ಸಹಕಾರ : ಕು. ಮೈತ್ರಿ ಹೆಗಡೆ, (ಸಹಶಿಕ್ಷಕರು, GPT ವಿಜ್ಞಾನ), ಸ.ಹಿ.ಪ್ರಾ.ಶಾಲೆ, ಹುಲ್ಕುತ್ರಿ.
ಪ್ರಾಣಿಗಳಲ್ಲಿ ಪೋಷಣೆ
ಮನುಷ್ಯರು ಸೇರಿದಂತೆ ಎಲ್ಲಾ ಜೀವಿಗಳಿಗೂ ತಮ್ಮ ದೇಹ ಬೆಳವಣಿಗೆ, ದುರಸ್ತಿ ಹಾಗೂ ದೈಹಿಕ ಚಟುವಟಿಕೆಗಳಿಗೆ ಆಹಾರದ ಅಗತ್ಯವಿದೆ.
ಆಹಾರ ಸೇವನೆಯ ಹಲವು ವಿಧಾನಗಳು (Different ways of taking food / Ingestion) :-
ಹೆರೆಯುವುದು (Scraping)
ಜಿಗಿಯುವುದು (Chewing)
ನುಂಗುವುದು
ಹಿಡಿಯುವುದು
ಹೀರುವುದು (Sucking)










ಜೀರ್ಣಕ್ರಿಯೆ :- ಆಹಾರದ ಸಂಕೀರ್ಣ ಘಟಕಗಳು ಸರಳ ವಸ್ತಗಳಾಗಿ ವಿಭಜನೆಗೊಳ್ಳುವುದಕ್ಕೆ ಜೀರ್ಣಕ್ರಿಯೆ ಎನ್ನುವರು.
ಮಾನವನಲ್ಲಿ ಜೀರ್ಣಕ್ರಿಯೆ :- ಮಾನವರಲ್ಲಿ ಬಾಯಿಯ ಕುಹರದಿಂದ ಆರಂಭವಾಗಿ ಗುದದ್ವಾರದಲ್ಲಿ ಕೊನೆಯಾಗುವ ನೀಳ ಕೊಳವೆಯ ಮೂಲಕ ಆಹಾರ ಸಾಗುತ್ತದೆ. ಈ ಕೊಳವೆಯನ್ನು ಬೇರೆ ಬೇರೆ ಭಾಗಗಳಾಗಿ ವಿಭಾಗಿಸಬಹುದು.

- ಬಾಯಿ ಮತ್ತು ಬಾಯಿಯ ಕುಹರ :- ಬಾಯಿಯ ಮೂಲಕ ಆಹಾರವು ದೇಹದೊಳಗೆ ಸೇರುತ್ತದೆ. ಹಲ್ಲುಗಳು ಆಹಾರವನ್ನು ಯಾಂತ್ರಕವಾಗಿ ಜಿಗಿದು ಸಣ್ಣ ಸಣ್ಣ ತುಂಡುಗಳಾಗಿಸುತ್ತವೆ.

2. ಅನ್ನನಾಳ :- (Food pipe / Oesophagus) :- ನಾವು ನುಂಗುವ ಆಹಾರವು ಅನ್ನನಾಳವನ್ನು ಪ್ರವೇಶಿಸುತ್ತದೆ. ಅನ್ನನಾಳದ ಭಿತ್ತಿಯ ಚಲನೆಯಿಂದಾಗಿ ಆಹಾರವು ಕೆಳಕ್ಕೆ ಚಲಿಸುತ್ತದೆ.

3. ಜಠರ :- ಇದು ದಪ್ಪ ಭಿತ್ತಿಯ ಚೀಲದಂಥ ಆಕೃತಿಯಾಗಿದೆ. ಇದರ ಆಕಾರವು ಚಪ್ಪಟೆಯಾದ ‘J’ ತರಹ ಇದ್ದು, ಇದು ಆಹಾರನಾಳದ ಅತ್ಯಂತ ಅಗಲ ಭಾಗವಾಗಿದೆ. ಇದು ಒಂದು ತುದಿಯಲ್ಲಿ ಅನ್ನನಾಳದಿಂದ ಆಹಾರವನ್ನು ಪಡೆದುಕೊಳ್ಳುತ್ತದೆ. ಇನ್ನೊಂದು ತುದಿಯ ರಂಧ್ರವು ಸಣ್ಣ ಕರುಳಿಗೆ ತೆರೆದುಕೊಳ್ಳುತ್ತದೆ. ಜಠರದ ಒಳಪದರವು ಅಂಟಾದ ಲೋಳ, ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಜೀರ್ಣರಸಗಳನ್ನು ಸ್ರವಿಸುತ್ತದೆ. ಲೋಳೆಯು ಜಠರದ ಪದರಗಳನ್ನು ರಕ್ಷಿಸುತ್ತದೆ. ಜೀರ್ಣರಸಗಳು ಪ್ರೋಟೀನಗಳನ್ನು ಸರಳ ವಸ್ತುಗಳಾಗಿ ವಿಭಜಿಸುತ್ತದೆ.


4. ಸಣ್ಣಕರುಳು (Small intestine) :- ಸಣ್ಣಕರುಳು ಸುರುಳಿ ಸುರುಳಿಯಾಗಿ ಸುತ್ತಲ್ಪಟ್ಟಿದ್ದು ಸುಮಾರು 7.5ಮೀ. ಉದ್ದವಿದೆ.
ಇಲ್ಲಿ ಕರುಳಿನ ಜೀರ್ಣರಸವು ಆಹಾರದ ಎಲ್ಲಾ ಘಟಕಗಳ ಜೀರ್ಣಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಕಾರ್ಬೋಹೈಡ್ರೇಟ್ ಗಳು – ಗ್ಲೂಕೋಸ್ ನಂತಹ ಸಕ್ಕರೆಗಳಾಗಿ, ಕೊಬ್ಬು – ಕೊಬ್ಬಿನಾಮ್ಲ ಮತ್ತು ಗ್ಲಿಸರಾಲ್ ಗಳಾಗಿ, ಪ್ರೋಟೀನ್ – ಅಮೈನೋ ಆಮ್ಲಗಳಾಗಿ ಪರಿವರ್ತಿತವಾಗುತ್ತವೆ.

ಸಣ್ಣಕರುಳಿನ ಒಳಭಿತ್ತಿಯಲ್ಲಿರುವ ವಿಲ್ಲೈಗಳು ಜೀರ್ಣಗೊಂಡ ಆಹಾರವನ್ನು ಹೀರಿಕೆ ಮಾಡುತ್ತವೆ.


5. ದೊಡ್ಡ ಕರುಳು :- ಸಣ್ಣಕರುಳಿಗಿಂತ ಅಗಲವಾಗಿದ್ದು, ಉದ್ದವು ಕಡಿಮೆ ಇದೆ. ಜೀರ್ಣಗೊಳ್ಳದ ಆಹಾರದಿಂದ ನೀರು ಮತ್ತು ಲವಣಗಳನ್ನು ಹೀರುವುದು ದೊಡ್ಡ ಕರುಳಿನ ಕಾರ್ಯ.

ಉಳಿದ ತ್ಯಾಜ್ಯವು ಗುದನಾಳವನ್ನು ಸೇರುತ್ತದೆ. ಈ ಮಲವು ಗುದದ್ವಾರದ ಮೂಲಕ ಹೊರಹಾಕಲ್ಪಡುತ್ತದೆ.





ವಿಡಿಯೋ ಪಾಠಗಳು
ಮಾನವನಲ್ಲಿ ಜೀರ್ಣಕ್ರಿಯೆ ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ