ದಿನಾಂಕ 22-02-2021 ರಂದು ನಮ್ಮ ಶಾಲೆಯಲ್ಲಿ 4 ರಿಂದ 7ನೇ ತರಗತಿ ಮಕ್ಕಳಿಗೆ ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು.

ರಂಗೋಲಿಯಲ್ಲಿ ವಿಜ್ಞಾನದ ವಿವಿಧ ಚಿತ್ರಗಳು

ಸಸ್ಯದ ಬೇರುಗಳ ಪ್ರಕಾರಗಳು, ಹೂವಿನ ಭಾಗಗಳು, ಸಸ್ಯದಲ್ಲಿ ಆಹಾರ ತಯಾರಿಕೆ, ಸಸ್ಯದ ಭಾಗಗಳು, ನಿಷೇಚನ, ಮಾನವನ ವಿಸರ್ಜನಾಂಗವ್ಯೂಹ, ಎಲೆಯ ಸಿರ ವಿನ್ಯಾಸ, ಹೂವಿನ ಸಂತಾನೋತ್ಪತ್ತಿಯ ಭಾಗಗಳು ಹೀಗೆ ವಿವಿಧ ಚಿತ್ರಗಳನ್ನು ಬಿಡಿಸಿ ಮೆಚ್ಚುಗೆಗೆ ಪಾತ್ರರಾದರು.