5-ಅಂಕಿಯ ಸಂಖ್ಯೆಗಳು

ಮುಖ್ಯಾಂಶಗಳು

5-ಅಂಕಿಯ ಸಂಖ್ಯೆಗಳು

ಕೆಲವು 5-ಅಂಕಿಗಳ ಸಂಖ್ಯೆಗಳು ಮತ್ತು ಅವುಗಳನ್ನು ಪದಗಳಲ್ಲಿ ಬರೆಯುವ ಕ್ರಮವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಿದೆ. ಅವುಗಳನ್ನು ಓದಿರಿ.

ಸಂಖ್ಯೆಗಳುಪದಗಳಲ್ಲಿ
10,001ಹತ್ತು ಸಾವಿರದ ಒಂದು
10,010ಹತ್ತು ಸಾವಿರದ ಹತ್ತು
11,279ಹನ್ನೊಂದು ಸಾವಿರದ ಎರಡು ನೂರ ಎಪ್ಪತ್ತೊಂಬತ್ತು
20,100ಇಪ್ಪತ್ತು ಸಾವಿರದ ಒಂದು ನೂರು
33,333ಮೂವತ್ಮೂರು ಸಾವಿರದ ಮೂರು ನೂರ ಮೂವತ್ಮೂರು
45,698ನಲವತ್ತೈದು ಸಾವಿರದ ಆರು ನೂರ ತೊಂಬತ್ತೆಂಟು
50,000ಐವತ್ತು ಸಾವಿರ
61,030ಅರವತ್ತೊಂದು ಸಾವಿರದ ಮೂವತ್ತು
75,032ಎಪ್ಪತ್ತೈದು ಸಾವಿರದ ಮೂವತ್ತೆರಡು
80,574ಎಂಬತ್ತು ಸಾವಿರದ ಐದು ನೂರ ಎಪ್ಪತ್ನಾಲ್ಕು
99,999ತೊಂಬತ್ತೊಂಬತ್ತು ಸಾವಿರದ ಒಂಬತ್ತು ನೂರ ತೊಂಬತ್ತೊಂಬತ್ತು

ಕೆಳಗಿನ ಕೋಷ್ಟಕವನ್ನು ಗಮನಿಸಿ.

ಗರಿಷ್ಠ ಸಂಖ್ಯೆ1 ಸೇರಿಸಿದಾಗಮೊತ್ತತೀರ್ಮಾನ
ಒಂದು ಅಂಕಿಯ ಗರಿಷ್ಠ ಸಂಖ್ಯೆ 99 + 110ಎರಡು ಅಂಕಿಗಳ ಕನಿಷ್ಠ ಸಂಖ್ಯೆ
ಎರಡು ಅಂಕಿಗಳ ಗರಿಷ್ಠ ಸಂಖ್ಯೆ 9999 + 1100ಮೂರು ಅಂಕಿಗಳ ಕನಿಷ್ಠ ಸಂಖ್ಯೆ
ಮೂರು ಅಂಕಿಗಳ ಗರಿಷ್ಠ ಸಂಖ್ಯೆ 999999 + 11,000ನಾಲ್ಕು ಅಂಕಿಗಳ ಕನಿಷ್ಠ ಸಂಖ್ಯೆ
ನಾಲ್ಕು ಅಂಕಿಗಳ ಗರಿಷ್ಠ ಸಂಖ್ಯೆ 9,9999,999 + 110,000ಐದು ಅಂಕಿಗಳ ಕನಿಷ್ಠ ಸಂಖ್ಯೆ
ಕೊಟ್ಟಿರುವ ಅಂಕಿಯ ಗರಿಷ್ಠ ಸಂಖ್ಯೆಗೆ ಒಂದನ್ನು ಸೇರಿಸಿದಾಗ ಮುಂದಿನ ಅಂಕಿಯ ಕನಿಷ್ಠ ಸಂಖ್ಯೆಯು ದೊರೆಯುತ್ತದೆ.

5-ಅಂಕಿ ಸಂಖ್ಯೆಯ ಸ್ಥಾನಬೆಲೆ ಕೋಷ್ಟಕ ಮತ್ತು ಅವುಗಳ ವಿಸ್ತಾರ ರೂಪ.

ಉದಾಹರಣೆ – 1

ಐವತ್ಮೂರು ಸಾವಿರದ ಇಪ್ಪತ್ತೈದರ ಸ್ಥಾನಬೆಲೆ ಮತ್ತು ವಿಸ್ತಾರ ರೂಪ ಬರೆಯಿರಿ.

ಸಾವಿರಗಳ ಗುಂಪುಘಟಕಗಳ ಗುಂಪು
ಹತ್ತು ಸಾವಿರಸಾವಿರನೂರುಹತ್ತುಬಿಡಿ
10,0001,000100101
53025
53,025

53,025 ರ ವಿಸ್ತಾರ ರೂಪ
5 x ಹತ್ತು ಸಾವಿರ + 3 x ಸಾವಿರ + 0 x ನೂರು + 2 x ಹತ್ತು + 5 x ಬಿಡಿ
= 5 x 10,000 + 3 x 1,000 + 0 x 100 + 2 x 10 + 5 x 1
= 50,000 + 3,000 + 0 + 20 + 5

ಉದಾಹರಣೆ – 2

98,431 ರ ವಿಸ್ತಾರ ರೂಪ
9 x ಹತ್ತು ಸಾವಿರ + 8 x ಸಾವಿರ + 4 x ನೂರು + 3 x ಹತ್ತು + 1 x ಬಿಡಿ
= 9 x 10,000 + 8 x 1,000 + 4 x 100 + 3 x 10 + 1 x 1
= 90,000 + 8,000 + 400 + 30 + 1

ವಿಸ್ತಾರ ರೂಪದಲ್ಲಿರುವ ಸಂಖ್ಯೆಯನ್ನು ಸಂಖ್ಯಾ ರೂಪದಲ್ಲಿ ಬರೆಯುವುದು

8 x ಹತ್ತು ಸಾವಿರ + 5 x ಸಾವಿರ + 2 x ನೂರು + 7 x ಹತ್ತು + 6 x ಬಿಡಿಯನ್ನು ಸಂಖ್ಯಾ ರೂಪದಲ್ಲಿ ಬರೆಯಿರಿ.
8 x ಹತ್ತು ಸಾವಿರ + 5 x ಸಾವಿರ + 2 x ನೂರು + 7 x ಹತ್ತು + 6 x ಬಿಡಿ
= 8 x 10,000 + 5 x 1,000 + 2 x 100 + 7 x 10 + 6 x 1
= 80,000 + 5,000 + 200 + 70 + 6 = 85,276

ಕೊಟ್ಟಿರುವ ಅಂಕಿಗಳಿಂದ 5-ಅಂಕಿಯ ಗರಿಷ್ಠ ಮತ್ತು ಕನಿಷ್ಠ ಸಂಖ್ಯೆಯನ್ನು ಬರೆಯುವುದು.

ಉದಾಹರಣೆ – 1

9, 4, 6, 1, 3 ಅಂಕಿಗಳನ್ನು ಪುನಃ ಉಪಯೋಗಿಸದೆ 5-ಅಂಕಿಯ ಗರಿಷ್ಠ ಮತ್ತು ಕನಿಷ್ಠ ಸಂಖ್ಯೆಯನ್ನು ಬರೆಯಿರಿ.
5-ಅಂಕಿಯ ಗರಿಷ್ಠ ಸಂಖ್ಯೆಯನ್ನು ಬರೆಯುವುದು.
• ಕೊಟ್ಟಿರುವ ಅಂಕಿಗಳನ್ನು ಹೋಲಿಸಿರಿ.
• ಆ ಅಂಕಿಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ 9, 6, 4, 3, 1.
• ಈಗ ಎಲ್ಲಾ ಅಂಕಿಗಳನ್ನು ಒಟ್ಟಾಗಿ ಬರೆದು ಗರಿಷ್ಠ ಸಂಖ್ಯೆಯನ್ನು ಪಡೆಯಿರಿ 96,431.
9, 4, 6, 1, 3 ಅಂಕಿಗಳನ್ನು ಪುನಃ ಉಪಯೋಗಿಸದೆ ಬರೆದ 5-ಅಂಕಿಯ ಗರಿಷ್ಠ ಸಂಖ್ಯೆಯು 96,431 ಆಗಿದೆ.

5-ಅಂಕಿಯ ಕನಿಷ್ಠ ಸಂಖ್ಯೆಯನ್ನು ಬರೆಯುವುದು.
• ಕೊಟ್ಟಿರುವ ಅಂಕಿಗಳನ್ನು ಹೋಲಿಸಿರಿ.
• ಆ ಅಂಕಿಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ 1, 3, 4, 6, 9.
• ಈಗ ಎಲ್ಲಾ ಅಂಕಿಗಳನ್ನು ಒಟ್ಟಾಗಿ ಬರೆದು ಕನಿಷ್ಠ ಸಂಖ್ಯೆಯನ್ನು ಪಡೆಯಿರಿ 13,469.
9, 4, 6, 1, 3 ಅಂಕಿಗಳನ್ನು ಪುನಃ ಉಪಯೋಗಿಸದೆ ಬರೆದ 5-ಅಂಕಿಯ ಕನಿಷ್ಠ ಸಂಖ್ಯೆಯು 13,469 ಆಗಿದೆ.

ಕೊಟ್ಟಿರುವ ಅಂಕಿಗಳಲ್ಲಿ ಒಂದು ಅಂಕಿಯು ಸೊನ್ನೆಯಾದಾಗ 5-ಅಂಕಿಯ ಕನಿಷ್ಠ ಸಂಖ್ಯೆಯನ್ನು ಬರೆಯುವುದು.

ಉದಾಹರಣೆ – 2

4, 8, 0, 2, 5 ಅಂಕಿಗಳನ್ನು ಪುನಃ ಉಪಯೋಗಿಸದೆ 5-ಅಂಕಿಯ ಕನಿಷ್ಠ ಸಂಖ್ಯೆಯನ್ನು ಬರೆಯಿರಿ.
• ಕೊಟ್ಟಿರುವ ಅಂಕಿಗಳನ್ನು ಹೋಲಿಸಿರಿ.
• ಆ ಅಂಕಿಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ 0, 2, 4, 5, 8.
• ಇವುಗಳಲ್ಲಿ ಸೊನ್ನೆ ಹಾಗೂ ನಂತರದ ಅಂಕಿಯ (2ರ) ಸ್ಥಾನವನ್ನು ಅದಲು ಬದಲು ಮಾಡಿ ಬರೆಯಿರಿ. 2, 0, 4, 5, 8.
• ಈ ಎಲ್ಲಾ ಅಂಕಿಗಳನ್ನು ಒಟ್ಟಾಗಿ ಬರೆದು ಕನಿಷ್ಠ ಸಂಖ್ಯೆ ಪಡೆಯಿರಿ 20,458.
4, 8, 0, 2, 5 ಅಂಕಿಗಳನ್ನು ಪುನಃ ಉಪಯೋಗಿಸದೆ ಬರೆದ 5-ಅಂಕಿಯ ಕನಿಷ್ಠ ಸಂಖ್ಯೆಯು 20,458 ಆಗಿದೆ.

ಕೊಟ್ಟಿರುವ 5-ಅಂಕಿ ಸಂಖ್ಯೆಯ ಹಿಂದಿನ ಮತ್ತು ಮುಂದಿನ ಸಂಖ್ಯೆಗಳು

ಈಗ ನಾವು 5-ಅಂಕಿಯ ಸಂಖ್ಯೆಗೆ ಹಿಂದಿನ ಹಾಗೂ ಮುಂದಿನ ಸಂಖ್ಯೆಯನ್ನು ಕಂಡು ಹಿಡಿಯುವ ಕ್ರಮವನ್ನು ಕಲಿಯೋಣ.

ಹಿಂದಿನ ಸಂಖ್ಯೆ (ಕೊಟ್ಟಿರುವ ಸಂಖ್ಯೆಗಿಂತ 1 ಕಡಿಮೆ)ಕೊಟ್ಟಿರುವ ಸಂಖ್ಯೆಮುಂದಿನ ಸಂಖ್ಯೆ (ಕೊಟ್ಟಿರುವ ಸಂಖ್ಯೆಗಿಂತ 1 ಹೆಚ್ಚು)
83,65283,65383,654
25,04725,04825,049
46,78946,79046,791
19,99920,00020,001

ಸಮಾನ ಅಂತರವಿರುವ ಸಂಖ್ಯೆಗಳನ್ನು ಬರೆಯುವುದು (Skip numbers)

ಉದಾಹರಣೆ 1
ಕೆಳಗಿನವುಗಳಿಗೆ ಬಿಟ್ಟ ಸಂಖ್ಯೆಗಳನ್ನು ಬರೆಯಿರಿ.
23,450, 23,700 , 23,950, ………………………… , ………………………. .
23,700 ಮತ್ತು 23,450 ರ ನಡುವಿನ ವ್ಯತ್ಯಾಸ 250.
23,950 ಮತ್ತು 23,700 ರ ನಡುವಿನ ವ್ಯತ್ಯಾಸ 250.
23,950ಕ್ಕೆ 250 ಅನ್ನು ಸೇರಿಸಿದಾಗ ಅದರ ಮುಂದಿನ ಸಂಖ್ಯೆಯನ್ನು ಪಡೆಯುತ್ತೇವೆ.
23,950 + 250 = 24,200. 24,200 ಮುಂದಿನ ಸಂಖ್ಯೆ.
24,200ರ ಮುಂದಿನ ಸಂಖ್ಯೆಯು 24,200 + 250 = 24,450
ಆದ್ದರಿಂದ 24,200 ಹಾಗೂ 24,450 ಈ ಎರಡು ಸಂಖ್ಯೆಗಳನ್ನು ಬಿಟ್ಟ ಸ್ಥಳಗಳಲ್ಲಿ ಬರೆಯಬೇಕು.
∴ 23,450, 23,700, 23,950, 24,200, 24,450

ಉದಾಹರಣೆ 2
ಕೆಳಗಿನವುಗಳಿಗೆ ಬಿಟ್ಟ ಸಂಖ್ಯೆಗಳನ್ನು ಬರೆಯಿರಿ.
25,017, 35,017, …………………… , ……………….……, 65,017.
25,017 ಮತ್ತು 35,017 ಇವುಗಳ ನಡುವಿನ ವ್ಯತ್ಯಾಸ 10,000.
10,000 ವನ್ನು 35,017 ಸಂಖ್ಯೆಗೆ ಸೇರಿಸಿದಾಗ ಮುಂದಿನ ಸಂಖ್ಯೆಯನ್ನು ಪಡೆಯುತ್ತೇವೆ.
35,017 + 10,000 = 45,017. ∴ 45,017 ಮುಂದಿನ ಸಂಖ್ಯೆ.
45,017 ರ ಮುಂದಿನ ಸಂಖ್ಯೆಯು 45,017 + 10,000 = 55,017
ಆದ್ದರಿಂದ 45,017 ಹಾಗೂ 55,017 ಈ ಎರಡು ಸಂಖ್ಯೆಗಳನ್ನು ಬಿಟ್ಟ ಸ್ಥಳಗಳಲ್ಲಿ ಬರೆಯಬೇಕು.

5–ಅಂಕಿಯ ಅತಿ ಚಿಕ್ಕ ಮತ್ತು ಅತಿ ದೊಡ್ಡ ಸಂಖ್ಯೆಯನ್ನು ಗುರುತಿಸುವುದು.

ಉದಾಹರಣೆ 1
52,428 ಮತ್ತು 81,214 ಇವುಗಳಲ್ಲಿ ಚಿಕ್ಕ ಸಂಖ್ಯೆಯನ್ನು ಕಂಡುಹಿಡಿಯಿರಿ.
ಹತ್ತುಸಾವಿರ ಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಹತ್ತು ಸಾವಿರ ಸ್ಥಾನದ ಅಂಕಿಗಳು 5 ಮತ್ತು 8. ಇವುಗಳಲ್ಲಿ 5 ಚಿಕ್ಕ ಸಂಖ್ಯೆ.
ಆದ್ದರಿಂದ 52,428 ಮತ್ತು 81,214 ರಲ್ಲಿ 52,428 ಚಿಕ್ಕ ಸಂಖ್ಯೆ.

ಉದಾಹರಣೆ 2
12,234 ಮತ್ತು 11,484 ಇವುಗಳಲ್ಲಿ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಿರಿ.
ಕೊಟ್ಟಿರುವ ಸಂಖ್ಯೆಗಳಲ್ಲಿ ಹತ್ತುಸಾವಿರ ಸ್ಥಾನದ ಅಂಕಿಗಳು ಸಮವಾಗಿದ್ದರೆ, ಸಾವಿರಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಹತ್ತುಸಾವಿರ ಸ್ಥಾನದ ಅಂಕಿಗಳು ಸಮವಾಗಿದೆ. ಆದ್ದರಿಂದ ಸಾವಿರ ಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಸಾವಿರಸ್ಥಾನದ ಅಂಕಿಗಳು 2 ಮತ್ತು 1. ಇವುಗಳಲ್ಲಿ 2 ದೊಡ್ಡ ಸಂಖ್ಯೆ.
ಆದ್ದರಿಂದ 12,234 ಮತ್ತು 11,484 ರಲ್ಲಿ 12,234 ದೊಡ್ಡ ಸಂಖ್ಯೆ.

5-ಅಂಕಿಯ ಸಂಖ್ಯೆಗಳನ್ನು ಏರಿಕೆ ಕ್ರಮದಲ್ಲಿ ಬರೆಯುವುದು.

ಉದಾಹರಣೆ 1
36,719, 36,952, 35,418, 43,709, 45,187 ಇವುಗಳನ್ನು ಏರಿಕೆಯ (ಆರೋಹಣ) ಕ್ರಮದಲ್ಲಿ ಬರೆಯಿರಿ.
ಕೊಟ್ಟಿರುವ ಸಂಖ್ಯೆಗಳಲ್ಲಿ ಹತ್ತುಸಾವಿರ ಸ್ಥಾನದ ಅಂಕಿಗಳು ಸಮವಾಗಿದ್ದರೆ, ಸಾವಿರ ಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಕೊಟ್ಟಿರುವ ಸಂಖ್ಯೆಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ.
35,418, 36,719, 36,952, 43,709, 45,187 ಸಂಖ್ಯೆಗಳು ಏರಿಕೆ ಕ್ರಮದಲ್ಲಿವೆ.

5 ಅಂಕಿಯ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ.

ಉದಾಹರಣೆ 2
57,093, 52,169, 54,917, 57,298, 58,791 ಸಂಖ್ಯೆಗಳನ್ನು ಇಳಿಕೆ (ಅವರೋಹಣ) ಕ್ರಮದಲ್ಲಿ ಬರೆಯಿರಿ.
ಕೊಟ್ಟಿರುವ ಸಂಖ್ಯೆಗಳಲ್ಲಿ ಹತ್ತುಸಾವಿರ ಸ್ಥಾನದ ಅಂಕಿಗಳು ಸಮವಾಗಿದ್ದರೆ, ಸಾವಿರ ಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಕೊಟ್ಟಿರುವ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ.
58,791 , 57,298 , 57,093 , 54,917 , 52,169 ಸಂಖ್ಯೆಗಳು ಇಳಿಕೆ ಕ್ರಮದಲ್ಲಿವೆ.

ವಿಡಿಯೋ ಪಾಠಗಳು

Samveda – 5th – Maths – 5 digit numbers (Part 1 of 3) (ಭಾಗ – 1)
5th Class | Mathematics | 5 Digit Numbers | (ಭಾಗ – 2)
Samveda – 5th – Maths – 5 digit numbers (Part 3 of 3) | (ಭಾಗ – 3)

ಅಭ್ಯಾಸಗಳು

ಪುನರಾವರ್ತನ ಅಭ್ಯಾಸ ಹಾಗೂ ಅಭ್ಯಾಸ 1.1 ತಿಳಿಯಲು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ