ಭೂಮಿಯ ಸ್ವರೂಪ – ಅಧ್ಯಾಯ 11

ಪಾಠದ ಪರಿಚಯ
ಈ ಪಾಠದಲ್ಲಿ ಭೂಮಿಯ ಮೇಲ್ಮೈ, ಅದರ ವೈವಿಧ್ಯ ಭೂಸ್ವರೂಪಗಳನ್ನು – ಪರ್ವತ, ಪ್ರಸ್ಥಭೂಮಿ, ಮೈದಾನ, ಮರುಭೂಮಿ, ದ್ವೀಪಗಳು, ಅವುಗಳ ಅರ್ಥ, ಉಗಮ ಮತ್ತು ಪ್ರಾಮುಖ್ಯತೆ, ಪ್ರಪಂಚದ ಪ್ರಮುಖ ಸ್ವಾಭಾವಿಕ ಪ್ರದೇಶಗಳನ್ನು ಕುರಿತ ಪರಿಚಯ.

1 ಪ್ರಮುಖ ಭೂಸ್ವರೂಪಗಳು

ಸುತ್ತಲೂ ಒಮ್ಮೆ ನೋಡಿದಾಗ ಭೂಮೇಲ್ಮೈ ಎಲ್ಲಿಯೂ ಏಕ ಪ್ರಕಾರವಾಗಿಲ್ಲವೆಂಬುದನ್ನು ತಿಳಿಯಬಹುದು. ಕೆಲವು ಸ್ಥಳಗಳಲ್ಲಿ ಭೂಭಾಗವು ಎತ್ತರವಾಗಿದ್ದರೆ ಇನ್ನು ಕೆಲವೆಡೆ ಅದು ತಗ್ಗಾಗಿದೆ. ಕೆಲವು ಪ್ರದೇಶಗಳು ಸಂಪೂರ್ಣ ಸಮತಟ್ಟಾಗಿದ್ದರೆ ಮತ್ತೆ ಕೆಲವು ಭಾಗ ಬೆಟ್ಟ ಗುಡ್ಡಗಳಿಂದ ಕೂಡಿದೆ. ಇನ್ನೂ ಕೆಲ ಭಾಗಗಳು ಬಹಳ ತಗ್ಗಾಗಿರುತ್ತವೆ. ಆದ್ದರಿಂದ ಅನೇಕ ಮೇಲ್ಮೈ ಲಕ್ಷಣಗಳನ್ನು ಭೂಮೇಲ್ಭಾಗದಲ್ಲಿ ಕಾಣಬಹುದು. ಅವುಗಳೆಂದರೆ ಪರ್ವತ, ಬೆಟ್ಟ, ಕಣಿವೆ, ಮೈದಾನ, ಮರುಭೂಮಿ ಮತ್ತು ದ್ವೀಪಗಳು, ವಿವಿಧ ಭೂಮೇಲ್ಮ ಲಕ್ಷಣಗಳನ್ನು ‘ಭೂಸ್ವರೂಪಗಳು’ ಎಂದು ಕರೆಯಲಾಗಿದೆ.

ಯಾವುದೇ ಭೂಸ್ವರೂಪವು ಶಾಶ್ವತವಲ್ಲ, ಅವು ಬದಲಾಗುತ್ತವೆ. ನೀವಿಂದು ನೋಡುತ್ತಿರುವ ಯಾವುದೇ ಭೂಸ್ವರೂಪವೂ ತನ್ನ ಮೂಲಸ್ವರೂಪವನ್ನು ಹೊಂದಿಲ್ಲ. ಭೂಮಿಯ ಮೇಲ್ಬಾಗವು ಆಂತರಿಕ ಮತ್ತು ಬಾಹ್ಯ ಶಕ್ತಿಗಳ ಕಾರ್ಯಾಚರಣೆಯಿಂದ ಬದಲಾಗುತ್ತದೆ.

ಮಾನವನ ಜೀವನ ಮತ್ತು ಆತನ ಚಟುವಟಿಕೆಗಳ ಮೇಲೆ ಭೂಸ್ವರೂಪಗಳು ಮಹತ್ವದ ಪ್ರಭಾವ ಬೀರುತ್ತವೆ.

ಭೂಸ್ವರೂಪಗಳ ವಿಧಗಳು

ಭೂಸ್ವರೂಪಗಳನ್ನು ಮೂರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:
1 ಪರ್ವತಗಳು,
2 ಪ್ರಸ್ಥಭೂಮಿಗಳು ಮತ್ತು
3 ಮೈದಾನಗಳು.

1 ಪರ್ವತಗಳು

ಅತ್ಯಂತ ಪ್ರಮುಖ ಹಾಗೂ ಸ್ಫೂರ್ತಿದಾಯಕ ಭೂಸ್ವರೂಪಗಳು. ಅವು ಪೃಥ್ವಿಯ ಮೇಲ್ಕೆಯಲ್ಲಿ ಸುತ್ತಲಿನ ಪ್ರದೇಶಗಳಿಗಿಂತ ಎತ್ತರವುಳ್ಳ ಹಾಗೂ ಮೇಲಕ್ಕೆತ್ತಲ್ಪಟ್ಟ ಭೂಭಾಗಗಳು. ಕಡಿದಾದ ಇಳಿಜಾರುಗಳು ಮತ್ತು ಶಿಖರಗಳನ್ನು ಹೊಂದಿದ್ದು ಸಮುದ್ರಮಟ್ಟದಿಂದ ಸಾವಿರ ಮೀಟರ್‍ಗಳಿಗೂ ಎತ್ತರವಾದವು. ಪರ್ವತದ ಅತ್ಯಂತ ಎತ್ತರವುಳ್ಳ ತುದಿಗೆ ‘ಶಿಖರ’ ಎನ್ನುವರು.

ಬೆಟ್ಟವೂ ಸಹ ಪೃಥ್ವಿಯ ಒಂದು ನೈಸರ್ಗಿಕ ಎತ್ತರವುಳ್ಳ ಭಾಗ. ಆದರೆ ಅದು ಪರ್ವತವೊಂದರಷ್ಟು ಎತ್ತರವುಳ್ಳದ್ದಲ್ಲ. ಬೆಟ್ಟಗಳು ಸಾಮಾನ್ಯವಾಗಿ 600 ಮೀಟರ್ ಎತ್ತರವುಳ್ಳವು. ಅವುಗಳ ಇಳಿಜಾರುಗಳು ಅಷ್ಟೊಂದು ಕಡಿದಾಗಿಲ್ಲ.

ಶಿಖರಗಳನ್ನುಳ್ಳ ಅಥವಾ ಇಲ್ಲದ ಪರ್ವತಗಳ ಸಾಲನ್ನು ‘ಪರ್ವತ ಸರಣಿ’ ಎನ್ನುವರು. ಉದಾ: ಹಿಮಾಲಯ (ಏಷ್ಯ), ಆಲ್ಫ್ಸ್(ಯೂರೋಪ್), ಆ್ಯಂಡೀಸ್ (ದ.ಅಮೆರಿಕ), ರಾಕಿ (ಉತ್ತರ ಅಮೆರಿಕ) ಇತ್ಯಾದಿ.

ಪರ್ವತಗಳ ವಿಧಗಳು

ಪರ್ವತಗಳು ಸಾಮಾನ್ಯವಾಗಿ ಶಿಲಾಸ್ತರಗಳ ಮಡಿಕೆ ಮತ್ತು ಜ್ವಾಲಾಮುಖಿಗಳಂತಹ ಆಂತರಿಕ ಶಕ್ತಿಗಳಿಂದ ನಿರ್ಮಾಣವಾಗುತ್ತವೆ. ಅವು ಸಾಮಾನ್ಯವಾಗಿ ಕಠಿಣ ಶಿಲೆಗಳಿಂದ ರಚಿತವಾದವು. ಪರ್ವತಗಳು ಪುರಾತನ ಅಥವಾ ಇತ್ತೀಚೆಗೆ ನಿರ್ಮಾಣಗೊಂಡವು. ಹಿಮಾಲಯ ಮತ್ತು ಆಲ್ಫ್ಸ್ ಪರ್ವತಗಳು ಇತ್ತೀಚಿನ ಪರ್ವತಗಳು. ಆದರೆ ಅಪಲೇಷಿಯನ್ (ಉತ್ತರ ಅಮೆರಿಕ) ಮತ್ತು ಅರಾವಳಿ (ಭಾರತ) ಸರಣಿಗಳು ಪುರಾತನ ಕಾಲದ ಪರ್ವತಗಳಾಗಿರುತ್ತವೆ. ಅತ್ಯಂತ ಎತ್ತರವುಳ್ಳ ಪರ್ವತಗಳ ಅತಿ ಎತ್ತರ ಭಾಗಗಳು ಹಿಮದಿಂದಾವೃತವಾಗಿವೆ.

ನಿರ್ಮಾಣದ ಆಧಾರದ ಮೇಲೆ ಪರ್ವತಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅ) ಮಡಿಕೆ ಪರ್ವತಗಳು, ಅ) ಖಂಡ ಪರ್ವತಗಳು ಮತ್ತು ಇ) ಜ್ವಾಲಾಮುಖಿಜನಿತ ಪರ್ವತಗಳು.

ಅ. ಮಡಿಕೆ ಪರ್ವತಗಳು: ಇವು ಶಿಲಾಸ್ತರಗಳು ಮುದುಡಿಕೊಳ್ಳುವುದರಿಂದ ನಿರ್ಮಾಣ ವಾಗುವುವು. ಅವು ಅತೀ ಎತ್ತರವುಳ್ಳ ಪರ್ವತಗಳು. ಉದಾ: ಹಿಮಾಲಯ ಮತ್ತು ಆಲ್ಫ್ಸ್.

ಹಿಮಾಲಯ ಪರ್ವತಗಳು

ಆಲ್ಫ್ಸ್ ಪರ್ವತಗಳು

ಆ. ಖಂಡ ಪರ್ವತಗಳು: ಎರಡು ಸಮಾನಾಂತರ ಶಿಲಾಸ್ತರಭಂಗಗಳ ನಡುವಣ ಭಾಗವು ಮೇಲಕ್ಕೆತ್ತಲ್ಪಡುವುದರಿಂದ ನಿರ್ಮಾಣವಾಗುತ್ತವೆ. ಅವುಗಳು ಅತೀ ಎತ್ತರವಾಗಿಲ್ಲ. ಉದಾ: ಸಿಯೆರ್ರ ನಿವೇಡ (ಉತ್ತರ ಅಮೆರಿಕ) ಮತ್ತು ವಾಸ್ಜೆಸ್ (Vasges) (ಯುರೋಪ್).

ಸಿಯೆರ್ರ ನಿವೇಡ (ಉತ್ತರ ಅಮೆರಿಕ)

ಸಿಯೆರ್ರ ನಿವೇಡ (ಉತ್ತರ ಅಮೆರಿಕ)

ಇ. ಜ್ವಾಲಾಮುಖಿಜನಿತ ಪರ್ವತಗಳು: ಇವು ಜ್ವಾಲಾಮುಖಿ ಸ್ಫೋಟಿತ ವಸ್ತುಗಳು ರಾಶಿಗೊಂಡು ನಿರ್ಮಾಣವಾಗುತ್ತವೆ. ಅವುಗಳ ತಳ ವಿಸ್ತಾರವಾಗಿದ್ದು, ಎತ್ತರವಾದ ಶಂಖಾಕೃತಿಯ ಶಿಖರಗಳನ್ನೊಳಗೊಂಡಿವೆ. ಉದಾ: ಜಪಾನಿನ ಪ್ಯೂಜಿಯಾಮ ಮತ್ತು ಆಫ್ರಿಕಾದ ಕಿಲಿಮಂಜಾರೊ.

Kilimanjaro Mountain ಆಫ್ರಿಕಾದ ಕಿಲಿಮಂಜಾರೊ

ಜಪಾನಿನ ಪ್ಯೂಜಿಯಾಮ

ಜಪಾನಿನ ಪ್ಯೂಜಿಯಾಮ

ಪರ್ವತಗಳ ಪ್ರಾಮುಖ್ಯ:

ಪರ್ವತಗಳು ಹಲವು ಮಹತ್ವವುಳ್ಳವು. ಅವುಗಳೆಂದರೆ,
● ಎರಡು ದೇಶಗಳ ನಡುವೆ ಸ್ವಾಭಾವಿಕ ಗಡಿಗಳನ್ನು ನಿರ್ಮಿಸುತ್ತವೆ.
● ಪರ್ವತಗಳು ನೈಸರ್ಗಿಕ ಸಂಪನ್ಮೂಲಗಳ ಉಗ್ರಾಣಗಳಾಗಿವೆ.
● ಜಲವಿದ್ಯುಚ್ಛಕ್ತಿ ತಯಾರಿಕೆಗೆ ನೀರನ್ನು ಪೂರೈಸುತ್ತವೆ.
● ನದಿಗಳ ಉಗಮ ಸ್ಥಾನಗಳಾಗಿವೆ.
● ವಾಯುಗುಣದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.
● ರಮಣೀಯವಾದ ದೃಶ್ಯಗಳನ್ನು ಹೊಂದಿದ್ದು, ಅವು ಪ್ರವಾಸಿತಾಣಗಳಾಗಿವೆ.
● ನೆಡುತೋಪು ಬೆಳೆ (ಪ್ಲಾಂಟೇಷನ್)ಗಳಿಗೆ ಪೂರಕವಾಗಿವೆ.

2. ಪ್ರಸ್ಥಭೂಮಿಗಳು

ಅವು ಸಮತಟ್ಟಾದ ಮೇಲ್ಬಾಗ ಮತ್ತು ಕಡಿದಾದ ಬದಿಗಳಿಂದ ಕೂಡಿವೆ. ಇವುಗಳನ್ನು ‘ಪೀಠಭೂಮಿ’ಗಳೆಂದು ಕೂಡ ಕರೆಯುತ್ತಾರೆ. ಸಾಮಾನ್ಯವಾಗಿ ಪ್ರಸ್ಥಭೂಮಿಗಳು ಸುತ್ತಲಿನ ಪ್ರದೇಶಗಳಿಗಿಂತ ಒಮ್ಮೆಲೇ ಎತ್ತರವಾಗಿದ್ದು, ಸಣ್ಣ ಪ್ರಮಾಣದ ಏರಿಳಿತಗಳನ್ನು ಹೊಂದಿರುತ್ತವೆ. ಕೆಲವು ಪ್ರಸ್ಥಭೂಮಿಗಳು ವಿಶಾಲವಾಗಿವೆ. ನಮ್ಮ ಭಾರತದ ದಖನ್ ಪ್ರಸ್ಥಭೂಮಿಯು ಅದಕ್ಕೊಂದು ಉದಾಹರಣೆಯಾಗಿದೆ. ಇನ್ನು ಕೆಲವು ಪ್ರಸ್ಥಭೂಮಿಗಳು ಸಮುದ್ರಮಟ್ಟದಿಂದ ಅತೀ ಎತ್ತರದಲ್ಲಿರುತ್ತವೆ. ಉದಾ: ಟಿಬೆಟಿನ ಪ್ರಸ್ಥಭೂಮಿ.

ಭಾರತದ ದಖನ್ ಪ್ರಸ್ಥಭೂಮಿ

ಭಾರತದ ದಖನ್ ಪ್ರಸ್ಥಭೂಮಿ

ಟಿಬೆಟಿನ ಪ್ರಸ್ಥಭೂಮಿ

ಟಿಬೆಟಿನ ಪ್ರಸ್ಥಭೂಮಿ

ಇದು ಜಗತ್ತಿನಲ್ಲಿ ಅತೀ ಎತ್ತರದಲ್ಲಿರುವ ಪ್ರಸ್ಥಭೂಮಿಯಾಗಿದ್ದು, ಇದನ್ನು ಪ್ರಪಂಚದ ಮೇಲ್ಛಾವಣಿ ಎಂದು ಕರೆಯುತ್ತಾರೆ, ಕೆಲವು ಪ್ರಸ್ಥಭೂಮಿಗಳು ತಗ್ಗು ಭಾಗದಲ್ಲೂ ಇವೆ. ಪ್ರಸ್ಥಭೂಮಿಗಳು ಕಠಿಣ ಶಿಲೆಗಳಿಂದ ಕೂಡಿವೆ. ಅಂತಹ ಶಿಲೆಗಳು ಸಮೃದ್ದ ಖನಿಜಗಳಿಂದ ಕೂಡಿವೆ. ಕರ್ನಾಟಕದ ನೈಋತ್ಯ ಭಾಗವೊಂದು ಪ್ರಸ್ಥಭೂಮಿಯಾಗಿದೆ.

ಪ್ರಸ್ಥಭೂಮಿಯ ವಿಧಗಳು

ಪ್ರಸ್ಥಭೂಮಿಗಳನ್ನು ಮೂರು ಪ್ರಕಾರಗಳಾಗಿ ವಿಂಗಡಿಸಲಾಗಿದೆ: (ಅ) ಅಂತರಪರ್ವತ ಪ್ರಸ್ಥಭೂಮಿ, (ಆ) ಪರ್ವತಪಾದ ಪ್ರಸ್ಥಭೂಮಿ, ಮತ್ತು (ಇ) ಖಂಡಾಂತರ ಪ್ರಸ್ಥಭೂಮಿಗಳು.

ಅ. ಅಂತರಪರ್ವತ ಪ್ರಸ್ಥಭೂಮಿಗಳು ಸುತ್ತಲೂ ಪರ್ವತ ಸರಣಿಗಳಿಂದ ಸುತ್ತುವರೆದಿರುತ್ತವೆ ಉದಾ: ಟಿಬೆಟ್ ಪ್ರಸ್ಥಭೂಮಿ (ಏಷ್ಯ), ಬೊಲಿವಿಯ ಪ್ರಸ್ಥಭೂಮಿ (ದಕ್ಷಿಣ ಅಮೆರಿಕ).

ಬೊಲಿವಿಯ ಪ್ರಸ್ಥಭೂಮಿ (ದಕ್ಷಿಣ ಅಮೆರಿಕ)

ಆ. ಪರ್ವತಪಾದ ಪ್ರಸ್ಥಭೂಮಿಗಳು ಒಂದು ಕಡೆ ಪರ್ವತಗಳಿಂದಲೂ ಮತ್ತು ಇನ್ನೊಂದು ಕಡೆ ಮೈದಾನ ಅಥವಾ ಸಾಗರಗಳಿಂದ ಸುತ್ತುವರಿದಿರುತ್ತವೆ. ಉದಾ: ಪಟಗೋನಿಯ ಪ್ರಸ್ಥಭೂಮಿ (ದಕ್ಷಿಣ ಅಮೆರಿಕ).

ಪಟಗೋನಿಯ ಪ್ರಸ್ಥಭೂಮಿ (ದಕ್ಷಿಣ ಅಮೆರಿಕ).

ಪಟಗೋನಿಯ ಪ್ರಸ್ಥಭೂಮಿ (ದಕ್ಷಿಣ ಅಮೆರಿಕ).

ಪಟಗೋನಿಯ ಪ್ರಸ್ಥಭೂಮಿ (ದಕ್ಷಿಣ ಅಮೆರಿಕ)

ಇ. ಖಂಡಾಂತರ ಪ್ರಸ್ಥಭೂಮಿಗಳು ಖಂಡಾಂತರ ಭಾಗ ಮೇಲಕ್ಕೆತ್ತುವಿಕೆ ಅಥವ ಶಿಲಾಪಾಕದ ಹರಡುವಿಕೆಯಿಂದ ನಿರ್ಮಾಣವಾದವು. ಉದಾ: ವಾಯವ್ಯ ದಖನ್ ಪ್ರಸ್ಥಭೂಮಿ (ಭಾರತ).

ಪ್ರಸ್ಥಭೂಮಿಗಳ ಪ್ರಾಮುಖ್ಯ: ಪ್ರಸ್ಥಭೂಮಿಗಳು
● ಖನಿಜ ಸಂಪತ್ತಿನ ಉಗ್ರಾಣಗಳಾಗಿವೆ.
● ಜಲವಿದ್ಯುಚ್ಛಕ್ತಿ ಉತ್ಪಾದನೆಗೆ ಉಪಯುಕ್ತವಾಗಿವೆ.
● ಫಲವತ್ತಾದ ಮಣ್ಣು ಹೊಂದಿದ್ದು, ಕೃಷಿಗೆ ಪೂರಕವಾಗಿವೆ.
● ಪ್ರಾಣಿಗಳನ್ನು ಸಾಕಲು ಉಪಯುಕ್ತವಾಗಿವೆ.

3. ಮೈದಾನಗಳು

ವಿಶಾಲವಾದ ಸಮತಟ್ಟಾದ ಅಥವಾ ಸ್ವಲ್ಪವೇ ಏರಿಳಿತಗಳುಳ್ಳ ತಗ್ಗಾದ ಭೂಭಾಗಗಳನ್ನು ‘ಮೈದಾನ’ ಗಳೆಂದು ಕರೆಯುವರು. ಇವು ಹಲವು ಆರ್ಥಿಕ ಮಹತ್ವಗಳನ್ನು ಪಡೆದಿವೆ.

ಬಹಳಷ್ಟು ಮೈದಾನಗಳು, ನದಿಗಳು ಸವೆಸಿ, ಸಾಗಿಸಿ ತಂದ ರೇವೆ, ಮಡ್ಡಿ ಮತ್ತು ಮರಳಿನಂತಹ ವಸ್ತುಗಳ ಸಂಚಯದಿಂದ ನಿರ್ಮಾಣವಾಗಿವೆ. ಮತ್ತೆ ಕೆಲವು ಮೈದಾನಗಳು ಹಿಮನದಿ, ಮಾರುತ ಹಾಗೂ ಅಲೆಗಳ ಕಾರ್ಯಗಳಿಂದ ರಚನೆಯಾಗಿವೆ. ನೀವು ನದಿ ಕಣಿವೆ ಮತ್ತು ಸಮುದ್ರತೀರಗಳ ಉದ್ದಕ್ಕೂ ಅನೇಕ ಮೈದಾನಗಳನ್ನು ನೋಡಬಹುದು. ಉದಾ: ಗಂಗಾ ನದಿ ಬಯಲು ಮತ್ತು ಅದರ ಮುಖಜ ಭೂಮಿ.

ಗಂಗಾ ನದಿ ಮುಖಜ ಭೂಮಿ.

ಗಂಗಾ ನದಿ ಮುಖಜ ಭೂಮಿ.

ಗಂಗಾ ನದಿ ಬಯಲು ಮತ್ತು ಅದರ ಮುಖಜ ಭೂಮಿ.

ಮೈದಾನಗಳ ವಿಧಗಳು: ಮೈದಾನಗಳನ್ನು ರಚನಾ ಮೈದಾನಗಳು, ಸವೆತದಿಂದಾದ ಮೈದಾನಗಳು ಮತ್ತು ಸಂಚಯನದಿಂದಾದ ಮೈದಾನಗಳೆಂದು ಮೂರು ವಿಧಗಳಾಗಿ ವಿಂಗಡಿಸಬಹುದು.

ಅ. ರಚನಾ ಮೈದಾನಗಳು: ಸಮುದ್ರದ ತಳಭಾಗವು ಮೇಲಕ್ಕೆತ್ತಲ್ಪಡುವುದರಿಂದಲೋ ಅಥವಾ ಯಾವುದಾದರೊಂದು ಭಾಗವು ತಗ್ಗಾಗುವುದರಿಂದಲೂ ನಿರ್ಮಾಣವಾಗುತ್ತವೆ. ಉದಾ: ಅಮೆರಿಕ ಸಂಯುಕ್ತ ಸಂಸ್ಥಾನದ (ಯುಎಸ್‍ಎ) ಆಗ್ನೇಯದ ಮೈದಾನ.

ಅಮೆರಿಕ ಸಂಯುಕ್ತ ಸಂಸ್ಥಾನದ (ಯುಎಸ್‍ಎ) ಆಗ್ನೇಯದ ಮೈದಾನ.

ಆ. ಸವೆತದಿಂದಾದ ಮೈದಾನಗಳು: ಇವು ಪರ್ವತ ಮತ್ತು ಪ್ರಸ್ಥಭೂಮಿಗಳು ಸವೆತಕ್ಕೊಳಗಾಗಿ ತಗ್ಗು ಮೈದಾನಗಳಾಗುವುದರಿಂದ ನಿರ್ಮಾಣವಾಗುತ್ತವೆ. ಉದಾ: ಸೈಬೀರಿಯಾದ ಪಶ್ಚಿಮ ಭಾಗ.

ಸೈಬೀರಿಯಾದ ಪಶ್ಚಿಮ ಭಾಗ

ಇ. ಸಂಚಯನದಿಂದಾದ ಮೈದಾನಗಳು: ನದಿ, ಹಿಮನದಿ, ಮಾರುತ ಮೊದಲಾದ ನೈಸರ್ಗಿಕ ಕರ್ತೃಗಳು ಹೊತ್ತು ತಂದ ಮೆಕ್ಕಲು-ಮಡ್ಡಿಗಳ ಸಂಚಯನದಿಂದ ನಿರ್ಮಾಣವಾದವು ಉದಾ: ಸಿಂಧೂ-ಗಂಗಾ ನದಿ ಬಯಲು.

ಮೈದಾನಗಳ ಪ್ರಾಮುಖ್ಯ
● ಫಲವತ್ತಾದ ಮಣ್ಣು ಮತ್ತು ಸಮತಟ್ಟಾದ ಭೂಮಿಯನ್ನು ಹೊಂದಿವೆ.
● ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಉಪಯುಕ್ತವಾಗಿವೆ.
● ಸಾರಿಗೆ ಸಂಪರ್ಕದ ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿವೆ.
● ನಾಗರಿಕತೆ ಕೇಂದ್ರಗಳ ನಾಡು, ಮರುಭೂಮಿಗಳು.
● ಪಟ್ಟಣ ಮತ್ತು ನಗರಗಳ ಬೆಳವಣಿಗೆಗೆ ನೆರವಾಗುತ್ತವೆ.

ಮರುಭೂಮಿಗಳು :

ಮೇಲ್ಮೈ ಲಕ್ಷಣಗಳಿಂದಾಗಿ ಪರ್ವತ, ಪ್ರಸ್ಥಭೂಮಿ ಮತ್ತು ಮೈದಾನಗಳು ಪರಸ್ಪರ ಭಿನ್ನವಾಗಿವೆ. ವಾಯುಗುಣದ ಪರಿಣಾಮದಿಂದಾಗಿ ಮರುಭೂಮಿಗಳು ನಿರ್ಮಾಣವಾಗಿವೆ. ಅವು ಹಗಲಿನ ವೇಳೆಯಲ್ಲಿ ಅತಿ ಶಾಖದಿಂದಲೂ ಮತ್ತು ರಾತ್ರಿ ವೇಳೆಯಲ್ಲಿ ಶೀತವಾಗಿರುತ್ತವೆ. ಕನಿಷ್ಠ ಪ್ರಮಾಣದ ಮಳೆಯನ್ನು ಪಡೆಯುತ್ತವೆ ಹಾಗೂ ಅವು ಪ್ರಮುಖವಾಗಿ ಶುಷ್ಕವಾಗಿರುತ್ತವೆ. ಆದುದರಿಂದ ‘ಮರುಭೂಮಿ ಒಂದು ವಿಸ್ತಾರವಾದ ಶುಷ್ಕ ಪ್ರದೇಶ’. ಭೂಮೇಲ್ಮೈಯಲ್ಲಿ ಐದನೇ ಒಂದು ಭಾಗವು ಮರುಭೂಮಿಗಳಿಂದಾವೃತ್ತವಾಗಿದೆ. ಮರುಭೂಮಿಗಳು ಶಿಲಾಮಯ ಅಥವಾ ಮರಳು ಮಯವಾಗಿರಬಹುದು. ಅಂಟಾಕ್ರ್ಟಿಕ ಮತ್ತು ಯೂರೋಪ್‍ಗಳನ್ನು ಹೊರತುಪಡಿಸಿ ಉಳಿದೆಲ್ಲ ಖಂಡಗಳಲ್ಲಿ ಮರುಭೂಮಿಗಳಿವೆ. ಸಹರಾ ಪ್ರಪಂಚದಲ್ಲೇ ವಿಶಾಲವಾದ ಮರುಭೂಮಿ.

ಸಹರಾ ಮರುಭೂಮಿ

ಕೆಲವು ಮರುಭೂಮಿಗಳ ನಡುವೆ ಓಯಸಿಸ್‍ಗಳಿವೆ. ಮರುಭೂಮಿಯ ಯಾವ ಭಾಗದಲ್ಲಿ ಅಂತರ್ಜಲವು ಚಿಲುಮೆಯ ರೂಪದಲ್ಲಿ ಹೊರಬರುವುದೋ ಅದನ್ನು ಓಯಸಿಸ್ ಎನ್ನುವರು. ಇದು ಅಲ್ಲಿಯ ಸಸ್ಯ ಮತ್ತು ಮಾನವ ವಸತಿಗಳ ಬೆಳವಣಿಗೆಗೆ ನೆರವಾಗುವುದು.

Oasi in sahara desert under blu sky

ಮರುಭೂಮಿಯ ಪ್ರಾಮುಖ್ಯತೆ : ಮರುಭೂಮಿಗಳಲ್ಲಿ ಅಲೆಮಾರಿ ಜನರೇ ಹೆಚ್ಚು. ಅವರು ತಮ್ಮ ಜಾನುವಾರುಗಳೊಂದಿಗೆ ಸ್ಥಳದಿಂದ ಸ್ಥಳಕ್ಕೆ ಅಲೆದಾಡುವರು. ಮರುಭೂಮಿಯ ಮಣ್ಣು ಅಷ್ಟೊಂದು ಫಲವತ್ತಾಗಿಲ್ಲ. ನೀರು ದೊರೆಯುವ ಕಡೆ ಬೆಳೆಗಳನ್ನು ಬೆಳೆಯಬಹುದು. ಉದಾ: ಈಜಿಪ್ಟ್‍ನ ನೈಲ್ ನದಿ ಕಣಿವೆ. ಕೆಲವು ಮರುಭೂಮಿಗಳು ಸಮೃದ್ದ ಖನಿಜ ಸಂಪತ್ತು ಹೊಂದಿವೆ. ಉದಾ: ಸೌದಿ ಅರೇಬಿಯಾದ, ಕುವೈತ್‍ನಲ್ಲಿರುವ ಪೆಟ್ರೋಲಿಯಂ ಇತ್ಯಾದಿ.

ಈಜಿಪ್ಟ್‍ನ ನೈಲ್ ನದಿ ಕಣಿವೆ

ಈಜಿಪ್ಟ್‍ನ ನೈಲ್ ನದಿ ಕಣಿವೆ

ದ್ವೀಪಗಳು

ದ್ವೀಪವೆಂದರೆ ಸಾಗರ, ಸಮುದ್ರ, ಸರೋವರ ಅಥವಾ ನದಿಗಳಲ್ಲಿ ಸುತ್ತಲೂ ನೀರಿನಿಂದಾವರಿಸಿದ ಚಿಕ್ಕ ಭೂಭಾಗ. ಇದು ಒಂದು ವಿಧದ ಭೂಸ್ವರೂಪ. ಅತಿ ಚಿಕ್ಕದ್ವೀಪಗಳನ್ನು ಕಿರುದ್ವೀಪ’ ((islets) ಎನ್ನುವರು. ನದಿ ಮತ್ತು ಸರೋವರಗಳ ನಡುವಣ ದ್ವೀಪಗಳಿಗೆ ‘ನಡುಗಡ್ಡೆ’ಗಳೆಂದು ಕರೆಯುವರು. ಭೌಗೋಳಿಕ ದೃಷ್ಟಿಯಲ್ಲಿ ದ್ವೀಪಗಳ ಗುಂಪನ್ನು ‘ದ್ವೀಪಸ್ತೋಮ’ (ಸಮೂಹ) ಎನ್ನುವರು. ಉದಾ: ಟಿಯರ್-ಡೆಲ್‍ಫ್ಯೂಗೋ, ಇಂಡೋನೇಷ್ಯ.

ಟಿಯರ್-ಡೆಲ್‍ಫ್ಯೂಗೋ

ಇಂಡೋನೇಷ್ಯ

ದ್ವೀಪಗಳ ವಿಧಗಳು : ದ್ವೀಪಗಳಲ್ಲಿ ಎರಡು ಪ್ರಮುಖ ವಿಧಗಳಿವೆ. ಖಂಡಾಂತರ ದ್ವೀಪಗಳು ಮತ್ತು ಸಾಗರಿಕ ದ್ವೀಪಗಳು, ಖಂಡಾಂತರ ದ್ವೀಪಗಳು ಖಂಡದ ಪ್ರಧಾನ ಭೂಭಾಗದಿಂದ ಪ್ರತ್ಯೇಕಗೊಂಡು ನಿರ್ಮಾಣಗೊಂಡ ದ್ವೀಪಗಳು. ಉದಾ: ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್ ಇತ್ಯಾದಿ, ಸಾಗರ ದೀಪಗಳು ಬಹುವಾಗಿ ಜ್ವಾಲಾಮುಖಿ ವಸ್ತುಗಳ ಸಂಚಯದಿಂದ ಸಾಗರಗಳ ಮಧ್ಯದಲ್ಲಿ ನಿರ್ಮಾಣಗೊಂಡವು. ಹೀಗಾಗಿ ಇವುಗಳನ್ನು ಜ್ವಾಲಾಮುಖಿ ದ್ವೀಪಗಳೆಂತಲೂ ಕರೆಯುವರು. ಉದಾ: ಸುಮಾತ್ರ (ಇಂಡೋನೇಷ್ಯ). ಹವಳದ ಹುಳುಗಳಿಂದ ಕಟ್ಟಲ್ಪಟ್ಟ ದಿಣ್ಣೆಗಳನ್ನು ‘ಹವಳದ ದ್ವೀಪ’ಗಳೆಂದು ಕರೆಯುವರು. ಉದಾ: ಲಕ್ಷ ದ್ವೀಪ (ಭಾರತ).

ಹವಳದ ದ್ವೀಪ

ಹವಳದ ದ್ವೀಪ

ಲಕ್ಷ ದ್ವೀಪ (ಭಾರತ)

ಅಂಡಮಾನ್-ನಿಕೋಬಾರ್ ಹಾಗೂ ಲಕ್ಷದ್ವೀಪಗಳು ಭಾರತದ ಪ್ರಮುಖ ದ್ವೀಪಗಳಾಗಿವೆ. ಕರ್ನಾಟಕದ ತೀರದಲ್ಲಿಯೂ ಕೆಲವು ದ್ವೀಪಗಳಿವೆ. ಉದಾ: ಸೇಂಟ್‍ಮೇರಿ ದ್ವೀಪ (ಕೋಕೊನಟ್ ದ್ವೀಪ) ಇತ್ಯಾದಿ.

ಅಂಡಮಾನ್-ನಿಕೋಬಾರ್ ಲಕ್ಷದ್ವೀಪಗಳು

St-Marys-island

ದ್ವೀಪಗಳ ಮಹತ್ವ: ದ್ವೀಪಗಳು ಬಹಳ ಅನುಕೂಲವಾದ ವಾಯುಗುಣ ಹೊಂದಿವೆ. ಆಕರ್ಷಣೀಯ ಪ್ರವಾಸಿ ತಾಣಗಳು. ಇಲ್ಲಿ ಮೀನುಗಾರಿಕೆಯು ಜನರ ಪ್ರಮುಖ ವೃತ್ತಿಯಾಗಿದೆ.

2. ಪ್ರಪಂಚದ ಪ್ರಮುಖ ಸ್ವಾಭಾವಿಕ ಪ್ರದೇಶಗಳು

ಅರ್ಥ: ಒಂದೇ ರೀತಿಯ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿರುವ ಭಾಗಗಳನ್ನು ಒಟ್ಟುಗೂಡಿಸಿ ಸ್ವಾಭಾವಿಕ ಪ್ರದೇಶಗಳು ಎನ್ನುತ್ತೇವೆ. ಪ್ರತಿಯೊಂದು ಸ್ವಾಭಾವಿಕ ಪ್ರದೇಶವೂ ತನ್ನದೇ ಆದ ಸ್ಪಷ್ಟವಾದ ಗುಣಲಕ್ಷಣಗಳನ್ನು ಹೊಂದಿವೆ. ವಾಯುಗುಣ, ಮೇಲ್ಮೈಲಕ್ಷಣ, ಮಣ್ಣು, ಸಸ್ಯವರ್ಗ, ಪ್ರಾಣಿವರ್ಗ, ಮಾನವನ ವೃತ್ತಿ ಮುಂತಾದವುಗಳು ಅವುಗಳ ಪ್ರಮುಖ ಲಕ್ಷಣಗಳಾಗಿವೆ. ಇವುಗಳ ಒಂದೇ ಪ್ರದೇಶದಲ್ಲಿಯ ವ್ಯತ್ಯಾಸಗಳು ಬೇರೆ ಬೇರೆ ಪ್ರದೇಶಗಳಲ್ಲಿಯ ವ್ಯತ್ಯಾಸಕ್ಕಿಂತ ಕಡಿಮೆಯಾಗಿರುತ್ತವೆ. ಆದರೆ ಅಂತಹ ಪ್ರದೇಶಗಳ ಮಧ್ಯ ಯಾವುದೇ ನಿಖರವಾದ ಮೇರೆ ಇರುವುದಿಲ್ಲ. ಅವುಗಳ ವಿಸ್ತಾರ ಮತ್ತು ಮಿತಿಗಳು ಕೇವಲ ಅಂದಾಜಾಗಿರುತ್ತದೆ.

ಪ್ರಾಮುಖ್ಯ: ಪ್ರಪಂಚದ ವಿವಿಧ ಭಾಗಗಳ ಸ್ವಾಭಾವಿಕ ಪರಿಸರವನ್ನು ಹೋಲಿಕೆ ಮಾಡಿ ತಿಳಿದುಕೊಳ್ಳುವುದಕ್ಕೆ ಮತ್ತು ಮಾನವನ ಪ್ರತಿಕ್ರಿಯೆ ತಿಳಿಯಲು ಸ್ವಾಭಾವಿಕ ಪ್ರದೇಶಗಳ ಅಧ್ಯಯನವು ಬಹಳ ಉಪಯುಕ್ತ.

ವಿಧಗಳು: ಅತ್ಯಂತ ಪ್ರಮುಖ ನಿರ್ಣಾಯಕವಾದ ವಾಯುಗುಣವನ್ನಾಧರಿಸಿ ಭೂಮೇಲ್ಮೈಯನ್ನು ಅನೇಕ ಸ್ವಾಭಾವಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಪ್ರಮುಖ ಸ್ವಾಭಾವಿಕ ಪ್ರದೇಶಗಳು ಈ ಕೆಳಕಂಡಂತಿವೆ.

ವಿಧಗಳು: ಅತ್ಯಂತ ಪ್ರಮುಖ ನಿರ್ಣಾಯಕವಾದ ವಾಯುಗುಣವನ್ನಾಧರಿಸಿ ಭೂಮೇಲ್ಮೈಯನ್ನು ಅನೇಕ ಸ್ವಾಭಾವಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಪ್ರಮುಖ ಸ್ವಾಭಾವಿಕ ಪ್ರದೇಶಗಳು ಈ ಕೆಳಕಂಡಂತಿವೆ.
1 ಸಮಭಾಜಕ ವೃತ್ತಪ್ರದೇಶಗಳು ಅಥವಾ ಅಮೆಜಾನ್ ಮಾದರಿ.
2 ಉಷ್ಣವಲಯದ ಹುಲ್ಲುಗಾವಲು ಪ್ರದೇಶ ಅಥವಾ ಸುಡಾನ್ ಮಾದರಿ.
3 ಉಷ್ಣವಲಯದ ಮಾನ್ಸೂನ್ ಪ್ರದೇಶಗಳು.
4 ಉಷ್ಣವಲಯದ ಸಾಗರಿಕ ಪ್ರದೇಶಗಳು.
5 ಉಷ್ಣವಲಯದ ಮರುಭೂಮಿ ಪ್ರದೇಶಗಳು ಅಥವಾ ಸಹಾರಾ ಮಾದರಿ.
6 ಸಮಶೀತೋಷ್ಣವಲಯದ ಮರುಭೂಮಿಗಳು.
7 ಮೆಡಿಟರೇನಿಯನ್ ಪ್ರದೇಶಗಳು.
8 ಬೆಚ್ಚಗಿನ ಸಮಶೀತೋಷ್ಣವಲಯದ ಪೂರ್ವ ಅಂಚಿನ ಪ್ರದೇಶಗಳು (ಚೀನಾ ಮಾದರಿ).
9 ತಂಪು ಸಮಶೀತೋಷ್ಣವಲಯದ ಸಾಗರಿಕ ಪ್ರದೇಶಗಳು (ಪ.ಯೂರೋಪ್ ಮಾದರಿ).
10 ಸಮಶೀತೋಷ್ಣವಲಯದ ಹುಲ್ಲುಗಾವಲು ಪ್ರದೇಶಗಳು ಅಥವಾ ಪ್ರೈರಿ ಮಾದರಿ.
11 ತಂಪು ಸಮಶೀತೋಷ್ಣವಲಯದ ಪೂರ್ವ ಕರಾವಳಿ ಪ್ರದೇಶಗಳು (ಸೆಂಟ್ ಲಾರೆನ್ಸ್ ಮಾದರಿ).
12 ಶೀತ ಖಂಡಾಂತರ ಪ್ರದೇಶಗಳು ಅಥವಾ ಟೈಗಾ ಪ್ರದೇಶಗಳು.
13 ಟಂಡ್ರ ಪ್ರದೇಶಗಳು ಅಥವಾ ಶೀತ ಮರುಭೂಮಿ.

ಹೊಸ ಪದಗಳು

ಭೂಸ್ವರೂಪ, ಪರ್ವತ, ಬೆಟ್ಟ, ಪ್ರಸ್ಥಭೂಮಿ, ಮೈದಾನ, ಕಣಿವೆ, ಮರುಭೂಮಿ, ದ್ವೀಪ, ಶ್ರೇಣಿ, ಶಿಖರ, ಮಡಿಕೆ ಪರ್ವತಗಳು, ಖಂಡ ಪರ್ವತಗಳು, ಜ್ವಾಲಾಮುಖಿ ಪರ್ವತಗಳು, ಪೀಠಭೂಮಿ, ಖನಿಜ, ಹವಳ, ಸ್ವಾಭಾವಿಕ ಪ್ರದೇಶ, ವಾಯುಗುಣ.

ನಿಮಗೆ ತಿಳಿದಿರಲಿ

● ಪ್ರಪಂಚದ ಅತಿ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್.
● ಆಫ್ರಿಕಾದ ಪ್ರಸ್ಥಭೂಮಿಯು ಚಿನ್ನ ಮತ್ತು ವಜ್ರದ ಗಣಿಗಾರಿಕೆಗೆ ಪ್ರಸಿದ್ಧಿಯಾಗಿದೆ.
● ಗಂಗಾ ನದಿ ಮುಖಜಭೂಮಿಯು ಪ್ರಪಂಚದಲ್ಲೇ ದೊಡ್ಡದಾಗಿದ್ದು, ಇದನ್ನು ಸುಂದರವನ ಎಂತಲೂ ಕರೆಯುವರು.
● ಸಮಶೀತೋಷ್ಣವಲಯದ ಹುಲ್ಲುಗಾವಲುಗಳನ್ನು ಆಫ್ರಿಕಾದಲ್ಲಿ ಸ್ಪೈಪ್ಪಿ, ಉತ್ತರ ಅಮೆರಿಕಾದಲ್ಲಿ ಪ್ರೇರೀ, ದಕ್ಷಿಣ ಅಮೆರಿಕಾದಲ್ಲಿ ಪಂಪಾಸ್, ಆಸ್ಟ್ರೇಲಿಯಾದಲ್ಲಿ ಡೌನ್ಸ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ವೆಲ್ಸ್ ಎಂದು ಕರೆಯುವರು.
● ಭಾರತದ ವಾಯವ್ಯ ಭಾಗದಲ್ಲಿ ಉಷ್ಣವಲಯದ ಥಾರ್ ಮರುಭೂಮಿ ಇದೆ.

ಪೂರಕ ವಿಡಿಯೋಗಳು

Basic Geographical Terms in Hindi | Earth Landforms | Geography ಭೂಸ್ವರೂಪಗಳು Part-1

Basic Geographical Terms in Hindi | Earth Landforms | Geography ಭೂಸ್ವರೂಪಗಳು Part-2

ಮಡಿಕೆ ಪರ್ವತಗಳು Formation of Fold Mountains | How fold mountains formed ?

ಖಂಡ ಪರ್ವತಗಳು Formation of Block Mountains | Fault-Block Mountains | What is Block Mountains?

Types of mountains and how they are formed
How Mountains Are Formed
Volcanoes 101 | National Geographic
Plateaus and its types | Types of Plateaus
Mountain and Plain Landscapes | Educational Videos for Kids
Deserts 101 | National Geographic
Sahara : The Largest Desert In The World | Lesson For Kids
ISLAND GROUPS OF INDIA
The Islands l Class 4 l Social science l Andaman & Nicobar and Lakshadweep

ಅಭ್ಯಾಸಗಳು

https://youtu.be/psQQzQMzGn4

ಪಾಠದ ವಿಡಿಯೋ ಪ್ರಶ್ನೋತ್ತರಗಳಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ.

*********