ಸುಮಾರು 2500 ವರ್ಷಗಳ ಹಿಂದೆ, ವೈದಿಕ ಚಿಂತನೆಗೆ ಭಿನ್ನವಾದ ಹಲವಾರು ಚಿಂತನ ಕ್ರಮಗಳು ಮೂಡಿಬಂದವು. ಗೌತಮ ಬುದ್ಧ ಮತ್ತು ಮಹಾವೀರರು ಹೊಸ ಚಿಂತನ ಕ್ರಮದ ಇಬ್ಬರು ಹರಿಕಾರರು. ಅವರ ಜೀವನ ಮತ್ತು ಬೋಧನೆಗಳನ್ನು ಈ ಹಿನ್ನೆಲೆಯಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ, ಅವರ ಕಾಲದಲ್ಲಿ ಸಿಂಧೂ-ಗಂಗಾ ನದಿಬಯಲಿನಲ್ಲಿದ್ದ ಹದಿನಾರು ಮಹಾಜನಪದಗಳು (ರಾಜತಂತ್ರ) ಮತ್ತು ಹಲವಾರು ಗಣರಾಜ್ಯಗಳು (ಗಣತಂತ್ರ) ಹೀಗೆ ಕಾರ್ಯನಿರ್ವಹಿಸುತ್ತಿದ್ದವು.

ಬೌದ್ಧ ಧರ್ಮ

ಸ್ಥಾಪಕ : ಗೌತಮ ಬುದ್ಧ

ಜನನ ಸ್ಥಳ : ನೇಪಾಳದ ಕಪಿಲವಸ್ತು ಸಮೀಪದ ‘ಲುಂಬಿನಿ’

ಬಾಲ್ಯದ ಹೆಸರು : ಸಿದ್ಧಾರ್ಥ

ತಂದೆ : ಶುದ್ಧೋದನ (ಶಾಕ್ಯ ಗಣರಾಜ್ಯದ ಮುಖ್ಯಸ್ಥ)

ತಾಯಿ : ಮಾಯಾದೇವಿ

ಪತ್ನಿ : ಯಶೋಧರಾ

ಪುತ್ರ : ರಾಹುಲ

ಸಿದ್ಧಾರ್ಥ ಜ್ಞಾನೋದಯವಾದ ಸ್ಥಳ (ಬುದ್ಧ) : ಬಿಹಾರದ ಗಯಾ (ಬುದ್ಧ ಗಯಾ)

‘ಬುದ್ಧ’ ಎಂದರೆ : ‘ಜ್ಞಾನಿ’, ‘ತಿಳಿದವನು’

ಮೊದಲ ಉಪದೇಶ : ಉತ್ತರಪ್ರದೇಶದ ವಾರಣಾಸಿಯ ಬಳಿ ಸಾರಾನಾಥ ಎಂಬಲ್ಲಿ.

ದೇಹತ್ಯಾಗ : ಬಿಹಾರದ ಕುಶೀನಗರ ಎಂಬಲ್ಲಿ

ಬೌದ್ಧರ ಪವಿತ್ರ ಗ್ರಂಥ : ತ್ರಿಪಿಟಕಗಳು (ವಿನಯ ಪಿಟಕ, ಸುತ್ತ ಪಿಟಕ ಮತ್ತು ಅಭಿದಮ್ಮ ಪಿಟಕ)

ಬುದ್ಧನ ಉಪದೇಶ ಇರುವ ಪ್ರಾಚೀನ ಗ್ರಂಥ : ‘ಸುತ್ತ ಪಿಟಕ’. ಪಾಲಿ ಭಾಷೆಯಲ್ಲಿದೆ.

ಉತ್ತರ ವೇದಗಳ ಕಾಲದಲ್ಲಿ ಯಜ್ಞಯಾಗಗಳು
ಬೌದ್ಧ ಧರ್ಮದ ದಾರ್ಮಿಕ ಚಿಹ್ನೆಗಳು (ಸಂಕೇತಗಳು)
ಗೌತಮ ಬುದ್ಧ
ಜನನ ಸ್ಥಳ : ನೇಪಾಳದ ಕಪಿಲವಸ್ತು ಸಮೀಪದ ‘ಲುಂಬಿನಿ’
ಜನನ ಸ್ಥಳ : ನೇಪಾಳದ ಕಪಿಲವಸ್ತು ಸಮೀಪದ ‘ಲುಂಬಿನಿ’
ಜನನ ಸ್ಥಳ : ನೇಪಾಳದ ಕಪಿಲವಸ್ತು ಸಮೀಪದ ‘ಲುಂಬಿನಿ’
ಗೌತಮ ಬುದ್ಧನ ಜನನ
ಬುದ್ಧ ಗಯಾ
ಗೌತಮ ಬುದ್ಧ ನಗರ ಪ್ರದಕ್ಷಿಣೆಯ ಸಮದರ್ಭದಲ್ಲಿ ಅವನ ಕಣ್ಣಿಗೆ ಬಿದ್ದ ನಾಲ್ಕು ಸನ್ನಿವೇಶಗಳು
ಮೊದಲ ಉಪದೇಶ : ಉತ್ತರಪ್ರದೇಶದ ವಾರಣಾಸಿಯ ಬಳಿ ಸಾರಾನಾಥ ಎಂಬಲ್ಲಿ.
ಮೊದಲ ಉಪದೇಶ : ಉತ್ತರಪ್ರದೇಶದ ವಾರಣಾಸಿಯ ಬಳಿ ಸಾರಾನಾಥ ಎಂಬಲ್ಲಿ.
ಕಿಸಾಗೋತಮಿ
ವಾರಣಾಸಿಯ ಸಾರಾನಾಥ ಮಂದಿರ
ವಾರಣಾಸಿಯ ಸಾರಾನಾಥ
ದೇಹತ್ಯಾಗ : ಬಿಹಾರದ ಕುಶೀನಗರ
ದೇಹತ್ಯಾಗ
ಬೌದ್ಧರ ಪವಿತ್ರ ಗ್ರಂಥ : ತ್ರಿಪಿಟಕಗಳು
ಬೌದ್ಧರ ಪವಿತ್ರ ಗ್ರಂಥ : ತ್ರಿಪಿಟಕಗಳು
ಪ್ರಾಚೀನ ತ್ರಿಪಿಟಕ
ಪಾಲಿ ಭಾಷೆಯ ಲಿಪಿ

ಜೈನ ಧರ್ಮ

ಸ್ಥಾಪಕ : 24ನೇ ತೀರ್ಥಂಕರ ವರ್ಧಮಾನ ಮಹಾವೀರ

ಜನನ : 2500 ವರ್ಷಗಳ ಹಿಂದೆ ವೈಶಾಲಿ ಸಮೀಪದ ಕುಂದ ಗ್ರಾಮದಲ್ಲಿ

ಹಿಂದಿನ ಹೆಸರು : ವರ್ಧಮಾನ

ತಂದೆ : ಸಿದ್ಧಾರ್ಥ

ತಾಯಿ : ತ್ರಿಶಲಾದೇವಿ

‘ಜಿನ’ : ‘ಮೋಹವನ್ನು ಗೆದ್ದವನು’

ಮಹಾವೀರನ ಅನುಯಾಯಿಗಳೇ ‘ಜೈನರು’

ದೇಹತ್ಯಾಗ : ಬಿಹಾರದ ‘ಪಾವಾಪುರಿ’

ಎರಡು ಪಂಥಗಳು : ಶ್ವೇತಾಂಬರ ಮತ್ತು ದಿಗಂಬರ

ಶ್ವೇತಾಂಬರರು : ಬಿಳಿಯ ವಸ್ತ್ರತೊಡುವ ಪಾರ್ಶ್ವನಾಥನ ಅನುಯಾಯಿಗಳು

ದಿಗಂಬರರು : ಬಟ್ಟೆಯನ್ನೇ ಧರಿಸದ ಮಹಾವೀರನ ಅನುಯಾಯಿಗಳು

ಶ್ರವಣಬೆಳಗೊಳ – ಕರ್ನಾಟಕದ ಪ್ರಸಿದ್ಧ ಜೈನರ ಧಾರ್ಮಿಕ ಕೇಂದ್ರ

ಜೈನರ ಧಾರ್ಮಿಕ ಚಿಹ್ನೆ
24ನೇ ತೀರ್ಥಂಕರ ವರ್ಧಮಾನ ಮಹಾವೀರ
ವರ್ಧಮಾನ ಮಹಾವೀರ
ಮಹಾವೀರ ಜನಿಸಿದ ಸ್ಥಳ ವೈಶಾಲಿ ಸಮೀಪದ ಕುಂದ ಗ್ರಾಮ
ಮಹಾವೀರ ಜನಿಸಿದ ಸ್ಥಳ ವೈಶಾಲಿ
ದೇಹತ್ಯಾಗ : ಬಿಹಾರದ ‘ಪಾವಾಪುರಿ’
ಶ್ವೇತಾಂಬರರು ಮತ್ತು ದಿಗಂಬರರು
ಮಹಾಜನಪದಗಳು
ವಜ್ಜಿ ಗಣರಾಜ್ಯ
ಶ್ರವಣಬೆಳಗೊಳ

ವಿಡಿಯೋ ಪಾಠಗಳು

ಬುದ್ಧನ ಜೀವನ ಚರಿತ್ರೆ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಕಿಸಾಗೋತಮಿಯ ಸಾವಿಲ್ಲದ ಮನೆಯ ಸಾಸಿವೆ – ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ವರ್ಧಮಾನ ಮಹಾವೀರನ ಸಂಕ್ಷಿಪ್ತ ಮಾಹಿತಿ | Brief information about Vardhamana Mahavira
Samveda – 6th – Social Science – Hosa Dharmagala Udaya

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.