ಏಷ್ಯ – ವೈಪರೀತ್ಯಗಳ ಖಂಡ – ಪಾಠ – 12

ಪಾಠದ ಪರಿಚಯ
ಏಷ್ಯ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ, ಪ್ರಾದೇಶಿಕ ವಿಭಾಗಗಳು, ಪ್ರಾಕೃತಿಕ ಲಕ್ಷಣಗಳು, ಪ್ರಮುಖ ನದಿಗಳು ಮತ್ತು ವ್ಯವಸಾಯ, ವಾಯುಗುಣ ಮತ್ತು ಸಸ್ಯವರ್ಗ, ಪ್ರಮುಖ ಖನಿಜಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು ಕುರಿತ ಪರಿಚಯ ಈ ಪಾಠದಲ್ಲಿದೆ.

1. ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ

ಪರಿಚಯ :
ಪ್ರಪಂಚದ ಭೂಖಂಡಗಳಲ್ಲಿ ಏಷ್ಯ ದೊಡ್ಡದು. ಹೀಗಾಗಿ ಅದು ಪ್ರಾಕೃತಿಕ ಲಕ್ಷಣ, ವಾಯುಗುಣ, ಸಸ್ಯವರ್ಗ, ವನ್ಯಜೀವಿ, ಮಣ್ಣಿನ ಪ್ರಕಾರ ಮೊದಲಾದವುಗಳಲ್ಲಿ ವೈವಿಧ್ಯ ಹೊಂದಿದೆ. ಈ ಖಂಡದಲ್ಲಿ ಅತ್ಯಂತ ಎತ್ತರವುಳ್ಳ ಪರ್ವತ, ಪ್ರಸ್ಥಭೂಮಿ, ಫಲವತ್ತಾದ ವಿಶಾಲ ಮೈದಾನ, ಮರುಭೂಮಿ, ನದಿ ವ್ಯವಸ್ಥೆ ಮತ್ತು ಸರೋವರಗಳು ಕಂಡುಬರುತ್ತವೆ. ಜೊತೆಗೆ ಭಾಷೆ, ಧರ್ಮ, ಜನಸಂಖ್ಯೆಯ ಹಂಚಿಕೆ ಮತ್ತು ಜನಸಾಂದ್ರತೆಗಳಲ್ಲಿಯೂ ನಾವು ವೈವಿಧ್ಯತೆಯನ್ನು ಕಾಣಬಹುದು. ಆದ್ದರಿಂದ ಏಷ್ಯವನ್ನು “ವೈಪರೀತ್ಯಗಳ ಖಂಡ” ಎಂದು ಕರೆಯುತ್ತಾರೆ.

ಸ್ಥಾನ:
ಏಷ್ಯ ಖಂಡವು 10 -161 ಉತ್ತರದಿಂದ 770 -411 ಉತ್ತರ ಅಕ್ಷಾಂಶ ಹಾಗೂ 260 -041 ಪೂರ್ವದಿಂದ 1690 -401 ಪಶ್ಚಿಮ ರೇಖಾಂಶಗಳ ನಡುವೆ ವಿಸ್ತರಿಸಿದೆ. ಮಲೇಷ್ಯದಿಂದ ಸ್ವಲ್ಪ ದಕ್ಷಿಣದಲ್ಲಿ ಭೂಮಧ್ಯರೇಖೆ ಹಾಗೂ ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತ ಮತ್ತು ಅರೇಬಿಯಗಳ ಮೂಲಕ ಹಾಯ್ದು ಹೋಗಿವೆ.

ವಿಸ್ತೀರ್ಣ:
ಏಷ್ಯಖಂಡದ ಒಟ್ಟು ಭೌಗೋಳಿಕ ವಿಸ್ತೀರ್ಣ ಸುಮಾರು 44 ಮಿಲಿಯನ್ ಚ.ಕಿ.ಮೀ.ಗಳು. ಇದು ಪ್ರಪಂಚದ ಮೇಲ್ಮೈ ವಿಸ್ತೀರ್ಣದಲ್ಲಿ ಶೇ.33 ಭಾಗದಷ್ಟಾಗಿದೆ. ಈ ಖಂಡವು ಪೂರ್ಣವಾಗಿ ಉತ್ತರ ಗೋಳಾರ್ಧದಲ್ಲಿದೆ.

ಭೌಗೋಳಿಕ ಸನ್ನಿವೇಶ:
ಏಷ್ಯಾ ಖಂಡವು ಮೂರು ಕಡೆ ಸಾಗರಗಳು ಮತ್ತು ಒಂದು ಕಡೆ ಭೂಭಾಗದಿಂದಾವರಿಸಿದೆ. ಸುತ್ತುವರಿದಿರುವ ಸಾಗರಗಳೆಂದರೆ: ಉತ್ತರದಲ್ಲಿ ಆಕ್ರ್ಟಿಕ್, ಪೂರ್ವಭಾಗದಲ್ಲಿ ಪೆಸಿಫಿಕ್ ಮತ್ತು ದಕ್ಷಿಣದಲ್ಲಿ ಹಿಂದೂಸಾಗರಗಳು. ಪಶ್ಚಿಮಕ್ಕೆ ಯೂರೋಪ್ ಖಂಡವಿದೆ.
ಏಷ್ಯ ಮತ್ತು ಯೂರೋಪ್ ಖಂಡಗಳ ಗಡಿಯು ಸಾಂಪ್ರದಾಯಿಕವಾದ ಕಾಲ್ಪನಿಕ ರೇಖೆಯಾಗಿದ್ದು, ಅದು ಅಂಕುಡೊಂಕಾಗಿದೆ ಮತ್ತು ಯೂರಲ್ ಪರ್ವತ, ಕ್ಯಾಸ್ಪಿಯನ್ ಸಮುದ್ರ, ಕಕಾಸಸ್ ಪರ್ವತ ಮತ್ತು ಕಪ್ಪು ಸಮುದ್ರಗಳ ಮುಖಾಂತರ ಹಾಯ್ದು ಹೋಗುತ್ತದೆ.

ಉತ್ತರದಲ್ಲಿ ಆಕ್ರ್ಟಿಕ್
ಪೂರ್ವಭಾಗದಲ್ಲಿ ಪೆಸಿಫಿಕ್
ದಕ್ಷಿಣದಲ್ಲಿ ಹಿಂದೂಸಾಗರ
ಪಶ್ಚಿಮಕ್ಕೆ ಯೂರೋಪ್ ಖಂಡ
ಯೂರಲ್ ಪರ್ವತ
ಯೂರಲ್ ಪರ್ವತ
ಕ್ಯಾಸ್ಪಿಯನ್ ಸಮುದ್ರ
ಕಕಾಸಸ್ ಪರ್ವತ
ಕಕಾಸಸ್ ಪರ್ವತ
ಕಪ್ಪು ಸಮುದ್ರ

ಯೂರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ‘ಯೂರೆಷ್ಯ’ ಎನ್ನುವರು.

ಏಷ್ಯ ಮತ್ತು ಆಫ್ರಿಕ ಖಂಡಗಳ ಗಡಿಯು ಸಾಮಾನ್ಯವಾಗಿ ಸೂಯೇಜ್ ಕಾಲುವೆಯ ಮುಖಾಂತರ ಹಾಗೂ ಏಷ್ಯ ಮತ್ತು ಆಸ್ಟ್ರೇಲಿಯಗಳ ಗಡಿ ರೇಖೆಯು ನ್ಯೂಗಿನಿ ಮತ್ತು ಆಸ್ಟ್ರೇಲಿಯಗಳ ನಡುವೆ ಹಾಯ್ದು ಹೋಗುತ್ತದೆ.

ಸೂಯೇಜ್ ಕಾಲುವೆ

2. ಏಷ್ಯದ ಪ್ರಾದೇಶಿಕ ವಿಭಾಗಗಳು

ಇಂದು ಏಷ್ಯದಲ್ಲಿ 48 ದೇಶಗಳಿವೆ. ಅವುಗಳನ್ನು ಕೆಳಕಂಡಂತೆ ಐದು ಪ್ರಾದೇಶಿಕ ಗುಂಪುಗಳಾಗಿ ವಿಂಗಡಿಸಲಾಗಿದೆ.

1) ಪೂರ್ವ ಏಷ್ಯ : ಇದರಲ್ಲಿ ಚೀನ, ಉತ್ತರ ಮತ್ತು ದಕ್ಷಿಣ ಕೊರಿಯ, ಜಪಾನ್, ಹಾಂಕ್‍ಕಾಂಗ್, ತೈವಾನ್ ಮತ್ತು ಮಂಗೋಲಿಯ ದೇಶಗಳು ಸೇರಿವೆ. ಇದು ಉತ್ತರದಲ್ಲಿ ವಿಶಾಲವಾದ ರಷ್ಯ, ದಕ್ಷಿಣದಲ್ಲಿ ದಕ್ಷಿಣ ಏಷ್ಯ ಮತ್ತು ಆಗ್ನೇಯ ಏಷ್ಯಗಳ ನಡುವೆ ವಿಸ್ತರಿಸಿದೆ.

ಚೀನ
ಉತ್ತರ ಕೊರಿಯ
ದಕ್ಷಿಣ ಕೊರಿಯ
ಉತ್ತರ ಮತ್ತು ದಕ್ಷಿಣ ಕೊರಿಯ
ಜಪಾನ್
ಹಾಂಕ್‍ಕಾಂಗ್
ತೈವಾನ್
ಮಂಗೋಲಿಯ

2) ಆಗ್ನೇಯ ಏಷ್ಯ : ಇದು ಮಯನ್ಮಾರ್, ಲಾವೋಸ್, ವಿಯೆಟ್ನಾಂ, ಥೈಲೆಂಡ್, ಕಾಂಬೋಡಿಯಾ, ಮಲೇಷ್ಯ, ಇಂಡೊನೇಷ್ಯ, ಸಿಂಗಾಪುರ, ಬ್ರುನ್ಹೆ ಮತ್ತು ಫಿಲಿಪ್ಪೈನ್ಸ್ ದೇಶಗಳನ್ನೊಳಗೊಂಡಿದೆ. ಇದೊಂದು ಪರ್ಯಾಯ ದ್ವೀಪ ಹಾಗೂ ದ್ವೀಪ ಸಮೂಹಗಳ ಪ್ರದೇಶ. ಉದಾ : ಸುಮಾತ್ರ, ಜಾವ, ಸುಲಾವೇಶಿ, ಬೋರ್ನಿಯೊ, ಪಾಪುವ ಇತ್ಯಾದಿ. ಇದರ ಪಶ್ಚಿಮಕ್ಕೆ ಹಿಂದೂಸಾಗರ ಮತ್ತು ಪೂರ್ವಕ್ಕೆ ಪೆಸಿಫಿಕ್ ಸಾಗರಗಳಿವೆ.

ಮಯನ್ಮಾರ್
ಲಾವೋಸ್
ವಿಯೆಟ್ನಾಂ
ಥೈಲೆಂಡ್
ಕಾಂಬೋಡಿಯಾ
ಮಲೇಷ್ಯ
ಇಂಡೊನೇಷ್ಯ
ಸಿಂಗಾಪುರ
ಫಿಲಿಪ್ಪೈನ್ಸ್
ಬ್ರುನ್ಹೆ
ಬ್ರುನ್ಹೆ
ಸುಮಾತ್ರ
ಜಾವ
ಸುಲಾವೇಶಿ
ಬೋರ್ನಿಯೊ
ಪಾಪುವ

3) ದಕ್ಷಿಣ ಏಷ್ಯ : ಇದು ಭಾರತ, ಬಾಂಗ್ಲಾದೇಶ, ಭೂತಾನ, ನೇಪಾಲ, ಪಾಕಿಸ್ತಾನ, ಶ್ರೀಲಂಕ ಮತ್ತು ಮಾಲ್ಡೀವ್ಸ್‍ಗಳನ್ನು ಒಳಗೊಂಡಿದೆ. ಇವುಗಳಲ್ಲಿ ಭಾರತ ಅತಿ ದೊಡ್ಡದು. ಇದನ್ನು ದಕ್ಷಿಣದಲ್ಲಿ ಹಿಂದೂಸಾಗರ ಮತ್ತು ಅದರ ಉಪಭಾಗಗಳಾದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳು ಸುತ್ತುವರಿದಿವೆ. ಉತ್ತರದಲ್ಲಿ ಹಿಮಾಲಯ ಪರ್ವತ ಸರಣಿ, ಪೂರ್ವಕ್ಕೆ ಮಯನ್ಮಾರ್ ಮತ್ತು ಪಶ್ಚಿಮಕ್ಕೆ ಅಪ್ಘಾನಿಸ್ತಾನಗಳಿವೆ.

ಭಾರತ
ಬಾಂಗ್ಲಾದೇಶ
ಭೂತಾನ
ನೇಪಾಲ
ಪಾಕಿಸ್ತಾನ
ಮಾಲ್ಡೀವ್ಸ್‍
ಬಂಗಾಳ ಕೊಲ್ಲಿ
ಅರಬ್ಬಿ ಸಮುದ್ರ
ಹಿಂದೂಸಾಗರ
ಹಿಮಾಲಯ ಪರ್ವತ ಸರಣಿ
ಪೂರ್ವಕ್ಕೆ ಮಯನ್ಮಾರ್
ಪಶ್ಚಿಮಕ್ಕೆ ಅಪ್ಘಾನಿಸ್ತಾನ

4) ನೈಋತ್ಯ ಏಷ್ಯ : ಅಫ್‍ಘಾನಿಸ್ತಾನ, ಬಹ್ರೇನ್, ಸೈಪ್ರಸ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಓಮನ್, ಕಟಾರ್, ಸಿರಿಯ, ಪ್ಯಾಲೆಪ್ಟೈನ್, ಸೌದಿಅರೇಬಿಯ, ಅರಬ್ ಎಮಿರೇಟ್ಸ್, ಯೆಮನ್ ಮತ್ತು ಟರ್ಕಿ ದೇಶಗಳು ಈ ವಿಭಾಗದಲ್ಲಿ ಸೇರುತ್ತವೆ. ಈ ವಿಭಾಗವು ಕಪ್ಪುಸಮುದ್ರದ ದಕ್ಷಿಣ ಭಾಗದಲ್ಲಿದ್ದು, ಪಶ್ಚಿಮಕ್ಕೆ ಮೆಡಿಟರೇನಿಯನ್ ಸಮುದ್ರ ಮತ್ತು ಪೂರ್ವಕ್ಕೆ ಭಾರತಗಳ ನಡುವೆ ವಿಸ್ತರಿಸುತ್ತದೆ. ಇದು ಬಹಳವಾಗಿ ಮರುಭೂಮಿ ಮತ್ತು ಅರೆಮರುಭೂಮಿಗಳಿಂದ ಆವರಿಸಿದ್ದರೂ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳಿಂದ ಸಮೃದ್ಧವಾಗಿದೆ.

ಬಹ್ರೇನ್
ಸೈಪ್ರಸ್
ಇರಾನ್
ಇಸ್ರೇಲ್
ಜೋರ್ಡಾನ್
ಕುವೈತ್
ಲೆಬನಾನ್
ಓಮನ್
ಕಟಾರ್
ಸಿರಿಯ
ಪ್ಯಾಲೆಪ್ಟೈನ್
ಸೌದಿಅರೇಬಿಯ
ಅರಬ್ ಎಮಿರೇಟ್ಸ್
ಯೆಮನ್
ಟರ್ಕಿ

5) ಮಧ್ಯ ಏಷ್ಯ : ಇದು ಪಶ್ಚಿಮ ಕ್ಯಾಸ್ಪಿಯನ್ ಸಮುದ್ರದಿಂದ ಪೂರ್ವದಲ್ಲಿ ಚೀನದವರೆಗೆ ಹಾಗೂ ಉತ್ತರದಲ್ಲಿ ಕಜಕಿಸ್ತಾನದಿಂದ ದಕ್ಷಿಣದಲ್ಲಿ ಇರಾನ್-ಅಪ್ಘಾನಿಸ್ತಾನಗಳವರೆಗೆ ವಿಸ್ತರಿಸಿದೆ. ಈ ಭಾಗದ ಪ್ರಮುಖ ದೇಶಗಳೆಂದರೆ : ಕಜಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ಟಕ್ರ್ಮೇನಿಸ್ತಾನ ಮತ್ತು ಉಜ್ಬೇಕಿಸ್ತಾನ ಹಾಗೂ ಸೈಬೀರಿಯ(ರಷ್ಯ)ಗಳು.

ಕಜಕಿಸ್ತಾನ
ಕಿರ್ಗಿಸ್ತಾನ
ತಜಕಿಸ್ತಾನ
ಟಕ್ರ್ಮೇನಿಸ್ತಾನ
ಉಜ್ಬೇಕಿಸ್ತಾನ
ಉಜ್ಬೇಕಿಸ್ತಾನ
ಸೈಬೀರಿಯ(ರಷ್ಯ)

3. ಪ್ರಾಕೃತಿಕ ಲಕ್ಷಣಗಳು

ಏಷ್ಯದ ಪ್ರಾಕೃತಿಕ ಲಕ್ಷಣಗಳಲ್ಲಿ ಎತ್ತರವಾದ ಪರ್ವತ ಸರಣಿಗಳು ಪ್ರಮುಖ ಭೂಸ್ವರೂಪಗಳಾಗಿವೆ. ಜೊತೆಗೆ ವಿವಿಧ ಪ್ರಸ್ಥಭೂಮಿ, ಮೆಕ್ಕಲು ಮಣ್ಣುಳ್ಳ ಮೈದಾನ ಮತ್ತು ದ್ವೀಪ ಸಮೂಹಗಳನ್ನೂ ಹೊಂದಿದೆ.

ಪ್ರಮುಖ ಪ್ರಾಕೃತಿಕ ವಿಭಾಗಗಳು :
ಭೂರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನಾಧರಿಸಿ ಏಷ್ಯಖಂಡವನ್ನು ಐದು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಬಹುದು:

1) ವಾಯವ್ಯ ತಗ್ಗು ಮೈದಾನಗಳು
2) ಕೇಂದ್ರದ ಎತ್ತರ ಭಾಗಗಳು
3) ದಕ್ಷಿಣ ಪ್ರಸ್ಥಭೂಮಿಗಳು
4) ನದಿಗಳ ಮಹಾ ಮೈದಾನಗಳು
5) ದ್ವೀಪ ಸಮೂಹಗಳು

1) ವಾಯವ್ಯ ತಗ್ಗು ಮೈದಾನಗಳು : ಈ ವಿಭಾಗವು ಏಷ್ಯದ ಪ್ರಾಕೃತಿಕ ಲಕ್ಷಣಗಳಲ್ಲಿ ಹೆಚ್ಚು ಮಹತ್ವವುಳ್ಳದ್ದು. ಬೇರಿಂಗ್ ಜಲಸಂಧಿಯಿಂದ ಕ್ಯಾಸ್ಪಿಯನ್ ಸಮುದ್ರದವರೆಗೆ ವಿಸ್ತರಿಸಿದೆ. ಕೇಂದ್ರದ ಎತ್ತರ ಭಾಗಗಳು ಮತ್ತು ಆಕ್ರ್ಟಿಕ್ ಸಾಗರದ ನಡುವೆ ಕಂಡುಬರುತ್ತದೆ. ತ್ರಿಕೋನ ಆಕಾರವುಳ್ಳ ಈ ವಿಶಾಲವಾದ ತಗ್ಗು ಮೈದಾನವನ್ನು `ಸೈಬೀರಿಯ ಮೈದಾನ’ ಎಂದು ಕರೆಯುತ್ತಾರೆ. ಉತ್ತರದ ಕಡೆಗೆ ಸಾಧಾರಣ ಇಳಿಜಾರುಳ್ಳದ್ದು. ಈ ಮೈದಾನದ ಮೂಲಕ ಕೆಲವು ನದಿಗಳು ಹರಿಯುತ್ತವೆ. ಉದಾ: ಲೀನ, ಓಬ್ ಮತ್ತು ಯೆನ್ಸಿ. ಇವು ಉತ್ತರದ ಕಡೆಗೆ ಹರಿದು ಆಕ್ರ್ಟಿಕ್ ಸಾಗರವನ್ನು ಸೇರುತ್ತವೆ.

`ಸೈಬೀರಿಯ ಮೈದಾನ’
ಲೀನ ನದಿ
ಲೀನ, ಓಬ್ ಮತ್ತು ಯೆನ್ಸಿ ನದಿಗಳು

2) ಕೇಂದ್ರದ ಎತ್ತರ ಭಾಗಗಳು : ಇದು ಏಷ್ಯದ ಎರಡನೆ ಅತಿ ಪ್ರಮುಖ ಪ್ರಾಕೃತಿಕ ವಿಭಾಗ. ವಾಯವ್ಯ ತಗ್ಗು ಮೈದಾನಗಳ ದಕ್ಷಿಣ ಭಾಗದಲ್ಲಿವೆ. ಮಧ್ಯ ಏಷ್ಯದಲ್ಲಿರುವ ಪರ್ವತ ಸರಣಿಗಳನ್ನು `ಕೇಂದ್ರದ ಎತ್ತರ ಭಾಗಗಳು’ ಎನ್ನುವರು. ಇದು ಏಷ್ಯ ಮೈನರ್‍ನಿಂದ ಬೇರಿಂಗ್ ಜಲಸಂಧಿವರೆಗೂ ವಿಸ್ತರಿಸಿದೆ. ಇಲ್ಲಿ ಅನೇಕ ಪರ್ವತ ಸರಣಿಗಳು ಪಾಮಿರ್ ಗ್ರಂಥಿಯಿಂದ ಎಲ್ಲೆಡೆಗೂ ಹಬ್ಬಿವೆ. ಪೂರ್ವದಿಕ್ಕಿನ ಸರಣಿಗಳಲ್ಲಿ ಹಿಮಾಲಯ, ಕುನ್‍ಲುನ್, ಕಾರಾಕೋರಂ, ಟಿಯೆನ್‍ಶಾನ್, ಆಲ್ಟಾಯ್, ಸಯಾನ್, ಯಬ್ಲೋನಿ, ಕಿಂಗಾನ್ ಮತ್ತು ಸ್ಟಾನ್‍ವಾಯ್ ಪರ್ವತಗಳು ಮುಖ್ಯವಾದವು. ಪಶ್ಚಿಮದ ಸರಣಿಗಳಲ್ಲಿ ಹಿಂದುಕುಶ್, ಕಿರ್ತಾರ್, ಸುಲೈಮಾನ್, ಎಲ್ಬರ್ಜ್, ಜಾಗ್ರೋಸ್, ಕಕಾಸಸ್, ಪೊಂಟಿನ್ ಮತ್ತು ತಾರಸ್ ಪರ್ವತಗಳು ಸೇರಿವೆ.

ಪಾಮಿರ್ ಗ್ರಂಥಿ
ಹಿಮಾಲಯ ಪರ್ವತ ಸರಣಿ
ಕುನ್‍ಲುನ್ ಪರ್ವತ ಸರಣಿ
ಕಾರಾಕೋರಂ
ಟಿಯೆನ್‍ಶಾನ್
ಆಲ್ಟಾಯ್
ಸಯಾನ್, ಯಬ್ಲೋನಿ, ಸ್ಟಾನ್‍ವಾಯ್ ಪರ್ವತಗಳು
ಕಿಂಗಾನ್
ಸುಲೈಮಾನ್
ಕಿರ್ತಾರ್
ತಾರಸ್ ಪರ್ವತಗಳು

ಮಡಿಕೆ ಪರ್ವತಗಳಾದ ಹಿಮಾಲಯದ ಮೌಂಟ್ ಎವರೆಸ್ಟ್ ಸರಣಿಯು ಪಾಮಿರ್ ಗ್ರಂಥಿಯಿಂದ ಆಗ್ನೇಯಕ್ಕೆ ಹಬ್ಬಿವೆ. ಅವು ಪ್ರಪಂಚದಲ್ಲೇ ಅತ್ಯಂತ ಎತ್ತರವಾದ ಪರ್ವತಗಳು. ಇಲ್ಲಿನ ಮೌಂಟ್ ಎವರೆಸ್ಟ್ ಪ್ರಪಂಚದಲ್ಲೇ ಎತ್ತರವಾದ ಶಿಖರ.

ಮೌಂಟ್ ಎವರೆಸ್ಟ್
ಮೌಂಟ್ ಎವರೆಸ್ಟ್

ಪರ್ವತ ಸರಣಿಗಳ ನಡುವೆ ಅನೇಕ ಪ್ರಸ್ಥ ಭೂಮಿಗಳಿವೆ. ಉದಾ: ಟಿಬೆಟ್, ಮಂಗೋಲಿಯ, ಇರಾನ್, ಅನಟೋಲಿಯ ಪ್ರಸ್ಥಭೂಮಿ ಇತ್ಯಾದಿ. ಏಷ್ಯ ಖಂಡದ ಅನೇಕ ನದಿಗಳು ಈ ಎತ್ತರದ ಭಾಗಗಳಲ್ಲಿ ಉಗಮವಾಗುತ್ತವೆ.

ಟಿಬೆಟ್ ಪ್ರಸ್ಥಭೂಮಿ
ಮಂಗೋಲಿಯ ಪ್ರಸ್ಥಭೂಮಿ
ಇರಾನ್ ಪ್ರಸ್ಥಭೂಮಿ
ಅನಟೋಲಿಯ ಪ್ರಸ್ಥಭೂಮಿ

3) ದಕ್ಷಿಣ ಪ್ರಸ್ಥಭೂಮಿಗಳು : ಇವು ಕಠಿಣ ಮತ್ತು ಸ್ಫಟಿಕ ಶಿಲೆಗಳಿಂದ ರಚನೆಗೊಂಡ ಪುರಾತನ ಪ್ರಸ್ಥಭೂಮಿಗಳು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅರೇಬಿಯ, ದಖನ್ (ಭಾರತ), ಯುನ್ನಾನ್ (ಚೀನ) ಮತ್ತು ಶಾನ್ (ಮಯನ್ಮಾರ್) ಪ್ರಸ್ಥಭೂಮಿ.

ಅರೇಬಿಯ ಪ್ರಸ್ಥಭೂಮಿ
ದಖನ್ (ಭಾರತ) ಪ್ರಸ್ಥಭೂಮಿ
ಯುನ್ನಾನ್ (ಚೀನ) ಪ್ರಸ್ಥಭೂಮಿ
ಶಾನ್ (ಮಯನ್ಮಾರ್) ಪ್ರಸ್ಥಭೂಮಿ

ಅರೇಬಿಯ ಪ್ರಸ್ಥಭೂಮಿಯು ಒಂದು ಪರ್ಯಾಯ ದ್ವೀಪ ಮತ್ತು ಇದೊಂದು ಶುಷ್ಕ ಪ್ರದೇಶ.
ದಖನ್ ಪ್ರಸ್ಥಭೂಮಿಯು ಭಾರತದ ಪರ್ಯಾಯ ದ್ವೀಪದ ಹೆಚ್ಚು ಭಾಗವನ್ನಾವರಿಸಿದೆ. ಮಧ್ಯಭಾರತದ ಬೆಟ್ಟದ ಸಾಲುಗಳು, ಪಶ್ಚಿಮ ಘಟ್ಟ ಹಾಗೂ ಪೂರ್ವ ಘಟ್ಟಗಳ ನಡುವೆ ಇದೆ. ಇದು ಪೂರ್ವ ದಿಕ್ಕಿಗೆ ಇಳಿಜಾರಾಗಿದ್ದು, ಆ ಮೂಲಕ ಅನೇಕ ನದಿಗಳು ಹರಿಯುವವು.
ಚೀನದ ನೈಋತ್ಯಕ್ಕೆ ಯುನ್ನಾನ್ ಪ್ರಸ್ಥಭೂಮಿಯಿದೆ. ಇದೊಂದು ಉನ್ನತ ಸುಣ್ಣಕಲ್ಲು ಪ್ರದೇಶ. ಇದರ ಮುಂದುವರಿದ ಭಾಗವೇ ಶಾನ್ ಪ್ರಸ್ಥಭೂಮಿ.

4) ನದಿಗಳ ಮಹಾ ಮೈದಾನಗಳು : ಹಿಂದೂ ಸಾಗರ ಅಥವಾ ಪೆಸಿಫಿಕ್ ಸಾಗರಗಳಿಗೆ ಸೇರುವ ಏಷ್ಯದ ನದಿಗಳ ಮೈದಾನಗಳನ್ನೊಳಗೊಂಡಿದೆ. ಇಲ್ಲಿ ಹರಿಯುವ ನದಿಗಳು ಮೆಕ್ಕಲು ಮಣ್ಣನ್ನು ಸಂಚಯ ಮಾಡುವುದರೊಂದಿಗೆ ಫಲವತ್ತಾದ ಮೈದಾನಗಳನ್ನು ನಿರ್ಮಿಸಿವೆ. ಈ ವಿಭಾಗದ ಪ್ರಮುಖ ಮೈದಾನಗಳೆಂದರೆ: ಸಿರಿಯ ಮತ್ತು ಇರಾಕ್‍ನ ಟೈಗ್ರಿಸ್-ಯುಪ್ರಟೀಸ್, ಭಾರತ-ಪಾಕಿಸ್ತಾನಗಳ ಸಿಂಧೂ-ಗಂಗ ಮೈದಾನಗಳು, ಮಯನ್ಮಾರಿನ ಇರವಾಡಿ, ಇಂಡೊಚೀನದ ಮೀನಾಮ್ ಮತ್ತು ಮೀಕಾಂಗ್, ಚೀನದ ಚಿಯಾಂಗ್-ಜಿಯಾಂಗ್ (ಯಾಂಗ್‍ಟ್ಸೆ), ಸಿಕಿಯಾಂಗ್ ಮತ್ತು ಹ್ವಾಂಗ್‍ಹೊ ನದಿ ಮೈದಾನಗಳು. ಇವು ಹೆಚ್ಚು ಜನಭರಿತವಾಗಿವೆ.

ಸಿರಿಯ ಮತ್ತು ಇರಾಕ್‍ನ ಟೈಗ್ರಿಸ್-ಯುಪ್ರಟೀಸ್
ಸಿರಿಯ ಮತ್ತು ಇರಾಕ್‍ನ ಟೈಗ್ರಿಸ್-ಯುಪ್ರಟೀಸ್
ಭಾರತ-ಪಾಕಿಸ್ತಾನಗಳ ಸಿಂಧೂ-ಗಂಗ ಮೈದಾನಗಳು
ಮಯನ್ಮಾರಿನ ಇರವಾಡಿ
ಇಂಡೊಚೀನದ ಮೀನಾಮ್ ಮತ್ತು ಮೀಕಾಂಗ್
ಚೀನದ ಚಿಯಾಂಗ್-ಜಿಯಾಂಗ್ (ಯಾಂಗ್‍ಟ್ಸೆ) ನದಿ
ಹ್ವಾಂಗ್‍ಹೊ ನದಿ

5) ದ್ವೀಪ ಸಮೂಹ : ಏಷ್ಯಖಂಡದ ಆಗ್ನೇಯ ಮತ್ತು ಪೆಸಿಫಿಕ್ ತೀರಗಳಲ್ಲಿ ಅನೇಕ ದ್ವೀಪಗಳಿವೆ. ಅವು ಉತ್ತರದಲ್ಲಿ ಕಮಚಟ್ಕದಿಂದ ದಕ್ಷಿಣದಲ್ಲಿ ಫಿಲಿಪ್ಪೈನ್ಸ್ ಮತ್ತು ಬೋರ್ನಿಯೊವರೆಗೆ ಮಾಲೆಯಂತೆ ಹಬ್ಬಿವೆ. ಅವು ಐದು ಸಮುದ್ರಗಳಿಂದ ಆವರಿಸಿವೆ. ಉದಾ: ಓಖೋಟಸ್ಕ ಸಮುದ್ರ, ಜಪಾನ್ ಸಮುದ್ರ, ಹಳದಿ ಸಮುದ್ರ, ಪೂರ್ವ ಚೀನ ಸಮುದ್ರ ಮತ್ತು ದಕ್ಷಿಣ ಚೀನ ಸಮುದ್ರ.

ಓಖೋಟಸ್ಕ ಸಮುದ್ರ
ಜಪಾನ್ ಸಮುದ್ರ
ಹಳದಿ ಸಮುದ್ರ
ಪೂರ್ವ ಚೀನ ಸಮುದ್ರ
ದಕ್ಷಿಣ ಚೀನ ಸಮುದ್ರ

ಪ್ರಮುಖ ದ್ವೀಪ ಸಮೂಹಗಳೆಂದರೆ : ಕ್ಯೂರೈಲ್, ಜಪಾನ್, ಲಾಚು, ಫಿಲಿಪ್ಪೈನ್ಸ್ ಮತ್ತು ಬೋರ್ನಿಯೊ. ಇವುಗಳಲ್ಲಿ ಬಹಳಷ್ಟು ಜ್ವಾಲಾಮುಖಿ ಜನಿತವಾದವು. ಜೊತೆಗೆ ಫಲವತ್ತಾದ ಮಣ್ಣು, ಆಳವಾದ ಕಣಿವೆ ಮತ್ತು ಶಂಖಾಕೃತಿ ಪರ್ವತಗಳನ್ನು ಹೊಂದಿವೆ.

ಕ್ಯೂರೈಲ್ ದ್ವೀಪ ಸಮೂಹ
ಜಪಾನ್ ದ್ವೀಪ ಸಮೂಹ
ಲಾಚು ದ್ವೀಪ ಸಮೂಹ (Lantau)
ಬೋರ್ನಿಯೊ ದ್ವೀಪ ಸಮೂಹ
ಫಿಲಿಪ್ಪೈನ್ಸ್ ದ್ವೀಪ ಸಮೂಹ

4. ಪ್ರಮುಖ ನದಿಗಳು ಮತ್ತು ವ್ಯವಸಾಯ

ಏಷ್ಯದ ನದಿಗಳು : ಏಷ್ಯದ ನದಿ ಜಾಲಗಳಲ್ಲಿ ವೈವಿಧ್ಯವಿದೆ. ಈ ಖಂಡದ ನದಿವ್ಯವಸ್ಥೆಯ ಮೇಲೆ ಪ್ರಾಕೃತಿಕ ಲಕ್ಷಣ ಮತ್ತು ಸುತ್ತಲಿನ ಜಲರಾಶಿಗಳು ಪ್ರಭಾವ ಬೀರುತ್ತವೆ. ಆಕ್ರ್ಟಿಕ್, ಪೆಸಿಫಿಕ್ ಮತ್ತು ಹಿಂದೂ ಸಾಗರಗಳು ಏಷ್ಯವನ್ನು ಸುತ್ತುವರಿದಿವೆ. ಈ ಖಂಡದಲ್ಲಿ ಹರಿಯುವ ಹೆಚ್ಚಿನ ಸಂಖ್ಯೆಯ ನದಿಗಳು ಈ ಸಾಗರಗಳಿಗೆ ಸೇರುವವು. ಹೀಗಾಗಿ ಸಾಗರಗಳಿಗೆ ನದಿಗಳು ಸೇರುವುದನ್ನಾಧರಿಸಿ ಏಷ್ಯದ ನದಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.

1) ಹಿಂದೂ ಸಾಗರ ಸೇರುವ ನದಿಗಳು : ಈ ಗುಂಪಿಗೆ ಸೇರಿದ ಮುಖ್ಯ ನದಿಗಳೆಂದರೆ: ಸಿರಿಯ ಹಾಗೂ ಇರಾಕ್ ದೇಶಗಳ ಟೈಗ್ರಿಸ್ ಮತ್ತು ಯುಪ್ರಟೀಸ್ ನದಿಗಳು ಪರ್ಷಿಯ ಖಾರಿಯನ್ನೂ, ಪಾಕಿಸ್ತಾನ ಮತ್ತು ಭಾರತದ ಸಿಂಧೂ, ಗಂಗ ಮತ್ತು ಬ್ರಹ್ಮಪುತ್ರ ನದಿಗಳು ಹಿಮಾಲಯದಲ್ಲಿ ಉಗಮಿಸಿ ದಕ್ಷಿಣಕ್ಕೆ ಹರಿದು ಹಿಂದೂ ಸಾಗರವನ್ನು ಸೇರುತ್ತವೆ. ಮಯನ್ಮಾರಿನ ಸಿಟ್ಯಾಂಗ್, ಸಾಲ್ವೀನ್ ಮತ್ತು ಇರವಾಡಿ ನದಿಗಳು ಬಂಗಾಳ ಕೊಲ್ಲಿಗೆ ಸೇರುವವು.

2) ಪೆಸಿಫಿಕ್ ಸಾಗರ ಸೇರುವ ನದಿಗಳು : ಈ ಗುಂಪಿನಲ್ಲಿ ರಷ್ಯದ ಅಮುರ್, ಚೀನದ ಹ್ವಾಂಗ್ ಹೊ, ಚಿಯಾಂಗ್ ಜಿಯಾಂಗ್ (ಯಾಂಗ್‍ಟ್ಸೆ) ಮತ್ತು ಸಿಕಿಯಾಂಗ್ ನದಿಗಳು ಪೂರ್ವದ ಕಡೆಗೆ ಹರಿಯುತ್ತಾ ಕ್ರಮವಾಗಿ ಓಖೋಟಸ್ಕ, ಹಳದಿ ಸಮುದ್ರ ಮತ್ತು ಚೀನ ಸಮುದ್ರಗಳನ್ನು ಸೇರುತ್ತವೆ. ಇಂಡೋಚೀನದ ಮೀನಾಮ್ ಮತ್ತು ಮೀಕಾಂಗ್ ನದಿಗಳು ದಕ್ಷಿಣ ಚೀನ ಸಮುದ್ರವನ್ನು ಸೇರುತ್ತವೆ.

3) ಆಕ್ರ್ಟಿಕ್ ಸಾಗರ ಸೇರುವ ನದಿಗಳು : ಓಬ್, ಯೆನ್ಸಿ ಮತ್ತು ಲೀನ ಎಂಬುವವು ಈ ಗುಂಪಿನ ಪ್ರಮುಖ ನದಿಗಳು. ಇವು ಕೇಂದ್ರದ ಉನ್ನತ ಭಾಗಗಳಲ್ಲಿ ಉಗಮಹೊಂದಿ ಉತ್ತರಕ್ಕೆ ಹರಿದು ಆಕ್ರ್ಟಿಕ್ ಸಾಗರವನ್ನು ಸೇರುತ್ತವೆ.

4) ಒಳನಾಡಿನ ನದಿಗಳು : ಈ ಗುಂಪಿಗೆ ಸೇರಿದ ನದಿಗಳು ಒಳನಾಡಿನ ಸಮುದ್ರಗಳಿಗೆ ಸೇರುವವು. ಉದಾ: ವೋಲ್ಗ ಮತ್ತು ಯೂರಲ್ ನದಿ ಕ್ಯಾಸ್ಪಿಯನ್ ಸಮುದ್ರವನ್ನು ಮತ್ತು ಅಮುದರಿಯ ಮತ್ತು ಸಿರ್‍ದರಿಯಾ ನದಿಗಳು ಅರಲ್ ಸಮುದ್ರವನ್ನೂ ಸೇರುತ್ತವೆ.

ಏಷ್ಯದ ವ್ಯವಸಾಯ

ವ್ಯವಸಾಯವು ಏಷ್ಯದ ಪ್ರಮುಖ ವೃತ್ತಿ. ಸುಮಾರು ನಾಲ್ಕನೇ ಮೂರು ಭಾಗದಷ್ಟು ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ. ಏಷ್ಯದಿಂದ ರಫ್ತಾಗುವ ಸರಕುಗಳಲ್ಲಿ ಬಹುಭಾಗ ಕೃಷಿ ಉತ್ಪನ್ನಗಳಾಗಿರುತ್ತವೆ.

ಏಷ್ಯದ ವ್ಯವಸಾಯ ಮತ್ತು ನದಿ ವ್ಯವಸ್ಥೆಗಳ ನಡುವೆ ನಿಕಟವಾದ ಸಂಬಂಧವಿದೆ. ಸೈಬೀರಿಯಾವನ್ನು ಹೊರತುಪಡಿಸಿ, ಉಳಿದ ಹೆಚ್ಚಿನ ಭಾಗಗಳಲ್ಲಿ ವ್ಯವಸಾಯವು ನದಿಬಯಲುಗಳಲ್ಲಿ ರೂಢಿಯಲ್ಲಿದೆ. ಇದಕ್ಕೆ ಇಲ್ಲಿನ ಫಲವತ್ತಾದ ಮಣ್ಣು ಮತ್ತು ನೀರಾವರಿ ಮೂಲಕ ನೀರು ಪೂರೈಕೆ ಮುಖ್ಯ ಕಾರಣಗಳು.

ಏಷ್ಯದ ಅನೇಕ ದೇಶಗಳಲ್ಲಿ ರೈತರು ಸಾಗುವಳಿ ಕಾರ್ಯಗಳಿಗೆ ಕೈಯಿಂದ ಮಾಡಿದ ಉಪಕರಣ ಮತ್ತು ಪ್ರಾಣಿಗಳನ್ನು ಉಪಯೋಗಿಸುವರು. ಅವರು ಸಾಂದ್ರಬೇಸಾಯ ಪದ್ಧತಿಯನ್ನು ಅನುಸರಿಸುವರು. ರೂಢಿಯಲ್ಲಿರುವ ಇತರೆ ಬೇಸಾಯ ಕ್ರಮಗಳೆಂದರೆ: ನೀರಾವರಿ ಬೇಸಾಯ, ಒಣ ಬೇಸಾಯ, ನೆಡುತೋಟ ಬೇಸಾಯ, ಮಿಶ್ರ ಬೇಸಾಯ, ಸ್ಥಳಾಂತರ ಬೇಸಾಯ ಇತ್ಯಾದಿ. ಇತ್ತೀಚೆಗೆ ಆಧುನಿಕ ವ್ಯವಸಾಯ ಉಪಕರಣ, ರಾಸಾಯನಿಕ ಗೊಬ್ಬರ, ಅಧಿಕ ಇಳುವರಿ ನೀಡುವ ತಳಿಗಳ ಬಳಕೆ ಇತ್ಯಾದಿಗಳು ಏಷ್ಯದ ಕೆಲವು ದೇಶಗಳಲ್ಲಿ ಹೆಚ್ಚು ರೂಢಿಗೆ ಬಂದಿವೆ. ಆದಾಗ್ಯೂ ಇನ್ನೂ ಅನೇಕ ದೇಶಗಳಲ್ಲಿ ಹಲವು ಕಾರಣಗಳಿಂದ ಇಳುವರಿ ಕಡಿಮೆ ಇದೆ.

ಬೆಳೆಗಳು
ಭತ್ತದ ಬೆಳೆ ಏಷ್ಯದಲ್ಲಿ ಅನೇಕ ವಿಧದ ಬೆಳೆಗಳ ಸಾಗುವಳಿ ಕಂಡುಬರುತ್ತದೆ. ಭತ್ತ ಮತ್ತು ಗೋಧಿಗಳು ಪ್ರಮುಖ ಆಹಾರ ಬೆಳೆಗಳು. ಚೀನ ಮತ್ತು ಭಾರತಗಳು ಪ್ರಮುಖ ಭತ್ತ ಉತ್ಪಾದಿಸುವ ದೇಶಗಳಾಗಿದ್ದು, ಪ್ರಪಂಚದ ಭತ್ತದ ಒಟ್ಟು ಉತ್ಪಾದನೆಯಲ್ಲಿ ಶೇ.90 ಭಾಗವನ್ನು ಪೂರೈಸುತ್ತವೆ. ಜಪಾನ್, ಬಾಂಗ್ಲಾದೇಶ, ಥೈಲೆಂಡ್ ಹಾಗೂ ಆಗ್ನೇಯ ಏಷ್ಯ ದೇಶಗಳು ಇತರ ಪ್ರಮುಖ ಭತ್ತ ಉತ್ಪಾದಿಸುವ ದೇಶಗಳು. ಚೀನ, ಭಾರತ, ಪಾಕಿಸ್ತಾನ ಮತ್ತು ಏಷ್ಯದ ರಷ್ಯಾ ಭಾಗಗಳು ಪ್ರಮುಖ ಗೋಧಿ ಉತ್ಪಾದಿಸುವ ದೇಶಗಳು.

ಪ್ರಪಂಚದ ಸ್ವಾಭಾವಿಕ ರಬ್ಬರ್ ಮತ್ತು ಚಹ ಉತ್ಪಾದನೆಯಲ್ಲಿ ಏಷ್ಯ ಮುಂದಿದೆ. ಇಂಡೋನೇಷ್ಯ, ಮಲೇಷ್ಯ ಮತ್ತು ಥೈಲೆಂಡ್‍ಗಳು ಪ್ರಮುಖ ಸ್ವಾಭಾವಿಕ ರಬ್ಬರ್ ಉತ್ಪಾದಕರು. ಪ್ರಮುಖ ಚಹ ಉತ್ಪಾದಕರೆಂದರೆ: ಚೀನ, ಇಂಡೊನೇಷ್ಯ, ಮಲೇಷ್ಯ, ಭಾರತ ಮತ್ತು ಥೈಲೆಂಡ್ ದೇಶಗಳು.

ಸ್ವಾಭಾವಿಕ ರಬ್ಬರ್
ಚಹ Estate

ಏಷ್ಯದಲ್ಲಿ ಬೆಳೆಯುವ ಇತರ ಪ್ರಮುಖ ಬೆಳೆಗಳೆಂದರೆ : ಹತ್ತಿ, ಸೆಣಬು (ನಾರುಬೆಳೆ) ಮತ್ತು ಕಬ್ಬು. ಚೀನ, ಭಾರತ, ಪಾಕಿಸ್ತಾನ, ಟರ್ಕಿ, ಟಕ್ರ್ಮೇನಿಸ್ತಾನ ಮತ್ತು ಉಜ್ಬೇಕಿಸ್ತಾನಗಳು ಪ್ರಮುಖ ಹತ್ತಿ ಉತ್ಪಾದಿಸುವ ದೇಶಗಳು. ಬಾಂಗ್ಲಾದೇಶ, ಚೀನ ಮತ್ತು ಭಾರತಗಳಿಂದ ಸೆಣಬು ಉತ್ಪಾದನೆಯಾಗುತ್ತದೆ. ಕಬ್ಬು ಬೆಳೆಯುವ ಪ್ರದೇಶಗಳು ಹೆಚ್ಚಾಗಿ ಭಾರತ, ಇಂಡೊನೇಷ್ಯ, ಫಿಲಿಪ್ಪೈನ್ಸ ಮತ್ತು ಬಾಂಗ್ಲಾದೇಶಗಳಲ್ಲಿ ಕಂಡುಬರುತ್ತವೆ. ಭಾರತವು ಪ್ರಪಂಚದ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ ದೇಶ.

ಸೆಣಬು (ನಾರುಬೆಳೆ)

ಕಾಫಿ, ಕೋಕೊ, ವಿವಿಧ ತೃಣಧಾನ್ಯ (ನವಣೆ, ಸಜ್ಜೆ, ಸಾವೆ), ದ್ವಿದಳಧಾನ್ಯ, ಎಣ್ಣೆಕಾಳು ಸಾಂಬಾರು ಪದಾರ್ಥಗಳು ಮೊದಲಾದವುಗಳ ಉತ್ಪಾದನೆಗೂ ಏಷ್ಯ ಪ್ರಸಿದ್ಧವಾದುದು.

ಕೋಕೊ
ವಿವಿಧ ತೃಣಧಾನ್ಯ (ನವಣೆ, ಸಜ್ಜೆ, ಸಾವೆ)
ಸಾಂಬಾರು ಪದಾರ್ಥಗಳು
ಎಣ್ಣೆಕಾಳು

5. ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ

ವಾಯುಗುಣ :
ಈಗಾಗಲೇ ತಿಳಿಸಿದಂತೆ, ಏಷ್ಯ ವಿಶಾಲವಾದ ಭೂಖಂಡ. ಅದು ದಕ್ಷಿಣದಲ್ಲಿ ಭೂಮಧ್ಯ ರೇಖೆಯಿಂದ ಧ್ರುವೀಯ ಪ್ರದೇಶದವರೆಗೂ ವಿಸ್ತರಿಸಿದೆ. ಪರಿಣಾಮವಾಗಿ ಈ ಖಂಡದ ವಿವಿಧ ಪ್ರದೇಶಗಳಲ್ಲಿ ವಿವಿಧ ವಾಯುಗುಣದ ಪರಿಸ್ಥಿತಿಯಿದೆ. ಏಷ್ಯದಲ್ಲಿ ಕೆಲವು ಭಾಗಗಳು ಪ್ರಪಂಚದಲ್ಲೇ ಅತ್ಯಂತ ಶೀತ(ಧ್ರುವೀಯ)ವಾದ ಪರಿಸ್ಥಿತಿಯನ್ನು ಹೊಂದಿದ್ದರೆ ಮತ್ತೆ ಕೆಲವು ಭಾಗಗಳು ಅತಿ ಉಷ್ಣತೆಯುಳ್ಳವು (ಕೇಂದ್ರ ಮತ್ತು ನೈಋತ್ಯ). ಹಾಗೆಯೇ ಅತಿಶುಷ್ಕ ಮತ್ತು ಅಧಿಕ ಮಳೆ ಬೀಳುವ ಸ್ಥಳಗಳೂ ಸಹ ಇಲ್ಲಿ ಕಂಡುಬರುತ್ತವೆ. ಏಷ್ಯದ ವಿವಿಧ ವಾಯುಗುಣದ ಸ್ಥಿತಿಗೆ ಹಲವು ಅಂಶಗಳು ಕಾರಣವಾಗಿವೆ. ಉದಾ: ವಿಸ್ತೀರ್ಣ, ಅಕ್ಷಾಂಶಗಳ ವಿಸ್ತರಣೆ, ಪ್ರಾಕೃತಿಕ ಲಕ್ಷಣ, ಮಾನ್ಸೂನ್ ಮಾರುತ ಇತ್ಯಾದಿ.

ಉಷ್ಣಾಂಶ :
ಇದು ಸಹಜವಾಗಿ ಸ್ಥಳದಿಂದ ಸ್ಥಳಕ್ಕೆ ಹಾಗೂ ಕಾಲದಿಂದ ಕಾಲಕ್ಕೆ ವ್ಯತ್ಯಾಸವಾಗುವುದು. ಜನವರಿ ತಿಂಗಳಲ್ಲಿ ಏಷ್ಯದ ದಕ್ಷಿಣ ದೇಶಗಳಿಗಿಂತ ಉತ್ತರದ ದೇಶಗಳಲ್ಲಿ ಶೀತವು ಹೆಚ್ಚಾಗಿರುತ್ತದೆ. ಸೈಬೀರಿಯಾದಲ್ಲಿರುವ ವರ್ಕೊಯಾನ್‍ಸ್ಕ್ ಅತ್ಯಂತ ಶೀತವಾದ ಸ್ಥಳ. ಜುಲೈ ತಿಂಗಳಲ್ಲಿ ಸೈಬೀರಿಯಾದ ಉತ್ತರ ಭಾಗ ಹಾಗೂ ಮಧ್ಯ ಏಷ್ಯದ ಎತ್ತರವುಳ್ಳ ಪರ್ವತ ಮತ್ತು ಪ್ರಸ್ಥಭೂಮಿ ಭಾಗಗಳನ್ನು ಹೊರತುಪಡಿಸಿ, ಏಷ್ಯದ ಬಹಳಷ್ಟು ಭಾಗಗಳಲ್ಲಿ ಶಾಖವು ಹೆಚ್ಚು. ಕೆಲವು ಭಾಗಗಳಲ್ಲಿ ಉಷ್ಣಾಂಶವು 400 ಸೆಲ್ಸಿಯಸ್‍ಗಿಂತ ಹೆಚ್ಚಾಗಿರುತ್ತದೆ.

ಮಳೆಯ ಹಂಚಿಕೆ :
ಏಷ್ಯ ಖಂಡದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳಿಂದ ಬೇಸಿಗೆಯಲ್ಲಿ ಹೆಚ್ಚು ಮಳೆಯಾಗುತ್ತದೆ. ಆದರೆ ಮಾನ್ಸೂನ್ ಮಾರುತಗಳು ಮಧ್ಯ ಏಷ್ಯವನ್ನು ತಲುಪುವುದಿಲ್ಲ. ಆ ಭಾಗವು ವರ್ಷವೆಲ್ಲ ಶುಷ್ಕ ಸ್ಥಿತಿಯನ್ನು ಹೊಂದಿರುತ್ತದೆ. ಪಶ್ಚಿಮ ಏಷ್ಯದ ದೇಶಗಳು, ಚಳಿಗಾಲದ ಪಶ್ಚಿಮ ಮಾರುತ (ಪ್ರತಿವಾಣಿಜ್ಯ)ಗಳಿಂದಲೂ ಹಾಗೂ ಚೀನಾದ ಪೂರ್ವಭಾಗ ಮತ್ತು ಫಿಲಿಪ್ಪೈನ್ಸ್, ಮಲೇಷ್ಯ ಮೊದಲಾದವು ಉಷ್ಣವಲಯದ ಆವರ್ತ ಮಾರುತಗಳಿಂದ ಮಳೆ ಪಡೆಯುತ್ತವೆ.

ಚಳಿಗಾಲ :
ಏಷ್ಯದ ಹೆಚ್ಚಿನ ಭಾಗಗಳಲ್ಲಿ ಅಕ್ಟೋಬರ್‍ನಿಂದ ಮಾರ್ಚ್‍ವರೆಗೆ ಚಳಿಗಾಲವಾಗಿರುತ್ತದೆ. ಏಷ್ಯದ ಬಹುಭಾಗವು ಉತ್ತರಾರ್ಧ ಗೋಳದಲ್ಲಿದೆ. ಈ ಅವಧಿಯಲ್ಲಿ ಉತ್ತರಾರ್ಧಗೊಳಕ್ಕೆ ಓರೆಯಾದ ಸೂರ್ಯನ ಕಿರಣಗಳು ಪ್ರಸರಿಸುವವು. ಹೀಗಾಗಿ ಏಷ್ಯದ ಹೆಚ್ಚಿನ ಭಾಗಗಳಲ್ಲಿ ಬಹಳ ಕಡಿಮೆ ಉಷ್ಣಾಂಶವಿದ್ದು, ಅತಿ ಶೀತವಾದ ವಾಯುಗುಣವಿರುತ್ತದೆ.
ಮಧ್ಯ ಏಷ್ಯದಲ್ಲಿ ವಾಯುವಿನ ಒತ್ತಡ ಅಧಿಕ ಮತ್ತು ಹಿಂದೂ ಸಾಗರದಲ್ಲಿ ಒತ್ತಡ ಕಡಿಮೆ ಇರುತ್ತದೆ. ಹೀಗಾಗಿ ಮಾರುತಗಳು ಭೂಭಾಗದಿಂದ ಸಮುದ್ರದ ಕಡೆಗೆ ಬೀಸುತ್ತವೆ. ಅವು ಒಣಗಾಳಿಗಳು, ಮಳೆ ತರಲಾರವು. ಚಳಿಗಾಲದಲ್ಲಿ ಮಳೆ ವಿರಳ.

ಬೇಸಿಗೆ ಕಾಲ :
ಚಳಿಗಾಲಕ್ಕೆ ವಿರುದ್ಧ ಪರಿಸ್ಥಿತಿ ಇರುತ್ತದೆ. ಇದು ಏಪ್ರಿಲ್‍ನಲ್ಲಿ ಆರಂಭ ಮತ್ತು ಸೆಪ್ಟಂಬರ್‍ನಲ್ಲಿ ಅಂತ್ಯಗೊಳ್ಳುತ್ತದೆ. ಉತ್ತರಾರ್ಧಗೋಳದಲ್ಲಿ ಸೂರ್ಯ ನೇರವಾಗಿ ಪ್ರಕಾಶಿಸುವುದು. ಆದ್ದರಿಂದ ಏಷ್ಯದ ಬಹುಭಾಗಗಳಲ್ಲಿ ಉಷ್ಣಾಂಶ ಹೆಚ್ಚು ಮತ್ತು ಮಧ್ಯ ಏಷ್ಯದಲ್ಲಿ ಒತ್ತಡ ಕಡಿಮೆ. ಮಾರುತಗಳು ಸಮುದ್ರಗಳಿಂದ ಭೂಭಾಗಗಳಿಗೆ ಬೀಸುತ್ತವೆ. ಅವು ಹೆಚ್ಚು ಕಡಿಮೆ ಖಂಡದ ಎಲ್ಲೆಡೆಗೂ ಮಳೆಯನ್ನು ಸುರಿಸುತ್ತವೆ.

* ಜನವರಿಯಲ್ಲಿ ಸೈಬೀರಿಯಾದ ವರ್ಕೊಯಾನಸ್ಕ್ – 510 ಸೆ ಮತ್ತು ಓಮಿಯಾಕ್ನಿ – 710 ಸೆ. ಕನಿಷ್ಠ ಉಷ್ಣಾಂಶವನ್ನು ದಾಖಲಿಸುತ್ತವೆ.
* ಭಾರತದ ಮೇಘಾಲಯ ರಾಜ್ಯದ ಮಾಸಿನ್‍ರಾಮ್ ಪ್ರಪಂಚದಲ್ಲೇ ಅತಿ ಹೆಚ್ಚು ಮಳೆ ಪಡೆಯುತ್ತದೆ. (118.7 ಸೆಂ.ಮೀ)

ಸೈಬೀರಿಯಾದ ವರ್ಕೊಯಾನಸ್ಕ್
ಭಾರತದ ಮೇಘಾಲಯ ರಾಜ್ಯದ ಮಾಸಿನ್‍ರಾಮ್

ಸ್ವಾಭಾವಿಕ ಸಸ್ಯವರ್ಗ

ಏಷ್ಯದ ಸ್ವಾಭಾವಿಕ ಸಸ್ಯವರ್ಗ ಮತ್ತು ವಾಯುಗುಣಗಳ ನಡುವೆ ಪರಸ್ಪರ ಸಂಬಂಧವಿದೆ. ಭೂಸ್ವರೂಪ, ಮಣ್ಣು ಮತ್ತು ಮಾನವನ ಪ್ರವೇಶಗಳೂ ಸಹ ಸಸ್ಯವರ್ಗದ ವಿಧ ಮತ್ತು ಹಂಚಿಕೆಯ ಮೇಲೆ ಪ್ರಭಾವ ಬೀರುವವು. ಏಷ್ಯದ ಸಸ್ಯವರ್ಗದಲ್ಲಿ ವೈವಿಧ್ಯತೆ ಇದೆ. ಅವುಗಳನ್ನು ಏಳು ವಿಧಗಳಾಗಿ ವಿಂಗಡಿಸಬಹುದು.

1) ಟಂಡ್ರ ಸಸ್ಯವರ್ಗ : ಈ ಸಸ್ಯವರ್ಗವು ಆಕ್ರ್ಟಿಕ್ ಕರಾವಳಿಯ ಉದ್ದಕ್ಕೂ ಕಿರಿದಾದ ಭಾಗದಲ್ಲಿ ಕಂಡುಬರುತ್ತದೆ. ಇದು ಬಹುವಾಗಿ ನೀರ್ಗಲ್ಲು ಮತ್ತು ಹಿಮದಿಂದಾವರಿಸಿರುತ್ತದೆ. ಹೀಗಾಗಿ ಸಸ್ಯ ಬೆಳವಣಿಗೆ ಪಾಚಿ ಮತ್ತು ಶಿಲಾವಲ್ಕಗಳಿಗೆ ಸೀಮಿತಗೊಂಡಿದೆ.

2) ಶಂಕುವಿನಾಕಾರದ ಮರಗಳ (ಕೊನಿಫೆರಸ್) ಅರಣ್ಯಗಳು : ಟಂಡ್ರ ಪ್ರದೇಶದಲ್ಲಿ ಹಂಚಿಕೆಯಾಗಿವೆ. ಅವುಗಳನ್ನು `ಟೈಗಾ ಅರಣ್ಯ’ ಎಂತಲೂ ಕರೆಯಲಾಗಿದೆ. ಫರ್, ಸ್ಪ್ರೂಸ್, ಲಾರ್ಚ್ ಮತ್ತು ಪೈನ್ ಎಂಬುವವು ಇಲ್ಲಿ ಬೆಳೆಯುವ ಮುಖ್ಯ ಮರಗಳು. ಅವು ಮೃದು ಮರದ ತಿರುಳಿನ ಮರಗಳಾಗಿರುತ್ತವೆ.

ಫರ್
ಸ್ಪ್ರೂಸ್
ಲಾರ್ಚ್
ಪೈನ್
ಟೈಗಾ ಅರಣ್ಯ

3) ಸಮಶೀತೋಷ್ಣವಲಯದ ಹುಲ್ಲುಗಾವಲು (ಸ್ಟೆಪ್ಪೀಸ್) : ಮಧ್ಯ ಏಷ್ಯ ಮತ್ತು ಮರುಭೂಮಿ ಮತ್ತು ಅರೆಮರುಭೂಮಿಗಳ ಅಂಚುಗಳಲ್ಲಿ ಕಂಡುಬರುತ್ತದೆ. ಕಡಿಮೆ ಮಳೆಯಿಂದಾಗಿ ಇಲ್ಲಿ ಕಡಿಮೆ ಎತ್ತರವುಳ್ಳ ಹುಲ್ಲು ಬೆಳೆಯುತ್ತದೆ.

ಸ್ಟೆಪ್ಪೀಸ್

4) ಮರುಭೂಮಿ ಸಸ್ಯವರ್ಗ : ಇದು ಏಷ್ಯದ ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳ ಮರುಭೂಮಿಗಳಲ್ಲಿ ಕಂಡುಬರುತ್ತದೆ. ಉದಾ: ಅರೇಬಿಯ, ಇರಾನ್, ಥಾರ್ ಮರುಭೂಮಿ ಇತ್ಯಾದಿ. ಇಲ್ಲಿ ಮುಳ್ಳಿನ ಗಿಡಗಂಟಿ, ಕುರುಚಲು ಸಸ್ಯ ಮತ್ತು ಹುಲ್ಲುಗಳು ಮಾತ್ರ ಬೆಳೆಯುವವು. ಓಯಾಸಿಸ್‍ಗಳ ಬಳಿ ಖರ್ಜೂರ ಮತ್ತು ತಾಳೆ ಜಾತಿ ಮರಗಳು ಕಂಡುಬರುವವು.

ಅರೇಬಿಯ
ಇರಾನ್
ಥಾರ್

5) ಮಾನ್ಸೂನ್ ಅರಣ್ಯಗಳು : ದಕ್ಷಿಣ, ಆಗ್ನೇಯ ಮತ್ತು ಪೂರ್ವ ಏಷ್ಯ ಭಾಗಗಳಲ್ಲಿ ಕಂಡುಬರುತ್ತವೆ. ಇಲ್ಲಿ ಹೆಚ್ಚು ಶಾಖ ಮತ್ತು ಮಳೆ ಬೀಳುವುದರಿಂದ ಕಾಡುಗಳಿರುತ್ತವೆ. ತೇಗ, ಸಲೆ, ಆಲ, ಬಿದಿರು, ಶ್ರೀಗಂಧ ಹಾಗೂ ಇನ್ನೂ ಹಲವು ಗಟ್ಟಿ ಮರಗಳು ಇಲ್ಲಿ ಬೆಳೆಯುತ್ತವೆ. ಅವು ಶರತ್ಕಾಲದಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ.

ತೇಗ
ಸಲೆ
ಶ್ರೀಗಂಧ

6) ಸಮಭಾಜಕ ವೃತ್ತ ಪ್ರದೇಶದ ಅರಣ್ಯಗಳು : ಹೆಚ್ಚಾಗಿ ಪೂರ್ವ ಇಂಡೀಸ್ ಮತ್ತು ಅಧಿಕ ಮಳೆ ಬೀಳುವ ಮಾನ್ಸೂನ್ ಪ್ರದೇಶಗಳಲ್ಲಿ ಕಂಡುಬರುತ್ತವೆ. ಅವು ಸದಾ ಹಸಿರು ಮತ್ತು ಎತ್ತರಕ್ಕೆ ಬೆಳೆಯುವ ಮರಗಳಿಂದ ಕೂಡಿರುತ್ತವೆ. ಮಹಾಗನಿ, ಎಬೋನಿ, ರಬ್ಬರ್, ಬಿದಿರು, ಬೀಟೆ ಇಲ್ಲಿ ಬೆಳೆಯುವ ಪ್ರಮುಖ ಮರಗಳು.

ಮಹಾಗನಿ
ಎಬೋನಿ
ಬೀಟೆ

7) ಮೆಡಿಟರೇನಿಯನ್ ಸಸ್ಯವರ್ಗವು ಏಷ್ಯದ ನೈಋತ್ಯ ಭಾಗಗಳಲ್ಲಿ ಕಂಡುಬರುವುದು. ಇಲ್ಲಿ ಆಲಿವ್, ಫಿಗ್, ಓಕ್ ಮರಗಳು ಮತ್ತು ಕುರುಚಲು ಸಸ್ಯ ಬೆಳೆಯುತ್ತವೆ. ಮರಗಳು ಕಡಿಮೆ ಎತ್ತರಕ್ಕೆ ಬೆಳೆಯುತ್ತವೆ.

ಆಲಿವ್
ಫಿಗ್
ಓಕ್

6. ಪ್ರಮುಖ ಖನಿಜಗಳು

ಏಷ್ಯ ಹೆಚ್ಚು ವಿಸ್ತಾರವಾದ ಭೂಖಂಡವಾಗಿದ್ದು, ಇದರಲ್ಲಿ ವಿವಿಧ ಖನಿಜಗಳ ಬೃಹತ್ ನಿಕ್ಷೇಪಗಳು ಕಂಡುಬರುತ್ತವೆ. ಪ್ರಮುಖ ಖನಿಜಗಳು ಈ ಕೆಳಕಂಡಂತಿವೆ:

ಕಬ್ಬಿಣದ ಅದಿರು :
ಇದು ಕಬ್ಬಿಣ ಮತ್ತು ಉಕ್ಕು ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತು. ಏಷ್ಯ ಅಪಾರ ಕಬ್ಬಿಣದ ಅದಿರು ಹೊಂದಿದೆ ಮತ್ತು ಪ್ರಪಂಚದ ಶೇ.30 ಭಾಗದಷ್ಟು ಕಬ್ಬಿಣದ ಅದಿರು ನಿಕ್ಷೇಪ ಈ ಖಂಡದಲ್ಲಿದೆ. ಚೀನ ಅಧಿಕ ಕಬ್ಬಿಣದ ಅದಿರು ಉತ್ಪಾದಿಸುವ ದೇಶ. ಭಾರತ, ಟರ್ಕಿ, ಫಿಲಿಪ್ಪೈನ್ಸ್, ಮಲೇಷ್ಯ, ಥೈಲೆಂಡ್, ಇಂಡೊನೇಷ್ಯ, ಮಯನ್ಮಾರ್, ವಿಯೆಟ್ನಾಂ, ಕಜಕಿಸ್ತಾನ ಮತ್ತು ಪಾಕಿಸ್ತಾನ ಇತರೆ ಪ್ರಮುಖ ಉತ್ಪಾದಕರು. ಕೊರಿಯ, ತೈವಾನ್, ಶ್ರೀಲಂಕ, ಜಪಾನ್ ಮತ್ತು ನೈಋತ್ಯ ಏಷ್ಯದ ರಾಷ್ಟ್ರಗಳಲ್ಲಿ ಅಲ್ಪ ಪ್ರಮಾಣದ ಕಬ್ಬಿಣದ ಅದಿರು ದೊರೆಯುತ್ತದೆ.

ಕಬ್ಬಿಣದ ಅದಿರು

ಮ್ಯಾಂಗನೀಸ್ :
ಪ್ರಮುಖ ಮಿಶ್ರಲೋಹ ಖನಿಜ. ಉತ್ತಮ ಉಕ್ಕು ತಯಾರಿಕೆಗೆ ಇದು ಅತ್ಯಾವಶ್ಯಕ. ಏಷ್ಯ ಖಂಡವು ಅಧಿಕ ಪ್ರಮಾಣದ ಮ್ಯಾಂಗನೀಸ್ ನಿಕ್ಷೇಪವನ್ನು ಹೊಂದಿದೆ. ಅದು ಟ್ರಾನ್ಸ್ ಕಕಾಸಸ್, ಮಧ್ಯ ಏಷ್ಯ, ಸೈಬೀರಿಯ, ಚೀನ ಮತ್ತು ಭಾರತಗಳಲ್ಲಿ ಹೆಚ್ಚು ಹಂಚಿಕೆಯಾಗಿದೆ. ಉತ್ಪಾದನೆಯಲ್ಲಿ ಚೀನ ಮುಂದಿದೆ.

ಮ್ಯಾಂಗನೀಸ್

ಬಾಕ್ಸೈಟ್ :
ಇದು ಕಬ್ಬಿಣೇತರ ಲೋಹ. ಖನಿಜ ಮತ್ತು ಅಲ್ಯೂಮಿನಿಯಂ ತಯಾರಿಸುವುದಕ್ಕೆ ಅಗತ್ಯವಾದುದು. ಏಷ್ಯ ಅಪಾರವಾದ ಬಾಕ್ಸೈಟ್ ನಿಕ್ಷೇಪವುಳ್ಳ ಖಂಡ. ಅದು ಹೆಚ್ಚಾಗಿ ಕಜಕ್‍ಸ್ತಾನ ಮತ್ತು ದಕ್ಷಿಣ ಕೇಂದ್ರ ಸೈಬೀರಿಯಾಗಳಲ್ಲಿ ದೊರೆಯುತ್ತದೆ. ಅಲ್ಲದೆ ಭಾರತ ಇಂಡೊನೇಷ್ಯ, ಟರ್ಕಿ, ಮಲೇಷ್ಯ ಹಾಗೂ ಚೀನ ದೇಶಗಳಲ್ಲಿಯೂ ಸಾಕಷ್ಟು ಬಾಕ್ಸೈಟ್ ದೊರೆಯುತ್ತದೆ.

ಬಾಕ್ಸೈಟ್

ಕಲ್ಲಿದ್ದಲು :
ಇದು ಪಳೆಯುಳಿಕೆ ಇಂಧನ ಖನಿಜ. ಒಂದು ಪ್ರಮುಖ ಶಕ್ತಿಯ ಮೂಲ. ಏಷ್ಯದಲ್ಲಿ ಅಪಾರವಾದ ಕಲ್ಲಿದ್ದಲು ದೊರೆಯುತ್ತದೆ. ಆದರೆ ಅದರ ಹಂಚಿಕೆಯಲ್ಲಿ ಅಸಮಾನತೆಯಿದೆ. ಅತ್ಯಧಿಕ ಪ್ರಮಾಣದ ಕಲ್ಲಿದ್ದಲು ನಿಕ್ಷೇಪವು ಚೀನ, ಭಾರತ, ಇಂಡೊನೇಷ್ಯ, ಸೈಬೀರಿಯ ಮತ್ತು ಮಧ್ಯ ಏಷ್ಯ ದೇಶಗಳಲ್ಲಿ ಕಂಡುಬರುತ್ತದೆ.

ಕಲ್ಲಿದ್ದಲು

ಪ್ರಪಂಚದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಮತ್ತು ಉತ್ಪಾದನೆ ಎರಡರಲ್ಲೂ ಚೀನ ದೇಶ ಮೊದಲನೆಯದು. ಚೀನಾದ ಎಲ್ಲಾ ಪ್ರಾಂತ್ಯಗಳಲ್ಲೂ ಕಲ್ಲಿದ್ದಲು ಲಭ್ಯವಿದೆ. ಭಾರತವು -ಏಷ್ಯದ ಎರಡನೆಯ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ದೇಶ. ಇತ್ತೀಚೆಗೆ ಮಧ್ಯ ಸೈಬೀರಿಯಾದಲ್ಲಿರುವ ಕುಜೆನೆಟ್ಜ್ ಬಯಲು ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಭಾಗವಾಗಿದೆ. ಅಲ್ಪ ಪ್ರಮಾಣದ ಕಲ್ಲಿದ್ದಲು ನಿಕ್ಷೇಪವು ಉಜ್ಬೇಕಿಸ್ತಾನ, ಕಿರ್ಘಿಸ್ತಾನ, ತಜಕಿಸ್ತಾನ, ಪಾಕಿಸ್ತಾನ ಮತ್ತು ಜಪಾನ್ ದೇಶಗಳಲ್ಲಿ ದೊರೆಯುತ್ತದೆ.

ಪೆಟ್ರೋಲಿಯಂ :
ಇದೊಂದು ತೈಲ ಇಂಧನ. ಸ್ವಯಂಚಾಲಿತ ವಾಹನಗಳು, ರೈಲು, ಹಡಗು ಮತ್ತು ವಿಮಾನಗಳಿಗೆ ಬೇಕಾಗುವ ಶಕ್ತಿಸಾಧನವಾಗಿದೆ. ನೈಋತ್ಯ ಏಷ್ಯಾದಲ್ಲಿ ಅಪಾರವಾದ ಪೆಟ್ರೋಲಿಯಂ ನಿಕ್ಷೇಪವಿದೆ. ಅದು ಹೆಚ್ಚಾಗಿ ಸೌದಿ ಅರೇಬಿಯ, ಇರಾನ್, ಇರಾಕ್, ಕುವೈತ್, ಬಹ್ರೇನ್, ಕತಾರ್ ಮತ್ತು ಸಂಯುಕ್ತ ಅರಬ್ ಎಮಿರೇಟೀಸ್ (UAE) ಗಳಲ್ಲಿ ಕಂಡುಬರುವುದು. ಇವು ಪ್ರಪಂಚದ ಒಟ್ಟು ಪೆಟ್ರೋಲ್ ನಿಕ್ಷೇಪದಲ್ಲಿ ಅರ್ಧಭಾಗವನ್ನು ಹೊಂದಿವೆ ಮತ್ತು ಪ್ರಪಂಚದ ಶೇ.25 ಭಾಗದಷ್ಟು ಪೆಟ್ರೋಲನ್ನು ಉತ್ಪಾದಿಸುತ್ತವೆ.

ಪೆಟ್ರೋಲಿಯಂ

ಪೂರ್ವ ಮತ್ತು ಆಗ್ನೇಯ ಏಷ್ಯದ ಕೆಲವು ದೇಶಗಳಲ್ಲಿಯೂ ಪೆಟ್ರೋಲಿಯಂ ನಿಕ್ಷೇಪ ದೊರೆಯತ್ತದೆ. ಉದಾ: ಇಂಡೊನೇಷ್ಯ, ಮಲೇಷ್ಯ, ಚೀನ, ತೈವಾನ್, ಮಯನ್ಮಾರ್, ಸಾರ್ವಾಕ್, ಭಾರತ, ವಿಯೆಟ್ನಾಂ ಇತ್ಯಾದಿ.
ಇತ್ತೀಚೆಗೆ ಸೈಬೀರಿಯ ಭಾಗದಲ್ಲಿ ಪೆಟ್ರೋಲಿಯಂ ಉತ್ಪಾದನೆ ಹೆಚ್ಚಾಗಿದೆ.

* ಪೆಟ್ರೋಲಿಯಂ ಶಬ್ದ (Petroleum)ವು ‘Petra’ ಎಂದರೆ ‘ಕಲ್ಲು’ ಮತ್ತು ‘Oleum’ ಎಂದರೆ ‘ತೈಲ’ ಎಂಬ ಎರಡು ಲ್ಯಾಟಿನ್ ಭಾಷಾ ಪದಗಳಿಂದ ಸಂಯೋಜಿತವಾದದ್ದು.
* ಸೌದಿ ಅರೇಬಿಯ ಪ್ರಪಂಚದಲ್ಲೇ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ದೇಶ.

ಮಧ್ಯ ಏಷ್ಯದ ಟಕ್ರ್ಮೇನಿಸ್ತಾನ, ಉಜ್ಬೇಕಿಸ್ತಾನ, ಕಜಕಿಸ್ತಾನ ಮೊದಲಾದ ಭಾಗಗಳಲ್ಲಿಯೂ ಸಾಕಷ್ಟು ಪೆಟ್ರೋಲ್ ಲಭ್ಯವಿದೆ.

ಪ್ರಮುಖ ಕೈಗಾರಿಕಾ ಪ್ರದೇಶಗಳು

ಏಷ್ಯಾ ಖಂಡವು ವಿಶಾಲ ಪ್ರದೇಶ. ಸಮೃದ್ಧ ಖನಿಜ ಮತ್ತು ವ್ಯವಸಾಯೋತ್ಪನ್ನಗಳನ್ನು ಹೊಂದಿದ್ದರೂ ಯೂರೋಪ್ ಖಂಡದಷ್ಟು ಕೈಗಾರಿಕೀಕರಣ ಸಾಧಿಸಿಲ್ಲ. ಇದಕ್ಕೆ ಮುಖ್ಯ ಕಾರಣಗಳೆಂದರೆ ತಂತ್ರಜ್ಞಾನ, ಬಂಡವಾಳಗಳ ಕೊರತೆ, ಸಾಂಪ್ರದಾಯದ ಸ್ವಭಾವ ಮತ್ತು ಹೆಚ್ಚು ಜನರು ವ್ಯವಸಾಯದಲ್ಲಿ ತೊಡಗಿರುವುದು.

ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ `ಕೈಗಾರಿಕಾ ಪ್ರದೇಶ’ ಎನ್ನುವರು. ಇವು ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲಕರವಾದ ಕೆಲವೇ ಭಾಗಗಳಲ್ಲಿ ಕಂಡುಬರುತ್ತವೆ.

ಏಷ್ಯದ ಪ್ರಮುಖ ಕೈಗಾರಿಕಾ ಪ್ರದೇಶಗಳು ಈ ಕೆಳಕಂಡಂತಿವೆ.
ಜಪಾನ್ : ಈ ದೇಶದಲ್ಲಿ ನಾಲ್ಕು ಪ್ರಮುಖ ಕೈಗಾರಿಕಾ ಪ್ರದೇಶಗಳಿವೆ.

1) ಕಿಹೀನ್ ಪ್ರದೇಶವು ಟೋಕಿಯೊ, ಕವಾಸಾಕಿ ಮತ್ತು ಯೋಕೊಹಾಮ ನಗರಗಳನ್ನೊಳಗೊಂಡ ದೊಡ್ಡ ಕೈಗಾರಿಕಾ ಪ್ರದೇಶ. ಇಲ್ಲಿ ಜವಳಿ, ಎಂಜಿನಿಯರಿಂಗ್, ಹಡಗುಕಟ್ಟುವುದು, ಕಾಗದ ಮತ್ತು ಸಿಮೆಂಟ್ ಕೈಗಾರಿಕೆಗಳು ಪ್ರಮುಖವಾಗಿವೆ.

2) ಹಾನ್ಶಿನ್ ಪ್ರದೇಶದಲ್ಲಿ ಒಸಾಕ, ಕೋಬೆ ಮತ್ತು ಕಿಯೂಟೊ ಮಹಾನಗರಗಳಿವೆ. ಇಲ್ಲಿ ಜವಳಿ (ಬಟ್ಟೆ) ಕೈಗಾರಿಕೆ ಪ್ರಮುಖವಾಗಿದೆ.

3) ಐಸೆ ಕೊಲ್ಲಿ ಪ್ರದೇಶವು ನಗೋಯ ನಗರದ ಸುತ್ತಮುತ್ತ ವಿಸ್ತರಿಸಿದೆ. ಇಲ್ಲಿ ಜವಳಿ ಮತ್ತು ಎಂಜಿನಿಯರಿಂಗ್ ಕೈಗಾರಿಕೆಗಳು ಪ್ರಮುಖವಾಗಿವೆ.

4) ಕಿಟ ಕಿಯೂಶು ಪ್ರದೇಶವು ಯವಾಟ, ಮೋಜಿ ಮತ್ತು ಕೊಕುರ ನಗರಗಳಿಂದ ಕೂಡಿದ್ದು ಉಕ್ಕು, ಹಡಗು, ಯಂತ್ರೋಪಕರಣ, ರಾಸಾಯನಿಕ ಮತ್ತು ಜವಳಿ ಉದ್ಯಮಕ್ಕೆ ಪ್ರಸಿದ್ಧವಾಗಿದೆ.

ಚೀನ : ವ್ಯವಸಾಯ ಪ್ರಧಾನ ದೇಶವಾಗಿದ್ದು, ಕೈಗಾರಿಕಾಭಿವೃದ್ಧಿ ಕಡಿಮೆ. ಕಮ್ಯುನಿಷ್ಟ್ ಸರ್ಕಾರ ಬಂದ ಮೇಲೆ ಕೈಗಾರಿಕೀಕರಣದ ಕಡೆಗೆ ಆದ್ಯತೆ ನೀಡಲಾಗಿದೆ. ಈ ದೇಶದ ಪ್ರಮುಖ ಕೈಗಾರಿಕಾ ಪ್ರದೇಶಗಳೆಂದರೆ;

ಮಂಚೂರಿಯ ಪ್ರದೇಶ : ಇಲ್ಲಿ ಕಬ್ಬಿಣ ಮತ್ತು ಉಕ್ಕು, ಎಂಜಿನಿಯರಿಂಗ್ ಮತ್ತು ರಾಸಾಯನಿಕ ಕೈಗಾರಿಕೆಗಳು ಮುಖ್ಯವಾದವು.
ಬೀಜಿಂಗ್ ಪ್ರದೇಶ : ಲೋಹ ತಯಾರಿಕೆ, ಇಂಜಿನಿಯರಿಂಗ್, ಹಡಗು ನಿರ್ಮಾಣ, ಜವಳಿ ಮತ್ತು ರಸಾಯನಿಕ ಕೈಗಾರಿಕೆಗಳು ಮುಖ್ಯವಾದವು.
ಶಾನ್ಶಿ-ಬಾವಟೋವ್ : ಕಬ್ಬಿಣ ಮತ್ತು ಉಕ್ಕು ಹಾಗೂ ಕೃಷಿ ಉಪಕರಣಗಳು.
ಚಾಂಗ್ ಜಿಯಾಂಗ್ : ಪ್ರದೇಶದಲ್ಲಿ ಜವಳಿ ಉದ್ಯಮ, ಹಡಗು ನಿರ್ಮಾಣ ಮತ್ತು ಉಕ್ಕು ತಯಾರಿಕೆ ಘಟಕಗಳು ಮತ್ತು ಇಂಜಿನಿಯರಿಂಗ್ ಕಂಡುಬರುತ್ತವೆ.
ವುಹಾನ್ ಪ್ರದೇಶ ಲೋಹ ತಯಾರಿಕೆ ಮತ್ತು ಬೃಹತ್ ಕೈಗಾರಿಕಾ ಸರಕು ತಯಾರಿಕೆ.

ಭಾರತ – ಪ್ರಮುಖ ಕೈಗಾರಿಕಾ ಪ್ರದೇಶಗಳು :
1) ಹೂಗ್ಲಿ-ಕೋಲ್ಕತಾ ಪ್ರದೇಶ,
2) ಮುಂಬಯಿ -ಪುಣೆ ಪ್ರದೇಶ,
3) ಅಹ್ಮದಾಬಾದ್ -ವಡೋದರ ಪ್ರದೇಶ,
4) ಮದುರೈಕೊಯಮತ್ತೂರು-ಬೆಂಗಳೂರು ಪ್ರದೇಶ,
5) ಛೋಟನಾಗಪುರ ಪ್ರದೇಶ
6) ದೆಹಲಿ-ಮೀರತ್,
7) ವಿಶಾಖಪಟ್ಟಣ, ಹಾಗೂ
8) ಕೊಲ್ಲಮ್-ತಿರುವನಂತಪುರ ಪ್ರದೇಶ.
ದಕ್ಷಿಣ ಕೊರಿಯ, ಹಾಂಕಾಂಗ್, ಸಿಂಗಾಪುರ ಮತ್ತು ಮಲೇಷ್ಯಗಳಲ್ಲಿ ಏಷ್ಯದ ಇತರ ಕೈಗಾರಿಕಾ ಪ್ರದೇಶಗಳಿವೆ.

7. ಏಷ್ಯದ ಜನಸಂಖ್ಯೆ

ಬೆಳವಣಿಗೆ :
ಏಷ್ಯಖಂಡದಲ್ಲಿ ಸುಮಾರು 4.2 ಬಿಲಿಯನ್ ಜನಸಂಖ್ಯೆಯಿದೆ. ಇದು ಪ್ರಪಂಚದ ಜನಸಂಖ್ಯೆಯ ಶೇ.60 ಭಾಗದಷ್ಟಾಯಿತು. ಇಂದಿನ ಜನಸಂಖ್ಯೆ ಕಳೆದ ಮೂರು ಶತಮಾನಗಳಿಗಿಂತ ಐದು ಪಟ್ಟು ಹೆಚ್ಚಾಗಿದೆ. 1950 ರಲ್ಲಿ ಏಷ್ಯದ ಜನಸಂಖ್ಯೆ 1.4 ಬಿಲಿಯನ್ ಮಾತ್ರ. ಇತ್ತೀಚಿನವರೆಗೂ ಜನಸಂಖ್ಯಾ ಬೆಳವಣಿಗೆಯ ದರವು ಹೆಚ್ಚಾಗಿತ್ತು. ಆದರೆ ಈಗ ಅದು ಕಡಿಮೆಯಾಗುತ್ತಿದೆ.

ಹಂಚಿಕೆ ಮತ್ತು ಸಾಂದ್ರತೆ :
ಏಷ್ಯಖಂಡದ ಜನಸಂಖ್ಯಾ ಹಂಚಿಕೆಯಲ್ಲಿ ಹೆಚ್ಚು ಅಸಮಾನತೆಯಿದೆ. ಏಷ್ಯದ ಹೆಚ್ಚಿನ ಭಾಗಗಳಲ್ಲಿ ವಿರಳ ಜನಸಂಖ್ಯೆ ಮತ್ತು ಕಡಿಮೆ ಭಾಗಗಳಲ್ಲಿ ಅಧಿಕ ಜನಸಂಖ್ಯೆಯಿರುವುದನ್ನು ನಾವು ಕಾಣಬಹುದು.

ಏಷ್ಯ ಖಂಡದ ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿ.ಮೀ.ಗೆ 96 ಜನರು. ಆದರೆ ಇದು ಖಂಡದಾದ್ಯಂತ ಅಸಮಾನವಾಗಿದೆ. ಅತ್ಯಂತ ಶೀತವಾದ ಉತ್ತರ ಮತ್ತು ಪೂರ್ವ ಸೈಬೀರಿಯ, ಮರುಭೂಮಿಗಳನ್ನುಳ್ಳ ಅರೇಬಿಯ, ಇರಾನ್ ಮತ್ತು ಥಾರ್ (ಭಾರತ) ಪ್ರದೇಶಗಳು ಹಾಗೂ ಅತ್ಯಂತ ಎತ್ತರವುಳ್ಳ ಮಧ್ಯ ಏಷ್ಯ ಭಾಗಗಳು ಏಷ್ಯಾದ ಅತಿ ವಿರಳ ಜನಸಂಖ್ಯಾ ಭಾಗಗಳು.

ಏಷ್ಯದ ಜನಭರಿತ ಭಾಗಗಳಲ್ಲಿ ಭಾರತದ ಮಹಾಮೈದಾನಗಳು, ಬಾಂಗ್ಲಾದೇಶ, ಚೀನ, ಜಪಾನ್, ಕೊರಿಯ ಹಾಗೂ ಜಾವದ್ವೀಪ(ಇಂಡೊನೇಷ್ಯ)ಗಳು ಪ್ರಮುಖವಾದವು. ಇವುಗಳಲ್ಲಿ ಹೆಚ್ಚಿನ ಭಾಗಗಳು ಫಲವತ್ತಾದ, ಸಮತಟ್ಟಾದ ಮೈದಾನ ಅಥವಾ ನದಿ ಬಯಲುಗಳನ್ನುಳ್ಳವು. ಮಯನ್ಮಾರ್, ಥೈಲೆಂಡ್, ಫಿಲಿಪ್ಪೈನ್ಸ್, ಇರಾಕ್, ಶ್ರೀಲಂಕ, ವಿಯೆಟ್ನಾಂ, ಮಲೇಷ್ಯ ಮತ್ತು ಕಾಂಬೋಡಿಯಗಳಲ್ಲಿಯೂ ಜನಸಾಂದ್ರತೆ ಹೆಚ್ಚಾಗಿದೆ.

ಏಷ್ಯ ಖಂಡದಲ್ಲಿ ವಿವಿಧ ಜನಾಂಗದವರು ವಾಸಿಸುತ್ತಿದ್ದಾರೆ. ಪೂರ್ವ ಮತ್ತು ಆಗ್ನೇಯ ಏಷ್ಯಗಳಲ್ಲಿ ಹಳದಿ ವರ್ಣದ ಜನ(ಮಂಗೋಲರು)ರಿದ್ದಾರೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಏಷ್ಯದ ಇತರ ಭಾಗಗಳಲ್ಲಿ ಕಂದು ವರ್ಣದ ಜನರಿದ್ದಾರೆ. ನೈಋತ್ಯ ಏಷ್ಯದ ಭಾಗಗಳಲ್ಲಿ ಅರಬ್ಬರು, ಟರ್ಕರು, ಪರ್ಷಿಯನ್ನರು, ಆಫ್ಘನ್ನರು ಮೊದಲಾದವರು ವಾಸಿಸುವರು. ಮಧ್ಯ ಏಷ್ಯ ಭಾಗಗಳಲ್ಲಿ ಕಜಕ್ ಮತ್ತು ಕಿರ್ಘಿಜರಿದ್ದಾರೆ. ಇದೇ ರೀತಿ ವಿವಿಧ ಧರ್ಮಿಯರೂ ಸಹ ಏಷ್ಯದಲ್ಲಿದ್ದಾರೆ.

ಹೊಸ ಪದಗಳು

ಶರತ್ಕಾಲ
ಬಿಲಿಯನ್
ಶಂಕುವಿನಾಕಾರದ ಮರಗಳ ಅರಣ್ಯ (ಶಂಖುಧಾರಿಕಾಡು)
ಪಳೆಯುಳಿಕೆ ಇಂಧನ
ಮಡಿಕೆ ಪರ್ವತಗಳು
ಗ್ರಂಥಿ
ಸುಣ್ಣಕಲ್ಲು
ಪಾಚಿ
ಶಿಲಾವಲ್ಕ
ಓಯಾಸಿಸ್
ಕಚ್ಚಾವಸ್ತು
ತೈಗ
ಟಂಡ್ರ

ಸಂವೇದ ವಿಡಿಯೋ ಪಾಠಗಳು

Samveda – 6th – Social Science – Asia (Part 1 of 2)
Samveda – 6th – Social Science – Asia (Part 2 of 2)

ಪೂರಕ ವಿಡಿಯೋಗಳು

Asia | Social Studies

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇದು ನಿಮಗೆ ತಿಳಿದಿರಲಿ

* ಏಷ್ಯ ಖಂಡದ ಅತ್ಯಂತ ಎತ್ತರವಾದ ಬಿಂದು ಮೌಂಟ್ ಎವರೆಸ್ಟ್ (8848 ಮೀ.)
* ಏಷ್ಯದ ಅತ್ಯಂತ ಕೆಳಮಟ್ಟದ ಬಿಂದು ಮೃತ ಸಮುದ್ರ. (ಸಮುದ್ರಮಟ್ಟಕ್ಕಿಂತ 305 ಮೀ. ಕೆಳಗೆ)
* ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಕಾರಾಕೊರಂ ಪರ್ವತ ಸರಣಿಗಳಲ್ಲಿವೆ.
* ಟಿಬೆಟ್ ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ. ಇದನ್ನು ಪ್ರಪಂಚದ ಮೇಲ್ಛಾವಣೆ ಎಂದು ಕರೆಯಲಾಗಿದೆ.
* ಕ್ಯಾಸ್ಪಿಯನ್ ಸಮುದ್ರವು ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿಯಾಗಿದೆ.
* ದಕ್ಷಿಣ ಸೈಬೀರಿಯಾದಲ್ಲಿರುವ ಬೈಕಲ್ ಸರೋವರವು ಪ್ರಪಂಚದಲ್ಲೇ ಆಳವುಳ್ಳದ್ದು.
* ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯದ ಚಿಕ್ಕದೇಶ ಮಾಲ್ಡೀವ್ಸ್.

ಏಷ್ಯ ಖಂಡದ ಅತ್ಯಂತ ಎತ್ತರವಾದ ಬಿಂದು ಮೌಂಟ್ ಎವರೆಸ್ಟ್ (8848 ಮೀ.)
ಏಷ್ಯದ ಅತ್ಯಂತ ಕೆಳಮಟ್ಟದ ಬಿಂದು ಮೃತ ಸಮುದ್ರ. (ಸಮುದ್ರಮಟ್ಟಕ್ಕಿಂತ 305 ಮೀ. ಕೆಳಗೆ)
ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಕಾರಾಕೊರಂ ಪರ್ವತ ಸರಣಿಗಳಲ್ಲಿವೆ.
ಟಿಬೆಟ್ ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ. ಇದನ್ನು ಪ್ರಪಂಚದ ಮೇಲ್ಛಾವಣೆ ಎಂದು ಕರೆಯಲಾಗಿದೆ.
ಕ್ಯಾಸ್ಪಿಯನ್ ಸಮುದ್ರವು ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿಯಾಗಿದೆ.
ದಕ್ಷಿಣ ಸೈಬೀರಿಯಾದಲ್ಲಿರುವ ಬೈಕಲ್ ಸರೋವರವು ಪ್ರಪಂಚದಲ್ಲೇ ಆಳವುಳ್ಳದ್ದು.
ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯದ ಚಿಕ್ಕದೇಶ ಮಾಲ್ಡೀವ್ಸ್.
ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯದ ಚಿಕ್ಕದೇಶ ಮಾಲ್ಡೀವ್ಸ್.

ಚಟುವಟಿಕೆಗಳು

1) ನಿಮ್ಮ ಅಟ್ಲಾಸ್ ಪುಸ್ತಕದ ಸಹಾಯದಿಂದ ಏಷ್ಯ ಭೂಪಟವನ್ನು ಅಧ್ಯಯನ ಮಾಡಿ, ಪರ್ವತ, ಪ್ರಸ್ಥಭೂಮಿ, ಮೈದಾನಗಳು ಮತ್ತು ನದಿಗಳನ್ನು ಗುರುತಿಸಿ ಮತ್ತು ಪಟ್ಟಿ ಮಾಡುವುದು. ಅವುಗಳನ್ನು ಭೂಪಟದಲ್ಲಿ ಗುರುತಿಸಿ.

2) ಏಷ್ಯ ಖಂಡದ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳ ವಿವರಗಳಾದ ಉಗಮಸ್ಥಾನ, ಉದ್ದ, ಉಪನದಿಗಳು, ಮುಖಜಭೂಮಿ, ಅಣೆಕಟ್ಟುಗಳ ಮಾಹಿತಿ ಮತ್ತು ಚಿತ್ರಗಳನ್ನು ಸಂಗ್ರಹಿಸುವುದು.