ಗದ್ದೆನಾಟಿ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದ ಹುಲ್ಕುತ್ರಿ ಶಾಲೆ

ಕೃಷಿ ಅಧ್ಯಯನ ಸೀಜನ್ 6 ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯ ವಿದ್ಯಾರ್ಥಿಗಳು ಗದ್ದೆನಾಟಿ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದರು. ಸೀನ ಸೆಟ್ಟರು ನಮ್ಮ ಟೀಚರು ಹಾಗೂ ಪರಿಸರ ಅಧ್ಯಯನದ ಕೃಷಿ ಪಾಠದ ಪ್ರಾಯೋಗಿಕ ಅನುಭವಕ್ಕಾಗಿ ಹತ್ತಿರದ ಹೆಮಜೆನಿ ಮಜರೆಯ ನಿತ್ಯಾನಂದ ಕನ್ನ ಗೌಡ ಇವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು....

ಯಶಸ್ವಿ 6ನೇ ವರ್ಷದ ‘ಮಕ್ಕಳ ಸಂತೆ’ ಕಾರ್ಯಕ್ರಮ

ದಿನಾಂಕ 27-೦2-2023 ಮಂಗಳವಾರದಂದು ನಮ್ಮ ಶಾಲೆಯಲ್ಲಿ 6ನೇ ವರ್ಷದ ಮಕ್ಕಳ ಸಂತೆ ನಡೆಯಿತು. ಸಂತೆಯಲ್ಲಿ ಸಾವಯವ ಪದಾರ್ಥಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಮುಖ್ಯವಾಗಿ ಸ್ಥಳೀಯವಾಗಿ ದೊರೆಯುವ ವಸ್ತುಗಳಾದ ಬಾಳೆಕಾಯಿ, ಎಳನೀರು, ಕಾಮಕಸ್ತೂರಿ, ಎಳ್ಳು ನೀರು ತಂಪು, ರಾಗಿ ತಂಪು, ಲಿಂಬು ಶರಬತ್, ಸೋಡಾ ಶರಬತ್ತು, ಮಜ್ಜಿಗೆ...

ಶೈಕ್ಷಣಿಕ ಪ್ರವಾಸ 2022-23

ದಿನಾಂಕ 18-12-2022 ಹಾಗೂ 19-12-2022 ರಂದು ಶಾಲಾ ಶೈಕ್ಷಣಿಕ ಪ್ರವಾಸದ ನಿಮಿತ್ತ ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಹಾಗೂ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಾಗಿತ್ತು. 4 ರಿಂದ 7ನೇ ತರಗತಿಯ ಒಟ್ಟು 18 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಒಟ್ಟು 30 ಜನ ಪಾಲಕರೊಂದಿಗೆ ಪ್ರವಾಸಕ್ಕೆ ತೆರಳಲಾಗಿತ್ತು....

ಗದ್ದೆ ಕೊಯ್ಲು ಮಾಡಿದ ಶಾಲಾ ವಿದ್ಯಾರ್ಥಿಗಳು

ಕಳೆದ ಆಗಸ್ಟ್ ತಿಂಗಳಲ್ಲಿ ಈ ವಿದ್ಯಾರ್ಥಿಗಳು ಶಾಲೆಯ ಪಕ್ಕದ ಊರಾದ ಹೇಮಜಿನಿಯ ಲೋಕೇಶ ಪದ್ಮನಾಭ ಗೌಡ ಇವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದ್ದರು. ಇದೀಗ ತಾವೇ ನಾಟಿ ಮಾಡಿದ ಗದ್ದೆಯನ್ನು ಕೊಯ್ಲು ಮಾಡುವ ಮೂಲಕ ಭತ್ತದ ಗದ್ದೆಯ ಸಂಪೂರ್ಣ ಅನುಭವ ಪಡೆದರು. ಅಂದಾಜು 8 ಗುಂಟೆ ಭತ್ತದ ಕ್ಷೇತ್ರದಲ್ಲಿ ಶಾಲೆಯ ಆಸಕ್ತ 16 ವಿದ್ಯಾರ್ಥಿಗಳು...

ಕ್ಲಸ್ಟರ್ ಹಾಗೂ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ 2022-23 : ವಿದ್ಯಾರ್ಥಿಗಳ ಸಾಧನೆ

ಜಿಲ್ಲಾ ಮಟ್ಟಕ್ಕೆ ತೇಜಸ್ವಿ ಆಯ್ಕೆ 2022-23ನೇ ಸಾಲಿನ ಪ್ರತಿಭಾ ಕಾರಂಜಿಯು ಹಿರಿಯ ಪ್ರಾಥಮಿಕ ಶಾಲೆ ಬಿಳಗಿಯಲ್ಲಿ ನಡೆದಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ 14 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು 8 ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಕನ್ನಡ ಕಂಠಪಾಠ – ಜೆ. ಅಕ್ಷರ – ಪ್ರಥಮ, ಹಿಂದಿ ಕಂಠಪಾಠ...