ಶೈಕ್ಷಣಿಕ ಪ್ರವಾಸ 2022-23

ದಿನಾಂಕ 18-12-2022 ಹಾಗೂ 19-12-2022 ರಂದು ಶಾಲಾ ಶೈಕ್ಷಣಿಕ ಪ್ರವಾಸದ ನಿಮಿತ್ತ ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಹಾಗೂ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಾಗಿತ್ತು. 4 ರಿಂದ 7ನೇ ತರಗತಿಯ ಒಟ್ಟು 18 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಒಟ್ಟು 30 ಜನ ಪಾಲಕರೊಂದಿಗೆ ಪ್ರವಾಸಕ್ಕೆ ತೆರಳಲಾಗಿತ್ತು....

ಗದ್ದೆ ಕೊಯ್ಲು ಮಾಡಿದ ಶಾಲಾ ವಿದ್ಯಾರ್ಥಿಗಳು

ಕಳೆದ ಆಗಸ್ಟ್ ತಿಂಗಳಲ್ಲಿ ಈ ವಿದ್ಯಾರ್ಥಿಗಳು ಶಾಲೆಯ ಪಕ್ಕದ ಊರಾದ ಹೇಮಜಿನಿಯ ಲೋಕೇಶ ಪದ್ಮನಾಭ ಗೌಡ ಇವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದ್ದರು. ಇದೀಗ ತಾವೇ ನಾಟಿ ಮಾಡಿದ ಗದ್ದೆಯನ್ನು ಕೊಯ್ಲು ಮಾಡುವ ಮೂಲಕ ಭತ್ತದ ಗದ್ದೆಯ ಸಂಪೂರ್ಣ ಅನುಭವ ಪಡೆದರು. ಅಂದಾಜು 8 ಗುಂಟೆ ಭತ್ತದ ಕ್ಷೇತ್ರದಲ್ಲಿ ಶಾಲೆಯ ಆಸಕ್ತ 16 ವಿದ್ಯಾರ್ಥಿಗಳು...

ಕ್ಲಸ್ಟರ್ ಹಾಗೂ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ 2022-23 : ವಿದ್ಯಾರ್ಥಿಗಳ ಸಾಧನೆ

ಜಿಲ್ಲಾ ಮಟ್ಟಕ್ಕೆ ತೇಜಸ್ವಿ ಆಯ್ಕೆ 2022-23ನೇ ಸಾಲಿನ ಪ್ರತಿಭಾ ಕಾರಂಜಿಯು ಹಿರಿಯ ಪ್ರಾಥಮಿಕ ಶಾಲೆ ಬಿಳಗಿಯಲ್ಲಿ ನಡೆದಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ 14 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು 8 ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಕನ್ನಡ ಕಂಠಪಾಠ – ಜೆ. ಅಕ್ಷರ – ಪ್ರಥಮ, ಹಿಂದಿ ಕಂಠಪಾಠ...

ಪಠ್ಯಕ್ರಮದ ಜೊತೆ ವೃತ್ತಿ ಶಿಕ್ಷಣಕ್ಕೂ ಮಹತ್ವ ನೀಡುತ್ತಿರುವ ಹುಲ್ಕುತ್ರಿ ಶಾಲೆ

ಪ್ರಠ್ಯಕ್ರಮದಲ್ಲಿ ಬಂದ ಕೃಷಿ ಪಾಠ ಹಾಗೂ ಸೀನ ಸೆಟ್ಟರು ನಮ್ಮ ಟೀಚರು ಈ ಪಾಠಗಳ ನೈಜ ಅನುಭವಕ್ಕಾಗಿ ಪ್ರಾರಂಭಿಸಿದ ಹುಲ್ಕುತ್ರಿ ಶಾಲೆಯ ಗದ್ದೆನಾಟಿ ಕಾರ್ಯಕ್ರಮ ಕೃಷಿ ಅಧ್ಯಯನವಾಗಿ ಮಾರ್ಪಟ್ಟಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯ ಪಠ್ಯಕ್ರಮದ ಭಾಗವಾಗಿ ವೃತ್ತಿ ಶಿಕ್ಷಣವನ್ನೂ ಅಳವಡಿಸಿಕೊಂಡಂತಾಗಿದೆ. ಗದ್ದೆನಾಟಿಯ 5ನೇ...

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳ ಫಲಿತಾಂಶ

2022-23ನೇ ಸಾಲಿನ ಬಿಳಗಿ ವಲಯ ಮಟ್ಟದ ಕ್ರೀಡಾಕೂಟವು ಹಳ್ಳಿಬೈಲ್ ಪ್ರೌಢಶಾಲೆಯಲ್ಲಿ ದಿನಾಂಕ ಆಗಸ್ಟ್ ತಿಂಗಳ 17 ಹಾಗೂ 18 ರಂದು ನಡೆಯಿತು. ನಮ್ಮ ಶಾಲೆಯ 6 ಮತ್ತು 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ 14 ಮಕ್ಕಳೂ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು...