ದಿನಾಂಕ 05-03-2021 ರಂದು ನಮ್ಮ ಶಾಲೆಯಲ್ಲಿ ಮಕ್ಕಳ ಸೃಜನಶೀಲತೆ ಹೊರಗೆಳೆಯಲು 5 ರಿಂದ 7ನೇ ತರಗತಿ ಮಕ್ಕಳಿಗೆ ರಂಗೋಲಿಯಲ್ಲಿ ಸಮಾಜ ವಿಜ್ಞಾನದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು.

ಪಿರಾಮಿಡ್, ಮೆಹರೌಲಿ ಕಿಬ್ಬಿಣದ ಕಂಬ, ಶಾತವಾಹನ ಸಾಮ್ರಾಜ್ಯ, ಬೆಳಗಾವಿ ವಿಭಾಗದ ನಕ್ಷೆ,  ಮೈಸೂರು ವಿಭಾಗದ ನಕ್ಷೆ, ನಮ್ಮ ಭಾರತ ನಕ್ಷೆ, ಬಹಮನಿ ಸಾಮ್ರಾಜ್ಯ ಹೀಗೆ ವಿವಿಧ ಚಿತ್ರಗಳನ್ನು ಬಿಡಿಸಿ ಮೆಚ್ಚುಗೆಗೆ ಪಾತ್ರರಾದರು.