ಪ್ರಕೃತಿಯ ಸೊಬಗನ್ನು ಸವಿದ ಹುಲ್ಕುತ್ರಿ ಶಾಲಾ ಮಕ್ಕಳು

2021-22ನೇ ಸಾಲಿನ ಹೊರಸಂಚಾರವನ್ನು ಪ್ರತಿ ವರ್ಷದಂತೆ ಈ ವರ್ಷವೂ ಅಘನಾಶಿನಿ ನದಿ ತೀರದ ತೆಪ್ಪಸಾಲಿನಲ್ಲಿ ಎಸ್.ಡಿ.ಎಮ್.ಸಿ. ಹಾಗೂ ಪಾಲಕರ ಸಹಕಾರದೊಂದಿಗೆ ಆಯೋಜಿಸಲಾಗಿತ್ತು. ಪ್ರಕೃತಿಯ ಸೊಬಗನ್ನು ಸವಿದ ವಿದ್ಯಾರ್ಥಿಗಳು ನೀರಿನಾಟ, ಮನೋರಂಜನಾ ಆಟಗಳಿಂದ ಪುಳಕಿತಗೊಂಡರು. ನಂತರ ಪಾಲಕರೊಂದಿಗೆ ನದಿ ತೀರದ ಸುಂದರ ಮರಳಿನ ರಾಶಿಯ ಮೇಲೆ...

ಶಿಕ್ಷಕ ದರ್ಶನ ಹರಿಕಾಂತಗೆ ರಾಜ್ಯಮಟ್ಟದ ಸಹೃದಯ ಶಿಕ್ಷಕ ಪ್ರಶಸ್ತಿ ಪ್ರದಾನ

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ದರ್ಶನ ಹರಿಕಾಂತರವರು 12-02-2022 ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದ ಸಾಗರೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಹೃದಯ ಶಿಕ್ಷಕ ಪ್ರಶಸ್ತಿ...
ಇಂಧನ ರಹಿತ ಅಡುಗೆ ಸೀಜನ್-4

ಇಂಧನ ರಹಿತ ಅಡುಗೆ ಸೀಜನ್-4

ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಕೈಚಳಕ ಪ್ರದರ್ಶಿಸಿದ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯಲ್ಲಿ ದಿನಾಂಕ 11-02-2022 ರಂದು ಇಂಧನ ರಹಿತ ಅಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜೀವನ ಶಿಕ್ಷಣದ ವಿಷಯದ ಅಂಗವಾಗಿ ವಿದ್ಯಾರ್ಥಿಗಳಿಗೆ ಇಂಧನ ರಹಿತವಾಗಿ ಆಹಾರ ಪದಾರ್ಥ ಸಿದ್ಧಪಡಿಸುವುದು,...

ರಂಗೋಲಿಯಲ್ಲಿ ಅರಳಿದ ವಿವಿಧ ನಕಾಶೆಗಳು

2021-22ನೇ ಸಾಲಿನ ರಂಗೋಲಿಯಲ್ಲಿ ಸಮಾಜ ವಿಜ್ಞಾನದ ಚಿತ್ರಗಳು 2021-22 ನೇ ಸಾಲಿನ ರಂಗೋಲಿಯಲ್ಲಿ ಸಮಾಜದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮವು ದಿನಾಂಕ 09-02-2022, ಬುಧವಾರದಂದು ನಡೆಯಿತು. ಸಮಾಜ ವಿಜ್ಞಾನದ ಶಿಕ್ಷಕರಾದ ಕು. ರಂಜನಾ ಭಂಡಾರಿ ಹಾಗೂ ದರ್ಶನ ಹರಿಕಾಂತ ಅವರ ಮಾರ್ಗದರ್ಶನದಲ್ಲಿ 4 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು...

ರಂಗೋಲಿಯಲ್ಲಿ ಅರಳಿದ ವಿಜ್ಞಾನದ ಚಿತ್ರಗಳು

2021-22ನೇ ಸಾಲಿನ ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳು 2021-22 ನೇ ಸಾಲಿನ ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮವು ದಿನಾಂಕ 05-02-2022, ಶನಿವಾರದಂದು ನಡೆಯಿತು. ವಿಜ್ಞಾನ ಶಿಕ್ಷಕಿಯಾದ ಕು. ಮೈತ್ರಿ ಹೆಗಡೆ ಅವರ ಮಾರ್ಗದರ್ಶನದಲ್ಲಿ 5, 6 ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಮ್ಮ...