ಕನ್ನಡಮ್ಮನ ಹರಕೆ (ಪದ್ಯ)

ಕನ್ನಡಕೆ ಹೋರಾಡು
ಕನ್ನಡದ ಕಂದಾ;
ಕನ್ನಡವ ಕಾಪಾಡು
ನನ್ನ ಆನಂದಾ |

ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ;
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ |

ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಗೆ;
ತಾಯಿಯಪ್ಪುಗೆಯಂತೆ
ಬಲುಸೊಗಸು ಮೆಯ್ಗೆ |

ಗುರುವಿನೊಳ್ನುಡಿಯಂತೆ
ಶ್ರೇಯಸ್ಸು ಬಾಳ್ಗೆ;
ತಾಯ್ನುಡಿಗೆ ದುಡಿದು ಮಡಿ
ಇಹಪರಗಳೇಳ್ಗೆ |

ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ;
ಕನ್ನಡಮ್ಮನ ಹರಕೆ,
ಮರೆಯದಿರು, ಚಿನ್ನಾ |

ಮರೆತೆಯಾದರೆ ಅಯ್ಯೊ;
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ, ರನ್ನಾ |

– ಕುವೆಂಪು

ಪದಗಳ ಅರ್ಥ (ಚಿತ್ರ ಸಹಿತ)

ಕಾಪಾಡು – ರಕ್ಷಿಸು, ಪೋಷಿಸು
ದುಡಿ – ಕೆಲಸ ಮಾಡು, ಶ್ರಮಪಡು
ಬೇಡು – ಕೇಳು, ಯಾಚಿಸು
ಮಡಿ – ಸಾವು, ಮರಣ ಹೊಂದು
ಶ್ರೇಯಸ್ಸು- ಏಳಿಗೆ, ಅಭಿವೃದ್ಧಿ
ಹೋರಾಡು – ಸೆಣಸು, ಹೋರಾಟ ಮಾಡು
ಅಪ್ಪುಗೆ – ಆಲಿಂಗನ
ಕಲಿ – ವೀರ, ಶೂರ
ಸವಿ – ರುಚಿ

ಕಾಪಾಡು – ರಕ್ಷಿಸು, ಪೋಷಿಸು
ದುಡಿ – ಕೆಲಸ ಮಾಡು, ಶ್ರಮಪಡು
ಬೇಡು – ಕೇಳು, ಯಾಚಿಸು
ಮಡಿ – ಸಾವು, ಮರಣ ಹೊಂದು
ಶ್ರೇಯಸ್ಸು- ಏಳಿಗೆ, ಅಭಿವೃದ್ಧಿ
ಹೋರಾಡು – ಸೆಣಸು, ಹೋರಾಟ ಮಾಡು
ಅಪ್ಪುಗೆ – ಆಲಿಂಗನ
ಕಲಿ – ವೀರ, ಶೂರ
ಸವಿ – ರುಚಿ

ಟಿಪ್ಪಣಿ (ಚಿತ್ರ ಸಹಿತ)

ಇಹಪರ – ಭೂಮಿಯ ಮೇಲಿನ ಬದುಕು, ಮನುಷ್ಯನ ಲೋಕ
ಜೋಗುಳ – ಮಕ್ಕಳನ್ನು ಮಲಗಿಸುವಾಗ ಹಾಡುವ ಪದ, ಲಾಲಿ ಹಾಡು.
ತಾಯ್ನುಡಿ – ತಾಯಿ ಮಾತು, ಮಾತೃಭಾಷೆ, ಮನೆಮಾತು.
ದಮ್ಮಯ್ಯ – ದೀನತೆಯಿಂದ ಬೇಡುವುದು.

ಇಹಪರ – ಭೂಮಿಯ ಮೇಲಿನ ಬದುಕು, ಮನುಷ್ಯನ ಲೋಕ
ಜೋಗುಳ – ಮಕ್ಕಳನ್ನು ಮಲಗಿಸುವಾಗ ಹಾಡುವ ಪದ, ಲಾಲಿ ಹಾಡು.
ತಾಯ್ನುಡಿ – ತಾಯಿ ಮಾತು, ಮಾತೃಭಾಷೆ, ಮನೆಮಾತು.
ದಮ್ಮಯ್ಯ – ದೀನತೆಯಿಂದ ಬೇಡುವುದು.

ವಿಡಿಯೋ ಪಾಠಗಳು

Samveda – 4th – Kannada – Kannadammana Harake | ಸಂವೇದ ಪಾಠ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
4th Std Kannada Subject | Chapter -1 Kannadammana Harake Poem ಕನ್ನಡಮ್ಮನ ಹರಕೆ | Kannada Lesson

ಪದ್ಯದ ಮಾದರಿ ಗಾಯನ

https://youtu.be/NmqWfnxXO9k

4th std | new syllabus 2017 | 1st language kannada | 1st poem | kannadammana harake | ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪ್ರಶ್ನೋತ್ತರಗಳು ಹಾಗೂ ಭಾಷಾ ಚಟುವಟಿಕೆಗಳು

ಈ ಪಾಠದ ಪ್ರಶ್ನೋತ್ತರಗಳು, ಸಾರಾಂಶ ಹಾಗೂ ಭಾಷಾ ಚಟುವಟಿಕೆ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬಳಕೆ ಚಟುವಟಿಕೆ

ಅ. ಹಿರಿಯರಿಂದ ಜೋಗುಳದ ಪದಗಳನ್ನು ಸಂಗ್ರಹಿಸಿ ಅಭ್ಯಾಸ ಮಾಡಿ.

North Karnataka Folk Song for Baby Naming Ceremony | ಜೋಗುಳ ಹಾಡಿಗಾಗಿ ಪರದೆಯ ಮೇಲೆ ಕ್ಲಿಕ್ ಮಾಡಿ
Attitta nodadiru-Laali haadu by Vijayashree|Kannada Bhavageete|lullaby|jogula haadu | ಲಾಲಿ ಹಾಡಿಗಾಗಿ ಪರದೆಯ ಮೇಲೆ ಕ್ಲಿಕ್ ಮಾಡಿ

https://youtu.be/6NpuNWxKd3g

Laali haadu | Jo Jo Jogula | Indian KANNADA Lullaby | Baby music | Sthuthi Bhat | ಜೋಗುಳ ಹಾಡಿಗಾಗಿ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಆ. ಕನ್ನಡದ ಕವಿಗಳ ಭಾವಚಿತ್ರ ಸಂಗ್ರಹಿಸಿ `ಭಾವಚಿತ್ರ ಕೋಶ’ ತಯಾರಿಸಿರಿ.

ಜ್ಞಾನಪೀಠ ಪ್ರಶಸ್ತಿ ಪರಸ್ಕೃತ ಕನ್ನಡಿಗರು