ಜಲಮಾಲಿನ್ಯ- ಸಂರಕ್ಷಣೆ – ಪಾಠ – 7

ಇಲ್ಲಿ ಎರಡು ಲೋಟಗಳಲ್ಲಿ ನೀರಿದೆ.
ನೀನು ಯಾವ ಲೋಟದ ನೀರನ್ನು ಕುಡಿಯುವೆ? ಏಕೆ?

ನಾವು ವಿವಿಧ ಕೆಲಸಗಳಿಗೆ ಬಾವಿ, ಕೆರೆ, ನದಿ ಇತ್ಯಾದಿ ವಿವಿಧ ಆಕರಗಳ ನೀರನ್ನು ಬಳಸುತ್ತೇವೆ ಎಂದು ನಿನಗೆ ಗೊತ್ತು.
ನಿನ್ನ ಮನೆಯಲ್ಲಿ ಕುಡಿಯಲು ಹಾಗೂ ಅಡುಗೆ ಮಾಡಲು ಉಪಯೋಗಿಸುವ ನೀರನ್ನು ಎಲ್ಲಿಂದ ತರುತ್ತಾರೆ?

ಓದಿ-ತಿಳಿ
ನೀರು ಕುಡಿಯಲು ಯೋಗ್ಯವಲ್ಲ'ಅಥವಾನೀರು ಕುಡಿಯಲು ಚೆನ್ನಾಗಿಲ್ಲ’ ಎಂದರೆ ನೀರು ಶುದ್ಧವಾಗಿಲ್ಲ, ನೀರು ಮಲಿನಗೊಂಡಿದೆ ಎಂದರ್ಥ. ನೀರಿನಲ್ಲಿ ಮಣ್ಣಿನ ಕಣಗಳು. ಕಸಕಡ್ಡಿಗಳು, ಕಣ್ಣಿಗೆ ಕಾಣುವ ಮತ್ತು ಕಾಣದ ಕ್ರಿಮಿಕೀಟಗಳು, ಪಾತ್ರೆ ಮತ್ತು ಬಟ್ಟೆಗಳನ್ನು ತೊಳೆದಾಗ ಬರುವ ಕಶ್ಮಲ, ಬೇಸಾಯಕ್ಕೆ ಬಳಸುವ ಕ್ರಿಮಿನಾಶಕಗಳು ಹಾಗೂ ರಸಗೊಬ್ಬರಗಳು, ಕೈಗಾರಿಕೆಗಳಿಂದ ಹೊರಬರುವ ಪದಾರ್ಥಗಳು ಮುಂತಾದವು ಇರಬಹುದು. ಇವುಗಳಲ್ಲಿ ಯಾವುದೇ ವಸ್ತು ನೀರಿನಲ್ಲಿ ಸೇರಿದಾಗ ನೀರು ಕಲುಷಿತಗೊಳ್ಳುತ್ತದೆ. ಬಳಸಲು ಯೋಗ್ಯವೆನಿಸುವುದಿಲ್ಲ. ಇದನ್ನೇ ನೀರಿನ ಮಲಿನತೆ ಅಥವಾ ಜಲಮಾಲಿನ್ಯ ಎನ್ನುವರು.

ನಿನ್ನ ಊರಿನಲ್ಲಿರುವ ನೀರಿನ ಆಕರಗಳನ್ನು ಬರೆ. ಅವು ಏನಾದರೂ ಮಲಿನಗೊಂಡಿದ್ದರೆ ಕಾರಣಗಳನ್ನು ಹಿರಿಯರೊಡನೆ ಮತ್ತು ಶಿಕ್ಷಕರೊಡನೆ ಚರ್ಚಿಸಿ ಪಟ್ಟಿಮಾಡು.

ನೀರಿನ ಆಕರಮಲಿನಗೊಂಡಿದೆ / ಇಲ್ಲಮಲಿನಗೊಂಡಿದ್ದಲ್ಲಿ ಕಾರಣಗಳು

ಚರಂಡಿ ನೀರಿನಲ್ಲಿ ಆಡಬೇಡ ಎಂದು ಅಜ್ಚಿ ಏಕೆ ಹೇಳಿದರು?

ರಮೇಶನಿಗೆ ಕಾಲರಾರೋಗ ಹೇಗೆ ಬಂದಿರಬಹುದು? ಯೋಚಿಸಿ ಬರೆ.

ಕಾಲರಾರೋಗ
ಮಲಿನ ನೀರು

ಮಲಿನ ನೀರಿನಿಂದ ಬರುವ ಇನ್ನಿತರ ಕಾಯಿಲೆಗಳು ಯಾವುವು ಎಂದು ಶಿಕ್ಷಕರು ಮತ್ತು ಹಿರಿಯರಿಂದ ತಿಳಿದು ಬರೆ.

ಮಲಿನ ನೀರಿನಿಂದ ಬರುವ ಇನ್ನಿತರ ಕಾಯಿಲೆಗಳು
ಮಲಿನ ನೀರಿನಿಂದ ಬರುವ ಇನ್ನಿತರ ಕಾಯಿಲೆಗಳು

ಊರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿಕೊಡು. ನೀರಿನಿಂದ ಬರುವ ಕಾಯಿಲೆಗಳ ಬಗ್ಗೆ ಅಲ್ಲಿನ ವೈದ್ಯರಿಂದ ಹೆಚ್ಚು ತಿಳಿ.

ಓದಿ-ತಿಳಿ
ನೀರಿನಿಂದ ಬರುವ ಕಾಲರಾದಂತಹ ಕೆಲವೊಂದು ರೋಗಗಳಿಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಮರಣ ಕೂಡಾ ಸಂಭವಿಸಬಹುದು. ಅತಿಯಾಗಿ ವಾಂತಿ, ಬೇಧಿ ಆಗುತ್ತಿದ್ದರೆ ಆಗ ದೇಹದಲ್ಲಿ ನೀರು ಕಡಿಮೆಯಾಗಿ ಸುಸ್ತಾಗುತ್ತದೆ. ಇದೇ ನಿರ್ಜಲೀಕರಣ. ನಿರ್ಜಲೀಕರಣವನ್ನು ತಡೆಯಲು ಕುದಿಸಿ, ಆರಿಸಿದ ನೀರಿಗೆ ಉಪ್ಪು, ಸಕ್ಕರೆ ಹಾಗೂ ನಿಂಬೆರಸವನ್ನು ಬೆರೆಸಿ ವಾಂತಿ, ಬೇಧಿ ಆಗುತ್ತಿರುವವರಿಗೆ ಆಗಾಗ್ಗೆ ಕೊಡುತ್ತಿರಬೇಕು. ಇದೇ ಪುನರ್ಜಲೀಕರಣ.

ನೀರಿನಿಂದ ಬರುವ ರೋಗಗಳಿಗೆ ನೀಡುವ ಪ್ರಥಮ ಚಿಕಿತ್ಸೆಯ ಬಗ್ಗೆ ವೈದ್ಯರು, ಹಿರಿಯರು ಮತ್ತು ಶಿಕ್ಷಕರೊಂದಿಗೆ ಚರ್ಚಿಸು.

ಪುನರ್ಜಲೀಕರಣಕ್ಕಾಗಿ ಆಸ್ಪತ್ರೆ, ಔಷಧಿ ಅಂಗಡಿಗಳಲ್ಲಿ ಓ.ಆರ್.ಎಸ್. ಪೊಟ್ಟಣಗಳು ದೊರಕುತ್ತವೆ.

ಓ.ಆರ್.ಎಸ್. ಬಗ್ಗೆ ಶಿಕ್ಷಕರಿಂದ ಕೇಳಿ ತಿಳಿದುಕೊ.

ಓ.ಆರ್.ಎಸ್. ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದು ಪಟ್ಟಿಮಾಡು.

———————————————————————————————————————————————

ವೈದ್ಯರ, ಹಿರಿಯರ ಅಥವಾ ಶಿಕ್ಷಕರ ಸಹಾಯದಿಂದ ಉಪ್ಪು, ಸಕ್ಕರೆ, ನಿಂಬೆರಸ ಬಳಸಿ ಪುನರ್ಜಲೀಕರಣ ದ್ರಾವಣ ತಯಾರಿಸಲು ಕಲಿ.

ಓ.ಆರ್.ಎಸ್.ಅನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿ.

ಮಲಿನಗೊಂಡ ನೀರನ್ನು ಕುಡಿದು ರೋಗಗಳಿಗೆ ತುತ್ತಾಗಿ, ಔಷಧಿಯನ್ನು ಸೇವಿಸಿ ಗುಣ ಹೊಂದುವುದಕ್ಕಿಂತ ಶುದ್ಧ ನೀರನ್ನು ಕುಡಿದು ರೋಗಗಳನ್ನು ತಡೆಯುವುದೇ ಸೂಕ್ತ. ಹಾಗಾಗಿ ಶುದ್ಧ ನೀರು ಮಲಿನಗೊಳ್ಳದಂತೆ ಎಚ್ಚರವಹಿಸು.

ಮಲಿನ ನೀರನ್ನು ಶುದ್ಧಗೊಳಿಸುವ ಕ್ರಮಗಳನ್ನು ಹಿರಿಯರಿಂದ ತಿಳಿದು ಬರೆ.

——————————————————————————————————————————————

ನಿನ್ನ ಊರಿನಲ್ಲಿರುವ ಅಥವಾ ಸಮೀಪದ ಯಾವುದಾದರೂ ಕಾರ್ಖಾನೆಗಳಿಗೆ ಭೇಟಿ ನೀಡು. ಕಾರ್ಖಾನೆಗಳಲ್ಲಿ ಬಳಸಿದ ನೀರನ್ನು ಏನು ಮಾಡುತ್ತಾರೆ ಎಂದು ಗಮನಿಸಿ ಬರೆ.

——————————————————————————————————————————————

ನಿನ್ನ ಊರಿನಲ್ಲಿರುವ ನೀರಿನ ಆಕರಗಳು ಮಲಿನಗೊಂಡಿದ್ದರೆ ಅದಕ್ಕೆ ಕಾರಣಗಳನ್ನು ಈಗಾಗಲೇ ನೀನು ತಿಳಿದಿರುವೆ. ಈ ಆಕರಗಳು ಮಲಿನಗೊಳ್ಳದಂತೆ ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಯೋಚಿಸಿ ಬರೆ.

—————————————————————————————————————————————-

ನಿನ್ನ ಮನೆಯಲ್ಲಿ ಅಥವಾ ಶಾಲೆಯಲ್ಲಿ ಬಳಸುವ ನೀರು ಮಲಿನಗೊಳ್ಳದಂತೆ ಹೇಗೆ ನೋಡಿಕೊಳ್ಳುವೆ? ಯಾವ ಕ್ರಮಗಳನ್ನು ಅನುಸರಿಸುವೆ? ಯೋಚಿಸಿ ಬರೆ.

————————————————————————————————————————————

ನೀರು ಅಮೂಲ್ಯ ಸಂಪತ್ತು. ನಮ್ಮ ಉಪಯೋಗಕ್ಕಾಗಿ ದೊರೆಯುವ ನೀರಿನ ಪ್ರಮಾಣ ಅತಿ ಕಡಿಮೆ ಎಂದು ನಿನಗೆ ಗೊತ್ತು. ಇದು ಪೋಲಾಗದಂತೆ ಮತ್ತು ಮಲಿನಗೊಳ್ಳದಂತೆ ನೋಡಿಕೊ.

ನಿನಗಿದು ಗೊತ್ತೆ?

* ನಮ್ಮ ರಾಜ್ಯದ ಹಾಗೂ ದೇಶದ ಹೆಚ್ಚಿನ ನದಿಗಳು ಮಲಿನಗೊಂಡಿವೆ.
* ಫ್ಲೊರಿನ್, ಪಾದರಸ, ಆರ್ಸೆನಿಕ್, ಸೀಸದಂತಹ ವಿಷಕಾರಿ ರಾಸಾಯನಿಕಗಳು ಇರುವ ನೀರನ್ನು ಸೇವಿಸಿದರೆ ಅಪಾಯಕಾರಿ ರೋಗಗಳು ಬರುತ್ತವೆ.
* ಮಲಿನ ನೀರಿನಿಂದ ಜಲಜೀವಿಗಳು, ಮುಖ್ಯವಾಗಿ ಮೀನುಗಳು ಸತ್ತ ಸಂಗತಿಗಳು ನಮ್ಮ ರಾಜ್ಯದಲ್ಲಿ ವರದಿಯಾಗಿವೆ.
* ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಗುಣಮಟ್ಟವನ್ನು ಕಾಪಾಡುವ ಸಲುವಾಗಿ ನೇಮಕವಾಗಿರುವ ಒಂದು ಸರ್ಕಾರಿ ಸಂಸ್ಥೆ.
* ಪಟ್ಟಣಗಳಲ್ಲಿ ಕುಡಿಯುವ ನೀರನ್ನು ಕ್ಲೋರಿನ್ ಎಂಬ ರಾಸಾಯನಿಕದಿಂದ ಸೂಕ್ಷಜೀವಿಗಳಿಲ್ಲದಂತೆ ಶುದ್ಧೀಕರಿಸಿ ನಂತರ ಸರಬರಾಜು ಮಾಡುತ್ತಾರೆ.
* ಗೊಬ್ಬರದ ಗುಂಡಿಗಳು, ಪಾಯಿಖಾನೆ ಗುಂಡಿಗಳು, ಬಾವಿ, ಕೊಳ ಇತ್ಯಾದಿಗಳು ನೀರಿನ ಆಕರದಿಂದ ಕನಿಷ್ಟ 10 ಮೀಟರ್‍ನಷ್ಟು ದೂರವಿರಬೇಕು. ಇಲ್ಲವಾದಲ್ಲಿ ಈ ಗುಂಡಿಗಳಲ್ಲಿ ಸಂಗ್ರಹವಾಗುವ ರೋಗಾಣುಗಳಿಂದ ಕೂಡಿದ ನೀರು ನೀರಿನ ಆಕರಗಳನ್ನು ಸೇರಿ, ಅವುಗಳನ್ನು ಮಲಿನಗೊಳಿಸುತ್ತದೆ.
* ನೀರನ್ನು ಕುದಿಸಿದಾಗ ಅದರಲ್ಲಿರುವ ಹೆಚ್ಚಿನ ರೋಗಕಾರಕ ಸೂಕ್ಷ್ಮಜೀವಿಗಳು ಸಾಯುತ್ತವೆ. ಕುದಿಸಿ ಆರಿಸಿದ ನೀರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
* ಸಮುದ್ರದ ನೀರಿನಲ್ಲಿರುವ ಉಪ್ಪಿನ ಅಂಶವನ್ನು ಕಡಿಮೆಗೊಳಿಸಿ ಕೃಷಿಗೆ, ಗೃಹಬಳಕೆಗೆ ಯೋಗ್ಯವಾಗಿ ಮಾಡುವ ಕ್ರಿಯೆಯೆ ನಿರ್ಲವಣೀಕರಣ. ಇದು ಅತ್ಯಂತ ದುಬಾರಿ.
* ನೀರಿನ ಅಭಾವವನ್ನು ತಪ್ಪಿಸಲು ಕಟ್ಟಡಗಳ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸುವುದನ್ನು ನಗರಗಳಲ್ಲಿ ಕಡ್ಡಾಯ ಮಾಡಲಾಗುತ್ತಿದೆ.
* ನೀರಿನ ಅಭಾವದಿಂದಾಗಿ, ಕೈಗಾರಿಕಾ ವಲಯಗಳಲ್ಲಿ ಒಮ್ಮೆ ಬಳಸಿದ ನೀರನ್ನು ಶುದ್ಧೀಕರಿಸಿ ಮತ್ತೆ ಬಳಸುವ ಕ್ರಮ ಜಾರಿಯಲ್ಲಿದೆ.

ಸಂವೇದ ವಿಡಿಯೋ ಪಾಠಗಳು

Samveda 4th EVS Jalamalinya mattu Samrakshane – 4 KM EVS

ಪೂರಕ ವಿಡಿಯೋಗಳು

ಜಲ ಮಾಲಿನ್ಯ ಸಂರಕ್ಷಣೆ | Jalamalinya samrakshane | 4th standard EVS | Unit 7 | Part-1
ಜಲ ಮಾಲಿನ್ಯ ಸಂರಕ್ಷಣೆ | Jalamalinya samrakshane | 4th standard EVS | Unit 7 | Part-2

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

ಉಪ್ಪು, ಸಕ್ಕರೆ, ನಿಂಬೆರಸ ಬಳಸಿ ಪುನರ್ಜಲೀಕರಣ ದ್ರಾವಣ ತಯಾರಿಕೆ
ಮಲಿನ ನೀರನ್ನು ಶುದ್ಧಗೊಳಿಸುವ ಕ್ರಮ
ಮಲಿನ ನೀರನ್ನು ಶುದ್ಧಗೊಳಿಸುವ ಕ್ರಮ
ಮಲಿನ ನೀರನ್ನು ಶುದ್ಧಗೊಳಿಸುವ ಕ್ರಮ

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.