹುಲ್ಕುತ್ರಿ...

ಉದ್ಘಾಟನೆಗೊಂಡ ಹುಲ್ಕುತ್ರಿ ಶಾಲೆಯ ನೂತನ ಕೊಠಡಿ

ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿಯವರು 10-01-2022ರ ಸೋಮವಾರದಂದು ಉದ್ಘಾಟಿಸಿದರು. 2019-20ನೇ ಸಾಲಿನಲ್ಲಿ ಮಳೆ ಹಾನಿಯಿಂದಾಗಿ ನಬಾರ್ಡ್ ಸಹಯೋಗದಡಿ RIDF-25 ಯೋಜನೆಯಡಿ 11 ಲಕ್ಷ ರೂಪಾಯಿ...

ಗದ್ದೆಕೊಯ್ಲು ಮಾಡಿದ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳು

ಇಕೋ ಕ್ಲಬ್ ವತಿಯಿಂದ ಕೃಷಿ ಅಧ್ಯಯನದ ಪ್ರಾಯೋಗಿಕ ಪಾಠ ತಾಲ್ಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕುತ್ರಿ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮಂಗಳವಾರ ಗದ್ದೆಕೊಯ್ಲು ಮಾಡಿ ಸಂಭ್ರಮಿಸಿದರು. ಪ್ರತಿ ವರ್ಷ ಕೃಷಿ ಅಧ್ಯಯನದ ಅಂಗವಾಗಿ ಗದ್ದೆನಾಟಿ, ಗದ್ದೆ ಕೊಯ್ಲು ಮಾಡುವ ಈ ಶಾಲೆಯ ವಿದ್ಯಾರ್ಥಿಗಳು ಕೋವಿಡ್...

ಧ್ವಜಸ್ತಂಭ ನಿರ್ಮಾಣಕ್ಕೆ ಸಾಮಗ್ರಿಗಳ ಕೊಡುಗೆ

ಶ್ರೀಮತಿ/ಶ್ರೀ ಕುಮುದ ಅನಂತ ಗೌಡ, ಗೋಳಿಮಕ್ಕಿ ಇವರು ತಮ್ಮ ಮಗಳ ಜನ್ಮದಿನದ ಪ್ರಯುಕ್ತ ನಮ್ಮ ಶಾಲೆಗೆ ಧ್ವಜಸ್ತಂಭ ನಿರ್ಮಾಣಕ್ಕೆ ಅಗತ್ಯ ಪರಿಕರಗಳನ್ನು ನೀಡುವುದರ ಮೂಲಕ ಸಂಪೂರ್ಣ ಧ್ವಜಸ್ತಂಭ ಕೊಡುಗೆಯಾಗಿ ನೀಡುತ್ತಿದ್ದಾರೆ. ಈ ಮೂಲಕ ತಮ್ಮ ಮಗಳಾದ ಕು. ಶೃತಿ ಅನಂತ ಗೌಡ ಇವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ....

75ನೇ ಸ್ವಾತಂತ್ರ್ಯೋತ್ಸವ

15 ಅಗಸ್ಟ್ 2021 ರಂದು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಬ್ಲ ಗೌಡ ಇವರು ಧ್ವಜಾರೋಹಣವನ್ನು ನೆರವೇರಿಸಿದರು. ಧ್ವಜಾರೋಹಣವನ್ನು ನೆರವೇರಿಸಿದ ಬಳಿಕ ಎಸ್.ಡಿ.ಎಮ್.ಸಿ. ಅಧ್ಯಕ್ಷರು ನೆರೆದಿರುವ ಸರ್ವರಿಗೂ 75ನೇ ಸ್ವಾತಂತ್ರ್ಯೋತ್ಸವದ...

ರಂಗೋಲಿಯಲ್ಲಿ ಅರಳಿದ ಗಣಿತದ ರೇಖಾಕೃತಿಗಳು (2020-21)

ದಿನಾಂಕ 23-03-2021 ರಂದು ನಮ್ಮ ಶಾಲೆಯಲ್ಲಿ ಪ್ರೇರಣಾ ಕ್ಲಬ್ ವತಿಯಿಂದ 6 ಮತ್ತು 7ನೇ ತರಗತಿ ಮಕ್ಕಳಿಗೆ ರಂಗೋಲಿಯಲ್ಲಿ ರೇಖಾಕೃತಿಗಳನ್ನು ಬಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು. ವೃತ್ತದ ಭಾಗಗಳು, ಕೋನಗಳನ್ನಾಧರಿಸಿ ತ್ರಿಭುಜದ...