ದೊಡ್ಡವರು ಯಾರು? – ಪಾಠ-6

ಕಲಿಕೆಗೆ ದಾರಿ:
ಕುಂಬಳಕಾಯಿ, ಪಡುವಲಕಾಯಿ ಮತ್ತು ಹಾಗಲಕಾಯಿ ನಡುವೆ ದೊಡ್ಡವರು ಯಾರು ಎಂಬ ಬಗ್ಗೆ ವಾದ ನಡೆಯಿತು. ಅವರ ನಡುವೆ ಏನು ವಾದ ನಡೆದಿರಬಹುದು ಎಂದು ಊಹಿಸಿಕೊಂಡು ತರಗತಿಯಲ್ಲಿ ಸ್ನೇಹಿತರ ಜೊತೆ ಸೇರಿ ಚರ್ಚಿಸಿ.

ಒಂದು ಊರು, ಅಲ್ಲೊಂದು ಇಲಿಗಳ ಸಂಸಾರ. ಆ ಸಂಸಾರದಲ್ಲಿ ಒಬ್ಬ ಮಗಳಿದ್ದಳು.

ಮಗಳಿಗೆ ತಕ್ಕ ವರನನ್ನು ಹುಡುಕಬೇಕೆಂದು ತಂದೆ ತಾಯಿ ಇಲಿಗಳು ಯೋಚಿಸಿದವು.

ಜಗತ್ತನ್ನೇ ಬೆಳಗುವ ಸೂರ್ಯ ಬಹಳ ದೊಡ್ಡವನು. ಅವನೇ ನಮ್ಮ ಮಗಳಿಗೆ ತಕ್ಕ ವರ, ಎಂದು ತಾಯಿ ಇಲಿ ಹೇಳಿತು.

ಸೂರ್ಯನ ಬಳಿಗೆ ಇಲಿಗಳು ಹೋದವು. ಮದುವೆ ವಿಚಾರ ತಿಳಿಸಿದವು. ಈ ವಿಚಾರವನ್ನು ಕೇಳಿದ ಸೂರ್ಯನು ನನಗಿಂತಲೂ ದೊಡ್ಡವನು ಇನ್ನೊಬ್ಬನಿದ್ದಾನೆ. ಅವನನ್ನು ಕೇಳಿ ಎಂದು ಹೇಳಿದನು.

ಹಾಗಾದರೆ ‘ಅವನು ಯಾರು?’ ಎಂದು ತಂದೆ ಇಲಿ ಕೇಳಿತು. ಅದಕ್ಕೆ ಸೂರ್ಯನು `ಮೋಡ ನನಗಿಂತಲೂ ದೊಡ್ಡವನು’ ಎಂದು ಹೇಳಿದನು. ಎಲ್ಲರೂ ಸೇರಿ ಮೋಡದ ಬಳಿಗೆ ಹೋದವು.

ಮದುವೆ ವಿಚಾರ ಕೇಳಿದ ಮೋಡವು `ಇಲ್ಲಾ! ಇಲ್ಲಾ! ನನಗಿಂತ ದೊಡ್ಡವನು ಬೆಟ್ಟದ ರಾಜನಿದ್ದಾನೆ. ಅವನಲ್ಲಿ ಹೋಗಿ’ ಎಂದು ಹೇಳಿತು.

ಬೆಟ್ಟದ ರಾಜನ ಬಳಿಗೆ ಇಲಿಗಳು ಹೋಗಿ ವಿಷಯ ತಿಳಿಸಿದವು. ಆಗ ಬೆಟ್ಟದ ರಾಜ `ನನಗಿಂತಲೂ ದೊಡ್ಡವನು ಮತ್ತೊಬ್ಬನಿದ್ದಾನೆ. ಅವನೇ ಇಲಿರಾಯ ಅವನಲ್ಲಿಗೆ ಹೋಗಿ’ ಎಂದನು.

ನಮ್ಮಲ್ಲೆ ವರನನ್ನು ಇಟ್ಟುಕೊಂಡು ಸುಮ್ಮನೆ ಪರದಾಡಿದೆವು' ಎಂದು ತಂದೆ ಇಲಿ ಹೇಳಿತು.ನಮ್ಮ ಮಗಳಿಗೆ ಇಲಿರಾಯನೇ ತಕ್ಕ ವರ’ ಎಂದು ತೀರ್ಮಾನಿಸಿ, ಮಗಳನ್ನು ಇಲಿರಾಯನಿಗೆ ಕೊಟ್ಟು ವೈಭವದಿಂದ ಮದುವೆ ಮಾಡಿದವು.

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರು ಅಲೆದಂತೆ.

ಪದಗಳ ಅರ್ಥ

ಸಂಸಾರ – ಪರಿವಾರ, ಕುಟುಂಬ;
ವರ – ಮದುವೆಯಾಗುವ ಹುಡುಗ, ಮದುಮಗ;
ಜಗತ್ತು – ಲೋಕ, ವಿಶ್ವ;
ತಕ್ಕ – ಯೋಗ್ಯವಾದ, ಸಮರ್ಥ;
ಸೂರ್ಯ – ರವಿ;
ಬೆಟ್ಟ – ಪರ್ವತ, ಗಿರಿ;
ಸಂಭ್ರಮ – ಉತ್ಸಾಹ, ಸಡಗರ;
ವಿಚಾರ – ವಿಷಯ, ಸಂಗತಿ;
ಬಹಳ – ಹೆಚ್ಚು, ಅಧಿಕ;
ಮದುವೆ – ಲಗ್ನ, ವಿವಾಹ, ಕಲ್ಯಾಣ.

ಸಂವೇದ ವಿಡಿಯೋ ಪಾಠಗಳು

Samveda 4th KannadaFL DoddavaruYaru 1of1

ಪೂರಕ ವಿಡಿಯೋಗಳು

4th Standard Kannada | Doddavaru Yaru | 4th CLASS Kannada Lesson | ದೊಡ್ಡವರು ಯಾರು ?

ಪ್ರಶ್ನೋತ್ತರಗಳು ಹಾಗೂ ಭಾಷಾ ಚಟುವಟಿಕೆಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬಳಕೆ ಚಟುವಟಿಕೆ

ಆ. ಪತ್ರಿಕೆಗಳಲ್ಲಿ ಬರುವ ವಿವಿಧ ಚಿತ್ರ ಕಥೆಗಳನ್ನು ಸಂಗ್ರಹಿಸಿ, ಚಿತ್ರಕಥಾ ಕೋಶ ತಯಾರಿಸು.

ಇ. ನಿಮ್ಮ ಶಾಲೆಯಲ್ಲಿ ನಡೆಸುವ `ಗಣರಾಜ್ಯೋತ್ಸವ’ ಕಾರ್ಯಕ್ರಮದ ಪ್ರಚಾರಕ್ಕಾಗಿ ಒಂದು ಭಿತ್ತಿಪತ್ರವನ್ನು ಶಿಕ್ಷಕರ ಸಹಾಯದಿಂದ ಸಿದ್ಧಪಡಿಸು.